ಆ್ಯಪಲ್ iPhone 12 ಬಿಡುಗಡೆಗೆ ಕೌಂಟ್‌ಡೌನ್; ಇದು Appleನ ಮೊದಲ 5G ಫೋನ್!

By Suvarna NewsFirst Published Sep 8, 2020, 6:13 PM IST
Highlights

ಆ್ಯಪಲ್ iPhone 12 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೀಗ ಎಲ್ಲೆಡೆ  iPhone 12 ವಿಶೇಷತೆ, ಭಿನ್ನತೆ ಹಾಗೂ ಫೀಚರ್ಸ್ ಕುರಿತು ಚರ್ಚೆಗಳು ನಡೆಯುತ್ತಿದೆ. ಇದು ಆ್ಯಪಲ್ ಬಿಡುಗಡೆ ಮಾಡುತ್ತಿರುವ ಮೊದಲ 5G ಫೋನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನೂತನ  iPhone 12 ವಿಶೇಷತೆಗಳೇನು? 

ನವದೆಹಲಿ(ಸೆ.08): ಅತ್ಯಾಧುನಿಕ ತಂತ್ರಜ್ಞಾನ ಹಲವು ವಿಶೇಷತೆಗಳೊಂದಿಗೆ ಆ್ಯಪಲ್ iPhone 12 ಬಿಡುಗಡೆಯಾಗುತ್ತಿದೆ.  ನಾಲ್ಕು ವೇರಿಯೆಂಟ್‌ನೊಂದಿಗೆ ನೂತನ ಆ್ಯಪಲ್ iPhone 12 ಮಾರುಕಟ್ಟೆ ಪ್ರವೇಶಿಸಲಿದೆ. 4 ವೇರಿಯೆಂಟ್ ಪೋನ್‌ಗಳ ಸ್ಕ್ರೀನ್‌ನಲ್ಲೂ ವತ್ಯಾಸವಿದೆ. 5.4 ಇಂಚಿನಿಂದ 6.7 ಇಂಚಿನ ಸ್ಕ್ರೀನ್ ವ್ಯತ್ಯಾಸವಾಗಲಿದೆ.

ಕರ್ನಾಟಕದಲ್ಲಿ iPhone 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ!

4 ವೇರಿಯೆಂಟ್ ಆ್ಯಪಲ್ iPhone 12 ಫೋನ್‌ಗಳು OLED ಡಿಸ್‌ಪ್ಲೇ ಹೊಂದಿದೆ.  ಆ್ಯಪಲ್ iPhone 12 ಫೋನ್ ಡಿಸ್‌ಪ್ಲೇ
iPhone 12 ಫೋನ್ 5.4 ಇಂಚಿನ ಡಿಸ್‌ಪ್ಲೇ 
iPhone 12 Max/Plus ಫೋನ್   6.1 ಇಂಚಿನ ಡಿಸ್‌ಪ್ಲೇ 
iPhone 12 Pro ಫೋನ್  6.1 ಇಂಚಿನ ಡಿಸ್‌ಪ್ಲೇ 
iPhone 12 Pro ಫೋನ್  6.7 ಇಂಚಿನ ಡಿಸ್‌ಪ್ಲೇ 

ಕ್ಯಾಮರ ವಿಶೇಷತೆ:
ನೂತನ ಆ್ಯಪಲ್ 12 ಫೋನ್ A14 ಬಯೋನಿಕ್ ಪ್ರೊಸೆಸರ್ ಜೊತೆಗೆ iOS 14 ಹೊಂದಿದೆ. ಐಫೋನ್ 11 ಕ್ಯಾಮಾರ ಫೀಚರ್ಸ್ ಕೂಡ ಇದರಲ್ಲಿ ಇರಲಿದೆ.  iPhone 12 ಹಾಗೂ 12 Plus/Max ಫೋನ್ ಡ್ಯುಯೆಲ್ ಕ್ಯಾಮರ ಹೊಂದಿದ್ದರೆ,  iPhone 12 Pro ಹಾಗೂ Pro Max ಟ್ರಿಪಲ್ ಕ್ಯಾಮರ ಹೊಂದಿದೆ.ಇದರ ಜೊತೆಗೆ ಡೆಪ್ತ್ ಸೆನ್ಸಾರ್ ಕೂಡ ಲಭ್ಯವಿದೆ. ಇನ್ನ 4K ವಿಡಿಯೋ ರೆಕಾರ್ಡಿಂಗ್ (120/240fps) ಮೂಲಕ ಹೈ ರಸಲ್ಯೂಶನ್ ಸ್ಲೋ ಮೋಶನ್ ವಿಡಿಯೋ ತೆಗೆಯಬಹುದಾಗಿದೆ.

ಆ್ಯಪಲ್ iPhone 12 ಬೆಲೆ 47,969 ರೂಪಾಯಿಯಿಂದ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.  iPhone 12  Pro Max ಫೋನ್ ಬೆಲೆ 1,00,000 ರೂಪಾಯಿ.

ಇನ್ನು 128GB ಹಾಗೂ 512GB ಸ್ಟೋರೇಜ್ ಆಯ್ಕೆಗಳು ಲಭ್ಯವಿದೆ. 
 

click me!