Samsung Galaxy A53: ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನ್ ಇಮೇಜ್, ವಿಶೇಷತೆಗಳ ಮಾಹಿತಿ ಸೋರಿಕೆ!

By Suvarna News  |  First Published Feb 5, 2022, 12:45 PM IST

*ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಮಧ್ಯಮವ್ಯಾಪ್ತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ
*ಬಿಡುಗಡೆ ಮುನ್ನವೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 ಇಮೇಜ್, ವಿಶೇಷತೆ ಬಹಿರಂಗವಾಯಿತು.
*ಈ ಫೋನ್‌ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇಲ್ಲ, ಶೀಘ್ರವೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ


Tech Desk: ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಎನಿಸಿಕೊಂಡಿರುವ ಸ್ಯಾಮ್ಸಂಗ್  ಭಾರತೀಯ ಮಾರುಕಟ್ಟೆಗೆ ಮೂರು ಸ್ಮಾರ್ಟ್‌ಫೋನ್ ರಿಲೀಸ್ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಗೊತ್ತಿರುವಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 (Samsung Galaxy A53), ಸ್ಯಾಮ್ಸಂಗ್ ಎ33 (Samsung Galaxy A33) ಸ್ಮಾರ್ಟ್‌ಫೋನ್‌ಗಳು ಕಂಪನಿಯ ಭಾರತೀಯ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಜತೆಗೆ ಈ ಎರಡೂ ಫೋನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಈಗ ಮತ್ತೆ ಫೋನ್‌ನ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳ ಮಾಹಿತಿಯೂ ಸೋರಿಕೆಯಾಗಿದ್ದು, ಕುತೂಹಲ ಹೆಚ್ಚಾಗಿದೆ

. ಇದೇ ವೇಳೆ, ಕೆಲವು ಮೂಲಗಳ ಪ್ರಕಾರ, ಕಂಪನಿಯ ಸ್ಯಾಮ್ಸಂಗ್ ಗ್ಯಾಲಕ್ಸಿ ಎ73 5ಜಿ (Samsung Galaxy A73 5G) ಸ್ಮಾರ್ಟ್‌ಫೋನ್ ಕೂಡ ಬ್ಯೂರೋ ಆಫ್ ಸ್ಟ್ಯಾಂಡರ್ಡ್(BIS) ಸರ್ಟಿಫಿಕೇಷನ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ, ಸ್ಯಾಮ್ಸಂಗ್ ಕಂಪನಿಯು ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಮಧ್ಯಮ ವ್ಯಾಪ್ತಿಯ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಈ ಫೋನುಗಳ ಸಂಬಂಧಿಸಿದ ಮಾಹಿತಿಯು ಸೋರಿಕೆಯಾಗಿರುವುದು ಬಳಕೆದಾರರಲ್ಲಿ ಸಾಕಷ್ಟು ಕುತೂಹಲವೂ ಹೆಚ್ಚಾಗಿದೆ.

Tap to resize

Latest Videos

undefined

ಇದನ್ನೂ ಓದಿ: Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?

ಹೇಗಿದೆ ವಿನ್ಯಾಸ?: ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 (Samsung Galaxy A53)ಗೆ ಸಂಬಂಧಿಸಿದ ಇಮೇಜ್‌ಗಳನ್ನು ಜರ್ಮನಿಯ winfuture.de ವೆಬ್‌ಸೈಟ್‌ನಿಂದ ಗೊತ್ತಾಗಿವೆ. ಜೊತೆಗೆ, ಈ ಫೋನಿನ ಬಣ್ಣಗಳ ಆಯ್ಕೆಯ ಮಾಹಿತಿಯನ್ನು ಷೇರ್ ಮಾಡಿಕೊಳ್ಳಲಾಗಿದ್ದು, ಈ ಫೋನು ಕಪ್ಪು ಮತ್ತು ಬಿಳಿಯ ಬಣ್ಣಗಳಲ್ಲಿ ದೊರೆಯಲಿದೆ. ವಿನ್ಯಾಸದ ಬಗ್ಗೆ ಸೋರಿಕೆಯಾಗಿದ್ದು, ಸ್ಯಾಮ್ಸಂಗ್ ಎ52 (Samsung A52) ರೀತಿಯಲ್ಲೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 (Samsung Galaxy A53) ವಿನ್ಯಾಸ ಹೋಲಿಕೆಯನ್ನು ಹಂಚಿಕೊಂಡಿದೆ ಎನ್ನಲಾಗುತ್ತಿದೆ. ಹಳೆಯ ಫೋನಿಗೆ ಹೋಲಿಸಿದರೆ, ಹೊಸ ಫೋನಿನ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬದಲಿಸಲಾಗಿರುವುದು ತಿಳಿಯುತ್ತದೆ. ಸೋರಿಕೆಯಾಗಿರುವ ಇಮೇಜ್‌ನಲ್ಲಿ ಈ ಫೋನಿನ ಬಲಭಾಗಕ್ಕೆ  ಪವರ್ ಬಟನ್ ಮತ್ತು ವ್ಯಾಲೂಮ್ ಬಟನ್‌ಗಳಿರುವುದು ಗೊತ್ತಾಗುತ್ತದೆ.

ಮತ್ತೇನು ವಿಶೇಷತೆ?: ಕೆಲವು ಮೂಲಗಳ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎ33 ಫೋನ್, ಫುಲ್ ಎಚ್‌ಡಿ 6.5 ಇಂಚ್ ಸೂಪರ್ ಅಮೋಎಲ್ಇಡಿ ಡಿಸ್‌ಪ್ಲೇಯೊಂದಿಗೆ ಬರಲಿದೆ.  ಸ್ಯಾಮ್ಸಂಗ್ Samsung Exynos 1200 ಪ್ರೊಸೆರ್ ಇರಲಿದೆ. ಇದನ್ನು 6 ಜಿಬಿ ಅಥವಾ 8 ಜಿಬಿ RAMನೊಂದಿಗೆ ಸಂಯೋಜಿಸಲಾಗಿರುತ್ತದೆ.  ಇನ್ನು ಈ ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು ಅದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ:  Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ಕ್ಯಾಮೆರಾ ಹೇಗಿದೆ?: ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಸೆನ್ಸರ್ ಇದ್ದು, ಅಲ್ಟ್ರಾ ವೈಡ್  ಲೆನ್ಸ್‌ನೊಂದಿಗೆ ಸಂಯೋಜಿಸಲಾಗಿದೆ. ಹಾಗಾಯೇ 5 ಮೆಗಾ ಪಿಕ್ಸೆಲ್ ಎರಡು ಮೈಕ್ರೋ ಮತ್ತು ಡೆಪ್ತ್ ಕ್ಯಾಮೆರಾಗಳನ್ನು ನೋಡಬಹುದಾಗಿದೆ.  ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಕಂಪನಿಯು 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಈ ಸ್ಮಾರ್ಟ್‌ಪೋನ್‌ನಲ್ಲಿ ಕಂಪನಿಯು 5000 mAh ಸಾಮರ್ಥ್ಯದ  ಬ್ಯಾಟರಿಯನ್ನು ನೀಡಲಿದೆ. ಇದು 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ. ಅಂಡ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು, 5ಜಿ, ಬ್ಲೂಟೂತ್, ವೈ  ಫೈ ಮತ್ತು ಎನ್‌ಎಫ್‌ಸಿ ಈ ಫೋನ್ ಸಪೋರ್ಟ್ ಮಾಡಲಿದೆ ಎಂದು ಸೋರಿಕೆಯಾದ ಮಾಹಿತಿಯಿಂದ ಗೊತ್ತಾಗಿದೆ. ಗೀಕ್ ಬೆಂಚ್ , ಮೈಸ್ಮಾರ್ಟ್ ಪ್ರೈಸ್ ಸೇರಿದಂತೆ ಇನ್ನೂ ಹಲವು ತಾಣಗಳು ಇದೇ ರೀತಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದು, ಬಳಕೆದಾರರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

click me!