2 ಕೋಟಿ ಫೋನ್‌ಗೆ ವೈರಸ್ ಹಾಕಿಟ್ಟ ಚೀನಾ ಮೊಬೈಲ್ ಕಂಪನಿ ಜಿಯೋನಿ!

By Suvarna News  |  First Published Dec 7, 2020, 7:23 AM IST

2.1 ಕೋಟಿ ಮೊಬೈಲ್‌ಗಳಿಗೆ ಮಾಲ್‌ವೇರ್‌ ಬಿಟ್ಟಜಿಯೋನಿ|  ಜಾಹೀರಾತು ಹಣಕ್ಕಾಗಿ ಚೀನಿ ಮೊಬೈಲ್‌ ಕಂಪನಿ ಅಕ್ರಮ


ಬೀಜಿಂಗ್‌(ಡಿ.,07): ಚೀನಾ ಮೊಬೈಲ್‌ಗಳನ್ನು ಖರೀದಿಸಲು ಜನರು ಹಿಂದೆ- ಮುಂದೆ ನೋಡುವ ಸ್ಥಿತಿ ಇರುವಾಗಲೇ, ಚೀನಾದ ಪ್ರಸಿದ್ಧ ಮೊಬೈಲ್‌ ಕಂಪನಿಯಾಗಿರುವ ಜಿಯೋನಿ ಜಾಹೀರಾತು ಮೂಲಕ ಲಾಭ ಗಳಿಸಲು 2.1 ಕೋಟಿ ಬಳಕೆದಾರರಿಗೆ ಗೊತ್ತಿಲ್ಲದೆ ಮಾಲ್‌ವೇರ್‌ ಅಳವಡಿಸಿ ಅಕ್ರಮ ನಡೆಸಿರುವ ಸಂಗತಿ ಬಯಲಾಗಿದೆ.

ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರ ಸಂಖ್ಯೆ 350 ದಶಲಕ್ಷ!

Tap to resize

Latest Videos

undefined

ಬಳಕೆದಾರರ ಮೊಬೈಲ್‌ ಫೋನ್‌ಗಳಿಗೆ ಮಾಲ್‌ವೇರ್‌ ತೂರಿಸುತ್ತಿವೆ ಎಂಬ ಕಾರಣಕ್ಕೆ ಗೂಗಲ್‌ ಕಂಪನಿ ತನ್ನ ಪ್ಲೇಸ್ಟೋರ್‌ನಿಂದ ಆಗಾಗ್ಗೆ ಕೆಲವು ಮೊಬೈಲ್‌ ಆ್ಯಪ್‌ಗಳನ್ನು ತೆಗೆದು ಹಾಕುವುದುಂಟು. ಆದರೆ ಇದೀಗ ಮೊಬೈಲ್‌ ಕಂಪನಿಯೊಂದರ ವಿರುದ್ಧವೇ ಅಂತಹ ಆರೋಪ ಕೇಳಿಬಂದಿದೆ. ಇದು ಚೀನಾ ಕೋರ್ಟ್‌ನಲ್ಲಿ ಬಹಿರಂಗವಾಗಿದ್ದು, ನ್ಯಾಯಾಲಯವೇ ಪತ್ತೆ ಹಚ್ಚಿದೆ.

13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ

ಅನಪೇಕ್ಷಿತ ಜಾಹೀರಾತುಗಳು ಮೊಬೈಲ್‌ನಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳಲು 2.1 ಕೋಟಿ ಬಳಕೆದಾರರ ಅರಿವಿಗೆ ಬಾರದಂತೆ ಮಾಲ್‌ವೇರ್‌ ಅನ್ನು ಹರಿಯಬಿಟ್ಟಿದೆ. 2018ರ ಡಿಸೆಂಬರ್‌ನಿಂದ 2019ರ ಅಕ್ಟೋಬರ್‌ವರೆಗೆ ‘ಸ್ಟೋರಿ ಲಾಕ್‌ ಸ್ಕ್ರೀನ್‌’ ಎಂಬ ಆ್ಯಪ್‌ಗೆ ಜಿಯೋನಿ ಅಪ್‌ಡೇಟ್‌ ಬಿಡುಗಡೆ ಮಾಡಿತ್ತು. ಅದರ ಮೂಲಕ ಟ್ರೋಜನ್‌ ಹಾರ್ಸ್‌ ಅನ್ನು ಕಂಪನಿ ಮೊಬೈಲ್‌ಗಳಿಗೆ ತೂರಿಸಿದೆ. ಈ ಅವಧಿಯಲ್ಲಿ ಕಂಪನಿ 31.46 ಕೋಟಿ ರು. ಲಾಭ ಗಳಿಸಿದೆ ಎಂದು ಚೀನಾ ಕೋರ್ಟ್‌ ತಿಳಿಸಿದೆ.

click me!