ನೀವು ಖರೀದಿಸಬಹುದಾದ 5 ಅತ್ಯುತ್ತಮ ಪವರ್ ಬ್ಯಾಂಕ್!

By Suvarna NewsFirst Published Sep 13, 2020, 7:05 PM IST
Highlights

ಕೊರೋನಾ ವಕ್ಕರಿಸಿದ ಬಳಿಕ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲಾಗಿದೆ. ಹಲವರು ತಮ್ಮ ತಮ್ಮ ಊರುಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಕಾಡುವ ದೊಡ್ಡ ಸಮಸ್ಯೆ ವಿದ್ಯುತ್. ಫೋನ್ ಚಾರ್ಜ್ ಇರಲ್ಲ, ವಿದ್ಯುತ್ ಸರಿಯಾಗಿ ಇರಲ್ಲ. ಇನ್ನು ಹೆಚ್ಚಾಗಿ ಪ್ರಯಾಣ ಮಾಡುವರಿಗೆ ಫೋನ್ ಚಾರ್ಜಿಂಗ್ ಸಮಸ್ಯೆಯಾಗಿದೆ. ಹೀಗಾಗಿ ಪವರ್ ಬ್ಯಾಂಕ್ ಅತ್ಯುತ್ತಮ. ಇಲ್ಲಿ ಟಾಪ್ 5 ಪವರ್ ಬ್ಯಾಂಕ್ ಮಾಹಿತಿ ನೀಡಲಾಗಿದೆ.

ಬೆಂಗಳೂರು(ಸೆ.12): ಫೋನ್ ಹೆಚ್ಚಾಗಿ ಬಳಕೆ ಮಾಡುವವರು, ದೂರ ಪ್ರಯಾಣ ಮಾಡುವವರು, ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗೆ ಫೋನ್ ಚಾರ್ಜಿಂಗ್ ಮಾಡಲು ಪವರ್ ಬ್ಯಾಂಕ್ ಅವಶ್ಯಕ. ಕೊರೋನಾ ವಕ್ಕರಿಸಿದ ಬಳಿ ಪವರ್ ಬ್ಯಾಂಕ್ ಅವಶ್ಯಕತೆ ಹಲವರಿಗೆ ಹೆಚ್ಚಾಗಿದೆ. ಪವರ್ ಬ್ಯಾಂಕ್ ಖರೀದಿಸಲು ಮುಂದಾಗಿದ್ದರೆ, ಇಲ್ಲಿ ಅತ್ಯುತ್ತಮ 5 ಪವರ್ ಬ್ಯಾಂಕ್ ಕುರಿತ ಮಾಹಿತಿ ನೀಡಲಾಗಿದೆ.

ಪವರ್‌ ಬ್ಯಾಂಕ್‌ ಕುರಿತು ತಿಳಿದಿರಬೇಕಾದ 10 ಅಂಶಗಳು!.

Mi 20000mAH ಪವರ್ ಬ್ಯಾಂಕ್ 2i
Mi 20000mAH ಲಿ ಪಾಲಿಮರ್ ಪವರ್ ಬ್ಯಾಂಕ್ 2i ಕಪ್ಪು ಬಣ್ಮ ಹೊಂದಿದ್ದು, 14.2mm ಸ್ಲಿಮ್ ಆಗಿದೆ. ಮೆಟಾಲಿಕ್ ಫಿನೀಶಿಂಗ್ ಹೊಂದಿರುವ ಈ ಪವರ್ ಬ್ಯಾಂಕ್ 430 ಗ್ರಾಂ ತೂಕವಿದೆ. ಈ ಪವರ್ ಬ್ಯಾಂಕ್ ಸಂಪೂರ್ಣ ಚಾರ್ಜ್‌ಗೆ 6 ರಿಂದ 7 ಗಂಟೆ ಸಮಯ ತೆಗೆದುಕೊಳ್ಳಲಿದೆ. 3000mAh ಬ್ಯಾಟರಿ ಹೊಂದಿರುವ ಫೋನ್ 4 ಬಾರಿ ಹಾಗೂ 4000mAh ಬ್ಯಾಟರಿ ಹೊಂದಿರುವ ಫೋನ್ ಅನ್ನು 3 ಬಾರಿ ಚಾರ್ಜ್ ಮಾಡಬಹುದು.

ಅಲ್ಟ್ರಾ ಸ್ಲಿಮ್, ಲೈಟ್ ವೈಟ್ ಪವರ್ ಬ್ಯಾಂಕ್, 10000mAh ಬೆಲೆ 899 ಮಾತ್ರ!

Realme 10000mAH ಪವರ್ ಬ್ಯಾಂಕ್
10000mAh ಲಿಥಿಯಂ ಪಾಲಿಮರ್ ಬ್ಯಾಟರಿ ಹೊಂದಿರುವ Realme 10000mAH ಪವರ್ ಬ್ಯಾಂಕ್  3 ರಿಂದ 4 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಇದರಲ್ಲಿ 18-Watt ಟು ವೇ ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಲಭ್ಯವಿದೆ.

Ambrane PP-150 15000mAh ಪವರ್ ಬ್ಯಾಂಕ್
Ambrane's PP-150 15000mAh ಲಿ-ಪಾಲಿಮರ್ ಪವರ್ ಬ್ಯಾಂಕ್ ಯು ಶೇಪ್ ಹೊಂದಿದೆ. PP-150 ಪವರ್ ಬ್ಯಾಂಕ್ 2A ವಾಲ್ ಚಾರ್ಜರ್ ಮೂಲಕ ಸಂಪೂರ್ಣ ಚಾರ್ಜ್ಗೆ 10 ಗಂಟೆ ಸಮಯ ತೆಗೆದುಕೊಳ್ಳಲಿದೆ. 2 ಇನ್‌ಪುಟ್ ಪೋರ್ಟ್ ಹೊಂದಿದ್ದು, ಮೈಕ್ರೋ ಅಥಾವ ಸಿ ಕೇಬಲ್ ಮೂಲಕ ಚಾರ್ಜ್ ಮಾಡಿಕೊಳ್ಳಬುಹುದು.

Samsung B-P1100BSNGIN ಪವರ್ ಬ್ಯಾಂಕ್
 B-P1100BSNGIN ಪವರ್ ಬ್ಯಾಂಕ್ ಲಿಥಿಯಂ ಐಯಾನ್ ಬ್ಯಾಟರಿ 10000mAh ಸ್ಯಾಮರ್ಥ್ಯ ಹೊಂದಿದೆ. ಇದರ ತೂಕ 222 ಗ್ರಾಂ. ಡ್ಯುಯೆಲ್ USB ಪೋರ್ಟ್ ಹೊಂದಿದೆ.

Ambrane Capsule 10k ಪವರ್ ಬ್ಯಾಂಕ್
ಹೈಗ್ರೇಡ್ ABS ಪ್ಲಾಸ್ಟಿಕ್ ಮೆಟಿರಿಯಲ್‌ನಿಂದ ಬಾಡಿ ನಿರ್ಮಿಸಲಾಗಿದ್ದು, 188.7g ತೂಕವಿದೆ. 10000mAh ಲಿ ಪಾಲಿಮರ್ ಬ್ಯಾಟರಿ ಹೊಂದಿದೆ. 2A ವಾಲ್ ಚಾರ್ಜರ್ ಮೂಲಕ ಸಂಪೂರ್ಣ ಚಾರ್ಜ್‌ಗೆ 5 ರಿಂದ 7 ಗಂಟೆ ಸಮಯ ತೆಗೆದುಕೊಳ್ಳಲಿದೆ. ಗರಿಷ್ಠ ಚಾರ್ಜಿಂಗ್ ಒದಗಿಸಲಿದೆ. ದೂರ ಪ್ರಯಾಣ ಸೇರಿದಂತೆ ಹಲವು ಅವಶ್ಯಕತೆಗಳಲ್ಲಿ ಫೋನ್ ಚಾರ್ಜ್ ಮಾಡಿಕೊಳ್ಳಲು ಸಹಾಯವಾಗಲಿದೆ.

click me!