ಭಾರತದ ಮಿತ್ರೊನ್ ಆ್ಯಪ್ ಡಿಲೀಟ್ ಮಾಡಿದ ಗೂಗಲ್ ; ಇದರ ಮೂಲ ಪಾಕಿಸ್ತಾನ!

By Suvarna NewsFirst Published Jun 2, 2020, 9:01 PM IST
Highlights

ಚೀನಾದ  ಆ್ಯಪ್‌ಗೆ ಬದಲಾಗಿ ಭಾರತದ ಆ್ಯಪ್‌ಗಳನ್ನೇ ಬಳಸಿ ಎಂಬ ಅಭಿಯಾನಗಳು ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ  ಭಾರತದ ಮಿತ್ರೊನ್ ಆ್ಯಪ್ ಬಿಡುಗಡೆಯಾಗಿತ್ತು.  ಕೆಲ ದಿನಗಳಲ್ಲೇ ಆ್ಯಪ್ ಭರ್ಜರಿ ಯಶಸ್ಸು ಸಾಧಿಸಿತ್ತು. ಇದೀಗ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಲಾಗಿದೆ. ಕಾರಣ ಗ್ರಾಹಕರ ಸೆಕ್ಯೂರಿಟಿ ಸಮಸ್ಯೆ.

ನವದೆಹಲಿ(ಜೂ.02): ಚೀನಾದ ಟಿಕ್‌ಟಾಕ್ ಆ್ಯಪ್‌ಗೆ ಬದಲಾಗಿ ಮಿತ್ರೊನ್ ಆ್ಯಪ್ ಭಾರತದಲ್ಲಿ 50 ಲಕ್ಷ ಡೌನ್ಲೋಡ್ ಮೂಲಕ ದಾಖಲೆ ಬರೆದಿದೆ. ಅದರಲ್ಲೂ ಬ್ಯಾನ್ ಟಿಕ್‌ಟಾಕ್ ಆ್ಯಪ್ ಅಭಿಯಾನದಿಂದ ಮಿತ್ರೊನ್ ಆ್ಯಪ್‌ಗೆ ಮತ್ತಷ್ಟು ವೇಗ ಸಿಕ್ಕಿತ್ತು. ಉತ್ತುಂಗದಲ್ಲಿದ್ದ ಮಿತ್ರೊನ್ ಆ್ಯಪ್‌ನ್ನು ಗೂಗಲ್ ಡಿಲೀಟ್ ಮಾಡಿದೆ. ಗ್ರಾಹಕರ ವೈಯುಕ್ತಿ ದಾಖಲೆಗಳನ್ನು ಸೋರಿಕೆ ಮಾಡುತ್ತಿದೆ. ಹಾಗೂ ಸೆಕ್ಯೂರಿಟಿ ಸಮಸ್ಯೆಯಿಂದ ಗೂಗಲ್ ಆ್ಯಪನ್ನು ಡಿಲೀಟ್ ಮಾಡಿದೆ.

ಮೊಬೈಲ್‌ನಲ್ಲಿ ಚೀನಾ ಆ್ಯಪ್ ಪತ್ತೆ ಹಚ್ಚುತ್ತೆ ಭಾರತದ ಈ ಆ್ಯಪ್; 2 ವಾರದಲ್ಲಿ 10 ಲಕ್ಷ ಡೌನ್ಲೋಡ್!.

ನಿಮ್ಮ ಫೋನ್‌ಗಳಲ್ಲಿ ಮಿತ್ರೊನ್ ಆ್ಯಪನ್ನು ಇದ್ದರೆ ಡಿಲೀಟ್ ಮಾಡುವುದು ಒಳಿತು. ಇದಕ್ಕೆ ಹಲವು ಕಾರಣಗಳಿದೆ. ಆ್ಯಪ್ ಮಾಲೀಕ ಶಿಬಾಂಕ್ ಅಗರ್ವಾಲ್, ಮಿತ್ರೋನ್ ಆ್ಯಪ್ ಮೂಲ ಕೋಡ್‌ಗಳನ್ನು ಪಾಕಿಸ್ತಾನದ ಮೂಲದ ಕೋಡಿಂಗ್ ಕಂಪನಿ ಕ್ಯೂಬಕ್ಸಸ್( Qboxus) ನಿಂದ ಖರೀದಿಸಿದ್ದಾರೆ. ಬಳಿಕ ಕೆಲ ಬದಲಾವಣೆ, ಕೋಡಿಂಗ್ ಮಾಡಿ ಮಿತ್ರೊನ್ ಹೆಸರಿಟ್ಟು ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. 

Whatsapp ಬಳಕೆದಾರರೇ ಹುಷಾರ್, ನಿಮಗಿದು 'ಹ್ಯಾಕ್’ಟಿಕ್!.

ಪಾಕಿಸ್ತಾನ ಕಂಪನಿಯಿಂದ ಕೋಡಿಂಗ್ ಖರೀದಿಸಿರುವುದನ್ನು ಲಾಹೋರ್‌ನಲ್ಲಿರುವ ಕ್ಯೂಬಕ್ಸಸ್ ಕಂಪನಿ ಮಾಲೀಕ ಇರ್ಫಾನ್ ಶೇಕ್ ಖಚಿತಪಡಿಸಿದ್ದಾರೆ. ಇಷ್ಟೇ ಅಲ್ಲ ನಾವು ಮಾಡಿದ ಕೋಡಿಂಗ್‌ನಲ್ಲಿ ಸೆಕ್ಯೂರಿಟಿ ಸಮಸ್ಯೆ ಇತ್ತು. ಗ್ರಾಹಕರ ವೈಯುಕ್ತಿ ಮಾಹಿತಿ ಸೋರಿಗೆ ಸಂಭವವಿತ್ತು ಎಂದು ಹೇಳಿದ್ದಾರೆ.

ಗ್ರಾಹಕರ ವೈಯುಕ್ತಿಕ ದಾಖಲೆ, ಮಾಹಿತಿಗೆ ಭದ್ರತೆ ಇಲ್ಲದಿದ್ದರೆ ಇಂತಹ ಆ್ಯಪ್ ಬಳಕೆಗೆ ಯೋಗ್ಯವಲ್ಲ. ಇಷ್ಟೇ ಅಲ್ಲ ಇದರ ಮೂಲ ಪಾಕಿಸ್ತಾನದಲ್ಲಿರುವುದರಿಂದ ಭಾರತದಲ್ಲಿ ಮಿತ್ರೋನ್ ಆ್ಯಪ್ ಡೌನ್ಲೋಡ್ ಮಾಡಿಕೊಂಡವರು ಡಿಲೀಟ್ ಮಾಡುವುದು ಉತ್ತಮ ಎಂದು ಸೈಬರ್ ಸೆಕ್ಯೂರಿಟಿ ಸಂಶೋಧಕ ಸತ್ಯಜಿತ್ ಸಿನ್ಹ ಹೇಳಿದ್ದಾರೆ.

click me!