ಮುಂದಿನ ವಾರ ನೋಕಿಯಾ 2.4 ಬಜೆಟ್ ಫೋನ್ ಬಿಡುಗಡೆ..!

By Suvarna News  |  First Published Nov 17, 2020, 6:02 PM IST

ಎಚ್ಎಂಡಿ ಗ್ಲೋಬಲ್ ಅಧೀನದಲ್ಲಿರುವ ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 2.4 ಮತ್ತು 3.4 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ದಿನಾಂಕವನ್ನು ಖಚಿತಪಡಿಸಿದೆ. ಬಜೆಟ್‌ ಫೋನ್‌ಗಳಾಗಿರುವ ಈ ಸ್ಮಾರ್ಟ್‌ಫೋನ್‌ಗಳನ್ನು ಎರಡು ತಿಂಗಳ ಹಿಂದೆ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. 
 


ಫೀಚರ್‌ ಫೋನ್‌ಗಳ ಜಮಾನದಲ್ಲಿ ಭಾರತೀಯ ಮಾರುಕಟ್ಟೆಯನ್ನೇ ಆವರಿಸಿಕೊಂಡಿದ್ದ ನೋಕಿಯಾ  ಸ್ಮಾರ್ಟ್‌ಫೋನ್‌ಗಳ ಮೂಲಕ ಮತ್ತೆ ತನ್ನ ಎಂದಿನ ಸ್ಥಿತಿಯನ್ನು ಸಂಪಾದಿಸುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ ಇದೇ ತಿಂಗಳು 26ರಂದು ಭಾರತೀಯ ಮಾರುಕಟ್ಟೆಗೆ  ನೋಕಿಯಾ 3.4 ಮತ್ತು ನೋಕಿಯಾ 2.4 ಎಂಬೆರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಹೊರಟಿದೆ. 

ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸಂಬಂಧ ನೋಕಿಯಾ ಒಡೆತನ ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಕಂಪನಿ, ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ದಾಖಲಿಸಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಈಗಾಗಲೇ ಯುರೋಪ್ ಮಾರುಕಟ್ಟೆಗೆ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

Tap to resize

Latest Videos

undefined

ಮುಂದಿನ ವರ್ಷ Realme X7 ಸೀರಿಸ್ 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ

ಕ್ಷಣಗಣನೆ ಆರಂಭವಾಗಿದೆ. ದೊಡ್ಡ ಮಾಹಿತಿ ಬಹಿರಂಗೊಳ್ಳಲು ಇನ್ನು 10 ದಿನವಷ್ಟೇಬಾಕಿ ಉಳಿದಿದೆ. ಕಾಯ್ತಾ ಇರಿ. #ನಿಮಗೆ ಬೇಕಿರುವ ಗ್ಯಾಜೆಟ್ ಎಂದು ನೋಕಿಯಾ ಮೊಬೈಲ್ ಇಂಡಿಯಾ ಟ್ವಿಟರ್‌ನಲ್ಲಿ ಶಾರ್ಟ್ ಟೈಮ್ ವಿಡಿಯೋವೊಂದನ್ನು ಸೋಮವಾರ ಪೋಸ್ಟ್ ಮಾಡಿದೆ. ಈ ಮೂಲಕ ನೋಕಿಯಾ 3.4 ಮತ್ತು ನೋಕಿಯಾ 2.4 ಸ್ಮಾರ್ಟ್‌ಫೋನ್‌ಗಳು ನವೆಂಬರ್ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವುದನ್ನು ಖಚಿತಪಡಿಸಲಾಗಿದೆ.
 
ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 2.4 ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಕಂಪನಿ ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ, ಯುರೋಪಿಯನ್ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಅಂದಾಜು 119 ಯುರೋ ಇದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 10,500 ರೂಪಾಯಿಯಾಗುತ್ತದೆ. ಈ ಫೋನ್ ಮೂರು ಮಾದರಿಯ ಬಣ್ಣಗಳಲ್ಲಿ ದೊರೆಯುತ್ತದೆ. ಜೊತೆಗೆ ಈ ನೋಕಿಯಾ 2.4 ಫೋನ್ ನಿಮಗೆ  2ಜಿಬಿ ರಾಮ್ ಮತ್ತು 32 ಜಿಬಿ ಸ್ಟೋರೇಜ್ ಹಾಗೂ 3ಜಿಬಿ ರಾಮ್ ಹಾಗೂ 64 ಜಿಬಿ ಸ್ಟೋರೇಜ್‌ಗಳ ಎರಡು ಮಾದರಿಯ ಆಯ್ಕೆಗಳಲ್ಲಿ ದೊರೆಯಲಿದೆ. 

ಆಕರ್ಷಕ ಬೆಲೆ: ಭಾರತದಲ್ಲಿ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ

ನೋಕಿಯಾ 2.4 ಫೋನ್ ಡುಯಲ್ ಸಿಎಂ ಸ್ಲಾಟ್ ಹೊಂದಿದೆ. ಆಂಡ್ರಾಯ್ಡ್ 10 ಆಪರೇಟಿಂಗ್ ಸಾಫ್ಟ್‌ವೇರ್ ಆಧಾರಿತವಾಗಿರುವ ಈ ಫೋನ್ ಎಚ್‌ಡಿ ಪ್ಲಸ್ 6.5 ಇಂಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.3ಜಿಬಿ ರ್ಯಾಮ್‌ನೊಂದಿಗೆ ಅಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 ಎಸ್ಒಸಿ ಮೈಕ್ರೋ ಪ್ರೊಸೆಸರ್‌ ಈ ಫೋನ್‌ನಲ್ಲಿದೆ. ಕ್ಯಾಮರಾ ವಿಷಯದಲ್ಲಿ ಈ ಫೋನ್ ಹೆಚ್ಚು ಗಮನ ಸೆಳೆಯುತ್ತದೆ. ಫೋನ್‌ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಕ್ಯಾಮರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ, ಡೆಪ್ತ್ ಸೆನ್ಸರ್ ಕ್ಯಾಮಾರಗಳ ಸೆಟ್‌ಅಪ್ ಹೊಂದಿದೆ. ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಕಂಪನಿ 5 ಮೆಗಾಪಿಕ್ಸೆಲ್ ಕ್ಯಾಮರಾ ಅಳವಡಿಸಿದೆ.

ಭಾರತದಲ್ಲಿ ಮತ್ತೆ ಟಿಕ್ ‌ಟಾಕ್ ಕಾರುಬಾರು ಶುರುವಾಗತ್ತಾ? 

ನೋಕಿಯಾ 2.4 ಫೋನ್‌ನಲ್ಲಿ ನಿಮಗೆ 64ಜಿಬಿ ಫೋನ್ ಆಯ್ಕೆ ಕೂಡ ಇದೆ. ಮತ್ತು ಅದನ್ನು ಸ್ಟೋರೇಜ್ ಅನ್ನು ನೀವು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ವಿಸ್ತರಣೆ ಕೂಡ ಮಾಡಿಕೊಳ್ಳಬಹುದು. 4,500ಎಂಎಚ್ ಸಾಮರ್ಥ್ಯದ ಬ್ಯಾಟರಿ ಕೊಡಲಾಗಿದೆ. ಜೊತೆಗೆ, 4ಜಿ ಎಲ್‌ಟಿಇ, ಎಫ್ಎಂ ರೆಡಿಯೋ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ. 

ನೋಕಿಯಾ 2.4 ಫೋನ್ ಬೆಲೆ ಅಂದಾಜು 10 ಸಾವಿರ ಮೇಲ್ಪಟ್ಟು ಇರುವುದರಿಂದ ಇದೊಂದು ಬಜೆಟ್ ಫೋನ್ ಎಂದು ಹೇಳಬಹುದು. ಕಡಿಮೆ ವೆಚ್ಚದಲ್ಲಿ ಬ್ರಾಂಡೆಡ್ ಸ್ಮಾರ್ಟ್‌ಫೋನ್ ಬೇಕೆನ್ನುವವರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಬಹುದು. 

click me!