Honor 60 SE: iPhone 13 Pro ರೀತಿಯ ಟ್ರಿಪಲ್ ಕ್ಯಾಮೆರಾ ವಿನ್ಯಾಸದೊಂದಿಗೆ ಲಾಂಚ್!

By Suvarna News  |  First Published Feb 8, 2022, 12:56 PM IST

Honor 60 SE ಮಂಗಳವಾರ (ಫೆಬ್ರವರಿ 8) ರಂದು Honor 60 ಸರಣಿಯಲ್ಲಿ ಕಂಪನಿಯ ಇತ್ತೀಚಿನ ಮಾದರಿಯಾಗಿ ಬಿಡುಗಡೆ ಮಾಡಲಾಗಿದೆ. Honor 60 SE ಕ್ಯಾಮೆರಾ ಮಾಡ್ಯೂಲ್ iPhone 13 Pro ಮಾದರಿಗಳಂತೆಯೇ ಕಾಣುತ್ತದೆ


Tech Desk: Honor 60 SE ಮಂಗಳವಾರ (ಫೆಬ್ರವರಿ 8) ರಂದು Honor 60 ಸರಣಿಯಲ್ಲಿ ಕಂಪನಿಯ ಇತ್ತೀಚಿನ ಮಾದರಿಯಾಗಿ ಬಿಡುಗಡೆ ಮಾಡಲಾಗಿದೆ. ಹಾನರ್ ಫೋನ್ 120Hz ಬಾಗಿದ ಡಿಸ್ಪ್ಲೇಯೊಂದಿಗೆ (Curved Display) ಬರುತ್ತದೆ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. Honor 60 SE ಕ್ಯಾಮೆರಾ ಮಾಡ್ಯೂಲ್ iPhone 13 Pro ಮಾದರಿಗಳಂತೆಯೇ ಕಾಣುತ್ತದೆ. Honor 60 SE   ಡಿಸೆಂಬರ್‌ನಲ್ಲಿ ಅನಾವರಣಗೊಳಿಸಲಾದ ಸಾಮಾನ್ಯ Honor 60 ಮತ್ತು Honor 60 Pro ಸೇರ್ಪಡೆಯಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ Honor 50 SE ಗೆ ಸ್ಮಾರ್ಟ್‌ಫೋನಿನ ಅಪ್ಡೇಟ್‌ ಇದಾಗಿದೆ.

Honor 60 SE ಬೆಲೆ, ಲಭ್ಯತೆ: Honor 60 SE ಬೇಸ್ 8GB + 128GB ಸ್ಟೋರೇಜ್ ರೂಪಾಂತರಕ್ಕೆ  CNY 2,199 (ಸುಮಾರು ರೂ. 25,800) ಬೆಲೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಸ್ಟೋರೇಜ್ ಮಾದರಿಯಲ್ಲಿ ಬರುತ್ತದೆ, ಇದರ ಬೆಲೆ CNY 2,499 (ಸುಮಾರು ರೂ. 29,300)ಗೆ ನಿದಿಡಿಸಲಾಗಿದೆ. 

Tap to resize

Latest Videos

undefined

ಇದನ್ನೂ ಓದಿ: Honor Magic V: ಅತ್ಯಂತ ತೆಳ್ಳಗಿನ ವಿನ್ಯಾಸದೊಂದಿಗೆ ಫ್ಲಾಗ್‌ಶಿಪ್ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಲಾಂಚ್‌!

ಲಭ್ಯತೆಯ ಭಾಗದಲ್ಲಿ, Honor 60 SE ಪ್ರಸ್ತುತ ಚೀನಾದ ಹಾನರ್ ಮಾಲ್ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದು ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ, ಮಾರಾಟವು ಫೆಬ್ರವರಿ 18 ರಿಂದ ಪ್ರಾರಂಭವಾಗುತ್ತದೆ. Honor 60 SE ಕಪ್ಪು, ಹಸಿರು ಮತ್ತು ಬಿಳಿ ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. 

ಕಳೆದ ವರ್ಷ, Honor 50 SE ಅನ್ನು 8GB + 128GB ಸ್ಟೋರೇಜ್ ಮಾಡೆಲ್‌ಗಾಗಿ CNY 2,399 (ಸುಮಾರು ರೂ. 28,100) ಮತ್ತು 8GB + 256GB ಸ್ಟೋರೇಜ್ ಆಯ್ಕೆಗಾಗಿ CNY 2,699 (ಸರಿಸುಮಾರು ರೂ. 31,600) ನಲ್ಲಿ ಬಿಡುಗಡೆ ಮಾಡಲಾಯಿತು. Honor 60 SE ಜಾಗತಿಕ ಬಿಡುಗಡೆ ಕುರಿತು ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಹಿಂದಿನ ಬಿಡುಗಡೆ ದಾಖಲೆಗಳನ್ನು ಗಮನಿಸಿದಾಗ ಫೋನ್ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಶೀಘ್ರವೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Honor Magic V: ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!

Honor 60 SE Specifiactions: ಹಾನರ್‌ ಇನ್ನೂ  Honor 60 SEನ ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, Weibo ನಲ್ಲಿ ಪ್ರಕಟವಾದ ಟೀಸರ್ ಫೋನ್ 120Hz ಬಾಗಿದ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಎಂದು ತೋರಿಸುತ್ತದೆ. ಇದು ಪಂಚ್‌ ಹೋಲ್ ವಿನ್ಯಾಸವನ್ನು ಹೊಂದಿದೆ ಮತ್ತು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ. Honor 60 SE ಕೂಡ 66W ವೇಗದ ಚಾರ್ಜಿಂಗ್ ಬೆಂಬಲ ಮತ್ತು 5G ಸಂಪರ್ಕವನ್ನು ಹೊಂದಿದೆ ಲೀಕ್‌ಗಳು ತಿಳಿಸಿವೆ.

GIA-AN00 ಮಾದರಿ ಸಂಖ್ಯೆ ಹೊಂದಿರುವ Honor ಫೋನ್‌ನ Geekbench ಪಟ್ಟಿಯನ್ನು ಆಧರಿಸಿದ ಇತ್ತೀಚಿನ ವರದಿಯು Honor 60 SE ಆಕ್ಟಾ-ಕೋರ್ MediaTek Dimensity 900 SoC ಯೊಂದಿಗೆ ಬರುತ್ತದೆ ಎಂದು ಸೂಚಿಸಿದೆ. ಜತೆಗೆ ಕಸ್ಟಮ್ ಸ್ಕಿನ್‌ನೊಂದಿಗೆ ಫೋನ್ ಆಂಡ್ರಾಯ್ಡ್ 11 ನಲ್ಲಿ ರನ್ ಆಗುತ್ತದೆ ಎಂದು ವರದಗಳು ತಿಳಿಸಿವೆ.

click me!