Honor 10X Lite ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ?

By Suvarna News  |  First Published Nov 11, 2020, 4:25 PM IST

ಮೊನ್ನೆಯಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಹಾನರ್ 10 ಎಕ್ಸ್ ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ಹುವಯೀ ಕಂಪನಿ, ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನ್‌ನ್ನು ಬಿಡುಗಡೆ ಮಾಡಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಈ ಫೋನ್ ಬೆಲೆ ಅಂದಾಜು 20 ಸಾವಿರ ರೂಪಾಯಿ ಮೇಲ್ಪಟ್ಟು ಇರಲಿದೆ.
 


ಮತ್ತೊಂದು ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಪರಿಚಯವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿರುವ ಹುವಯೀ ಕಂಪನಿಯ  ಸಬ್ ಬ್ರ್ಯಾಂಡ್ ಹಾನರ್‌ನಿಂದಲೇ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು. 

ಈ ಹೊಸ ಫೋನ್ ಹೆಸರು ಹಾನರ್ 10ಎಕ್ಸ್ ಲೈಟ್ (Honor 10X Lite). ಆದರೆ, ಈ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಪರಿಚಯವಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕಂಪನಿಯೂ ಈ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಹಾಗಾಗಿ,  ಹಾನರ್ ಸ್ಮಾರ್ಟ್‌ಫೋನ್ ಪ್ರಿಯರು ಸ್ವಲ್ಪದಿನದವರೆಗೂ ಈ ಹಾನರ್ 10ಎಕ್ಸ್ ಲೈಟ್ ಫೋನ್‌ಗಾಗಿ ಕಾಯಬೇಕಾಗಬಹುದು.

Tap to resize

Latest Videos

undefined

ಶೀಘ್ರವೇ ಭಾರತದಲ್ಲಿ ಮೋಟೋ G 5G ಬಿಡುಗಡೆ, ಬೆಲೆ 26000 ರೂ.?  

ಈ ಹಿಂದೆ ಹಾನರ್ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿವೆ. ಹಲವು ಬಳಕೆದಾರರು ಈ ಫೋನ್‌ಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಈ ಹೊಸ ಹಾನರ್ 10ಎಕ್ಸ್ ಲೈಟ್ ಫೋನ್ ‌ಬಗ್ಗೆಯೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಬಹುದು. ಈ ಫೋನ್ ಬೆಲೆ ಯುರೋಪಿಯನ್ ಮಾರುಕಟ್ಟೆಯಲ್ಲಿ 229.90 ಯುರೋ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಅಂದಾಜು 20,200 ರೂ.ನಷ್ಟಾಗುತ್ತದೆ ಎಂದು ಹೇಳಬುಹದು.

ಹಾನರ್ 10ಎಕ್ಸ್ ಲೈಟ್ ಸ್ಮಾರ್ಟ್‌ಫೋನ್ ಈ ಹಿಂದೆ ಬಿಡುಗಡೆಯಾದ 9ಎಕ್ಸ್ ಲೈಟ್‌ನ ಮುಂದುವರಿದ ಫೋನ್ ಆಗಿದೆ. ಈ ಫೋನ್ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಪಂಚ್ ಹೋಲ್ ಡಿಸ್‌ಪ್ಲೇ ಮತ್ತು ಕ್ವಾಡ ರಿಯರ್ ಕ್ಯಾಮರಾ ಸೆಟ್ ‌ಅಪ್ ಹೆಚ್ಚು ಗಮನಾರ್ಹವಾಗಿದೆ. ಹಾನರ್ 10ಎಕ್ಸ್ ಲೈಟ್ ನಿಮಗೆ ಎಮರ್ಲಾಡ್ ಗ್ರೀನ್, ಐಸ್ಲ್ಯಾಂಡಿಕ್ ಫ್ರಾಸ್ಟ್, ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯುತ್ತದೆ. ಹಾಗೆಯೇ, ಇತ್ತೀಚಿಗೆ ಹುವಯೀ ಮತ್ತು ಹಾನರ್ ಬ್ರ್ಯಾಂಡ್‌ನಡಿ ಬಿಡುಗಡೆಯಾದ ಎಲ್ಲ ಫೋನ್‌ಗಳ ರೀತಿಯಲ್ಲೂ ಇದರಲ್ಲೂ ಯಾವುದೇ ಗೂಗಲ್ ಸೇವೆಗಳಿರುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ.

ಭಾರತೀಯನ ಮೊಬೈಲ್ ಖರೀದಿಯ ಸರಾಸರಿ ಸಾಮರ್ಥ್ಯ ಎಷ್ಟು ಗೊತ್ತಾ?

4ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಈ ಫೋನ್ ಒಂದೇ ಮಾದರಿಯಲ್ಲಿ ಲಭ್ಯವಿದೆ. ಹೆಚ್ಚಿನ ಮೆಮೋರಿಯನ್ನು ನೀವು ಮೈಕ್ಸೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಈಗಾಗಲೇ ಈ ಫೋನ್ ಮೇಲೆ ಕಂಪನಿ 2,600ರಷ್ಟು ಡಿಸ್ಕೌಂಟ್ ಕೂಡ ಘೋಷಿಸಿದೆ. 

ವಿಶೇಷತೆಗಳೇನು?
ಹಾನರ್ 10ಎಕ್ಸ್ ಲೈಟ್ ಫೋನ್, 1080×2400 ಪಿಕ್ಸೆಲ್ ರೆಸೂಲೇಷನ್‌ನೊಂದಿಗೆ 6.67 ಎಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಧಾರಿತ ಮ್ಯಾಜಿಕ್‌ಯುಐ 3.1 ಆಪ್‌ರೇಟಿಂಗ್ ಸಾಫ್ಟ್‌ವೇರ್ ಸಪೋರ್ಟ್ ಮಾಡುತ್ತದೆ. ಆದರೆ, ಇದರಲ್ಲಿ ಗೂಗಲ್‌ ಪ್ಲೇ ಸ್ಟೋರ್ ಸೇರಿದಂತೆ ಗೂಗಲ್‌ನ ಯಾವುದೇ ಸೇವೆಗಳು ಸೇರ್ಪಡೆಯಾಗಿಲ್ಲ. ಗೂಗಲ್ ಪ್ಲೇ ಸ್ಟೋರ್‌ ಬದಲಿಗೆ ನಿಮಗೆ ಫೋನ್‌ನಲ್ಲಿ ಹುವಯೀ ಆಪ್ ಗ್ಯಾಲರಿಯನ್ನು ಪಡೆದುಕೊಳ್ಳಬಹುದು. 

ಅಕ್ಟಾ ಕೋರ್ ಹೈಸಿಲಿಕಾನ್ ಕಿರಿನ್ 710ಎ ಪ್ರೊಸೆಸರ್ ಒಳಗೊಂಡಿರುವ ಈ ಫೋನ್, 4ಜಿ ರಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹಾನರ್ 10ಎಕ್ಸ್ ಲೈಟ್ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಡ ರಿಯರ್ ಕ್ಯಾಮರಾ ಸೆಟ್‌ ಅಪ್ ಇದ್ದು, ಇದರಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ, 8 ಮೆಗಾಪಿಕ್ಸೆಲ್ ಸೆಕೆಂಡರ್ ಸೆನ್ಸರ್, 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳಿರುವ ಕ್ಯಾಮರೆಗಳನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮರಾ ಕೊಡಲಾಗಿದೆ. 5000 ಎಂಎಚ್ ಬ್ಯಾಟರಿ ಇದ್ದು ಕಂಪನಿಯ 22.5 ವ್ಯಾಟ್ ಸೂಪರ್ ಚಾರ್ಜ್‌ಗೆ ಸಪೋರ್ಟ್ ಮಾಡುತ್ತದೆ. ಹಾಗಾಗಿ ಫಾಸ್ಟ್ ಚಾರ್ಜಿಂಗ್ ನಿರೀಕ್ಷಿಸಬಹುದು.

ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಇನ್ನೂ ಬಿಡುಗಡೆಯಾಗಿಲ್ಲ ಮತ್ತು ಎಂದು ಬಿಡುಗಡೆಯಾಗಲಿದೆ ಎಂಬುದರ ಬಗ್ಗೆಯೂ ಕಂಪನಿಯೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೂ, ಶೀಘ್ರವೇ ಹಾನರ್ 10ಎಕ್ಸ್ ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ನಿರೀಕ್ಷಿಸಬಹುದು.

QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ? 

click me!