ಜಿಯೋ ಸಹಯೋಗದೊಡನೆ ಆಗ್ಮೆಂಟೆಡ್-ರಿಯಾಲಿಟಿ ಆಧಾರಿತ 'ಯಾತ್ರಾ' ಗೇಮ್ ಲಾಂಚ್!

By Suvarna News  |  First Published Dec 3, 2020, 9:12 PM IST
  • ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆಪ್ ಸ್ಟೋರ್‌ನಲ್ಲಿ ಗೇಮ್ ಲಭ್ಯ
  • 3ಡಿ-ಅವತಾರ್ ವೈಶಿಷ್ಟ್ಯ, ವಿಶೇಷ ಬ್ಯಾಜ್‍ಗಳು, ಗೇಮ್ ಲೆವೆಲ್‌ಗಳು, 
  • ಅನೇಕ ಆಡ್-ಆನ್‌ಗಳು ಸೇರಿದಂತೆ ಜಿಯೋ ಬಳಕೆದಾರರಿಗೆ ವಿಶೇಷ

ಬೆಂಗಳೂರು(ಡಿ.03):  ಆಗ್ಮೆಂಟೆಡ್-ರಿಯಾಲಿಟಿ ಮೊಬೈಲ್ ಗೇಮಿಂಗ್ ಸಂಸ್ಥೆ ಕ್ರಿಕಿ, 'ಯಾತ್ರಾ' ಎಂಬ ಹೊಸ ಆಗ್ಮೆಂಟೆಡ್ ರಿಯಾಲಿಟಿ ಗೇಮ್ ಅನ್ನು ಜಿಯೋ ಸಹಯೋಗದೊಡನೆ ಭಾರತದಲ್ಲಿ ಪರಿಚಯಿಸಿದೆ. ಸೀರೀಸ್ ಎ ಫಂಡಿಂಗ್ ಸುತ್ತನ್ನೂ ಮುನ್ನಡೆಸಿದ ಜಿಯೋ, ಕ್ರಿಕಿ ಪಡೆದ ಒಟ್ಟು ಹೂಡಿಕೆಯನ್ನು 22 ಮಿಲಿಯನ್ ಡಾಲರುಗಳಿಗೆ ಕೊಂಡೊಯ್ದಿದೆ.

ಜಿಯೋ ಫೋನ್‌ನಲ್ಲಿ ಜಿಯೋ ಕ್ರಿಕೆಟ್ ಕಪ್; ಆಕರ್ಷಕ ಬಹುಮಾನ ಗೆಲ್ಲೋ ಅವಕಾಶ!. 

Tap to resize

Latest Videos

undefined

ತಲ್ಲೀನಗೊಳಿಸುವ ರೀತಿಯಲ್ಲಿ ಸ್ಫೂರ್ತಿ ಮತ್ತು ವಾಸ್ತವವನ್ನು ಒಂದುಗೂಡಿಸುವುದು ಕ್ರಿಕಿಯೊಂದಿಗಿನ ನಮ್ಮ ದೃಷ್ಟಿಕೋನವಾಗಿದೆ. ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ, ನಿಮ್ಮ ಮೊಬೈಲ್ ಫೋನ್‌ನ ಕಿಟಕಿಯ ಮೂಲಕ ಫ್ಯಾಂಟಸಿ ಪ್ರಪಂಚಗಳನ್ನು ನೇರವಾಗಿ ನಿಮ್ಮ ಮನೆಗೆ ತರಲು ನಮಗೆ ಸಾಧ್ಯವಾಗುತ್ತದೆ ಎಂದು ಕ್ರಿಕಿ ಸಂಸ್ಥಾಪಕರಾದ ಜಾಹ್ನವಿ ಮತ್ತು ಕೇತಕಿ ಶ್ರೀರಾಮ್ ಹೇಳಿದರು.

1Gbps ಹೈ ಸ್ಪೀಡ್ ಡೇಟಾ 5G ಪರೀಕ್ಷೆ ಯಶಸ್ವಿ: ಜಿಯೋ ಮತ್ತು ಕ್ವಾಲ್‌ಕಾಮ್ ಸಾಧನೆ!.

ಕೇವಲ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದೊಂದಿಗೆ, ಆಟಗಾರರು ಯಾತ್ರಾದ ಆಕ್ಷನ್-ಸಾಹಸಗಾಥೆಯನ್ನು ಪ್ರವೇಶಿಸಬಹುದು ಮತ್ತು ಮಾನ್‌ಸ್ಟರ್‌ಗಳ ಸೈನ್ಯವನ್ನು ಸೋಲಿಸುವ ಅನ್ವೇಷಣೆಗೆ ಸೇರಬಹುದು. ಬಿಲ್ಲು ಮತ್ತು ಬಾಣ, ಚಕ್ರ, ಮಿಂಚು ಮತ್ತು ಫೈರ್ ಬೋಲ್ಟ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಬಳಸಿ, ಆಟಗಾರರು ವಿವಿಧ ಹಂತದ ಯುದ್ಧ ಮತ್ತು ಪಜಲ್ ಗೇಮ್‌ಗಳ ಮೂಲಕ ಹೋರಾಡಬಹುದು.

ಬಳಕೆದಾರರು ತಮ್ಮ ಆಟವನ್ನು ಪೂರ್ಣಗೊಳಿಸಿದ ನಂತರ, ವೈಯಕ್ತಿಕಗೊಳಿಸಿದ ವೀಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇತರ ಬಳಕೆದಾರರು ಪೋಸ್ಟ್ ಮಾಡಿದ ಆಟದ ವೀಡಿಯೊಗಳನ್ನು ನೋಡಲು ವೀಡಿಯೊ ಫೀಡ್‌ಗಳು ಮತ್ತು ಡಿಜಿಟಲ್ ತರಬೇತಿ ಮೈದಾನ ಕೂಡ ಲಭ್ಯವಿದ್ದು, ಮತ್ತೆ ಆಡುವ ಮೊದಲು ಆಟಗಾರರು ಅಲ್ಲಿ ತಮ್ಮ ಬಿಲ್ಲು - ಬಾಣದ ಕೌಶಲವನ್ನು ಅಭ್ಯಾಸ ಮಾಡಬಹುದು.

ಜಿಯೋ ಬಳಕೆದಾರರಿಗೆ ಈ ಕೆಳಗಿನ ವಿಶೇಷ ಸೌಲಭ್ಯಗಳು
- 3ಡಿ ಅವತಾರ್ ವೈಶಿಷ್ಟ್ಯ
- ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಪವರ್‌ಗಳನ್ನು ಅನ್‌ಲಾಕ್ ಮಾಡಲು ಗೇಮ್‌ಪ್ಲೇ ಟೋಕನ್‌ಗಳು
- ಗೇಮ್ ಲೆವೆಲ್‌ಗಳು

ಆಗ್ಮೆಂಟೆಡ್ ರಿಯಾಲಿಟಿಯನ್ನು ಅಂಗೀಕರಿಸಲು ಕ್ರಿಕಿ ಒಂದು ಇಡೀ ಪೀಳಿಗೆಯ ಭಾರತೀಯರನ್ನು ಪ್ರೇರೇಪಿಸಲಿದೆ. ಪ್ರಪಂಚದೆಲ್ಲೆಡೆಯ ಅತ್ಯುತ್ತಮ ಅನುಭವಗಳನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಕೋನವಾಗಿದೆ ಮತ್ತು ಯಾತ್ರಾದ ಪರಿಚಯವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಆಗ್ಮೆಂಟೆಡ್ ರಿಯಾಲಿಟಿ ಗೇಮಿಂಗ್ ಬಳಕೆದಾರರನ್ನು ತನ್ನದೇ ಆದ ಜಗತ್ತಿನೊಳಕ್ಕೆ ಕರೆದೊಯ್ಯುತ್ತದೆ, ಮತ್ತು ಯಾತ್ರಾ ಮೂಲಕ ಆಗ್ಮೆಂಟೆಡ್ ರಿಯಾಲಿಟಿಯನ್ನು (AR) ಅನುಭವಿಸಲು ನಾವು ಜಿಯೋ ಮತ್ತು ಬೇರೆಲ್ಲ ಸೇವೆಗಳ ಪ್ರತಿಯೊಬ್ಬ ಬಳಕೆದಾರರನ್ನೂ ಆಹ್ವಾನಿಸುತ್ತೇವೆ ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದರು.

ಕ್ರಿಕಿ ಈಗ ಐಒಎಸ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌‌ಗಳಲ್ಲಿ ಉಚಿತವಾಗಿ ಲಭ್ಯವಿದೆ.

click me!