4G ಸಪೋರ್ಟ್ ನೊಕಿಯಾ 215, ನೊಕಿಯಾ 225 ಫೋನ್ ಬಿಡುಗಡೆ!

Published : Oct 11, 2020, 04:04 PM IST
4G ಸಪೋರ್ಟ್ ನೊಕಿಯಾ 215, ನೊಕಿಯಾ 225 ಫೋನ್ ಬಿಡುಗಡೆ!

ಸಾರಾಂಶ

ಭಾರತದಲ್ಲಿ ಫೋನ್ ಕ್ರಾಂತಿ ಆರಂಭಗೊಂಡಿದ್ದೇ ನೊಕಿಯಾ ಮೊಬೈಲ್ ಮೂಲಕ. ಬಳಿಕ ಹಲವು ಕಂಪನಿಗಳು ಭಾರತದಲ್ಲಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದೆ. ಇದೀಗ ಸ್ಮಾರ್ಟ‌ಫೋನ್ ಜಮಾನ. ಇದರ ನಡುವೆ ನೊಕಿಯಾ ತನ್ನು ಮೊಬೈಲ್ ಫೋನ್ ಬೇಡಿಕೆ ಉಳಿಸಿಕೊಂಡಿದೆ. ಇದೀಗ ನೊಕಿಯಾ 4G ಸಪೋರ್ಟ್ ಮಾಡುವ 215 ಹಾಗೂ 225 ಮೊಬೈಲ್ ಫೋನ್ ಬಿಡುಗಡೆ ಮಾಡಿದೆ.

ನವದೆಹಲಿ(ಅ.11): ಭಾರತೀಯರು ಸದ್ಯ ಐಫೋನ್, ಚೀನಾ ಫೋನ್, ಸ್ಯಾಮ್ಸನ್ ಸೇರಿದಂತೆ ಹಲವು ಕಂಪನಿಗಳ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ. ಆದರೆ ನೊಕಿಯಾ ಫೋನ್ ಮೇಲೆ ಎಲ್ಲಿಲ್ಲದ ಪ್ರೀತಿ ಇದ್ದೇ ಇದೆ. ಭಾರತದಲ್ಲಿ ಫೋನ್ ಕ್ರಾಂತಿ ಆರಂಭಿಸಲು ನೆರವಾದ ನೊಕಿಯಾ ನಂಬಿಕಸ್ಥ ಬ್ರಾಂಡ್ ಆಗಿದೆ. ಇದೀಗ ಜಾಗತಿಕ ಮಟ್ಟದಲ್ಲಿ ನೊಕಿಯಾ 4G ಸಪೋರ್ಟ್ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ.

ಭಾರತದ ಮೊದಲ ಮೊಬೈಲ್‌ ಕರೆಗೆ 25 ವರ್ಷ ತುಂಬಿತು!

ನೊಕಿಯಾ 215 ಹಾಗೂ ನೊಕಿಯಾ 225 ಮೊಬೈಲ್ ಫೋನ್ 4G ಸಪೋರ್ಟ್ ಹಾಗೂ VoLTE ಹಾಗೂ HD ಕಾಲ್ಸ್ ಸಪೋರ್ಟ್ ಮಾಡಲಿದೆ.  LED ಫ್ಲಾಶ್ ಲೈಟ್,  ಮೈಕ್ರೋSD ಕಾರ್ಡ್ ಸಪೋರ್ಟ್  ಹಾಗೂ FM ರೇಡಿಯೋ ಫೀಚರ್ಸ್ ಹೊಂದಿದೆ.

ನೊಕಿಯಾ 225 ಫೋನ್  VGA ಕ್ಯಾಮರಾ ಹೊಂದಿದೆ. ಆದರೆ ನೊಕಿಯಾ 215 ಕ್ಯಾಮರ ಆಯ್ಕೆ ಹೊಂದಿಲ್ಲ.  215 ಫೋನ್ ಬ್ಲಾಕ್ ಹಾಗೂ ಗ್ರೀನ್ ಕಲರ್ ಆಯ್ಕೆ ನೀಡಿದೆ. ಇನ್ನು 225 ಫೋನ್ ಬ್ಲಾಕ್, ಬ್ಲೂ ಹಾಗೂ ಗೋಲ್ಡ್ ಕಲರ್ ಆಯ್ಕೆ ನೀಡಿದೆ.

5 ಕ್ಯಾಮೆರಾವುಳ್ಳ Nokia 9 PureView ಬಿಡುಗಡೆ; ಫೀಚರ್ಸ್ ಮತ್ತು ಬೆಲೆ

ನೊಕಿಯಾ 225 ಫೋನ್ ಬೆಲೆ 3,800 ರೂಪಾಯಿ ಹಾಗೂ 215 ಫೋನ್ ಬೆಲೆ 3,150 ರೂಪಾಯಿ. ಸದ್ಯ ನೊಕಿಯಾ ನೂತನ ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ. ಅಕ್ಟೋಬರ್ 14 ರಿಂದ ಮಾರಾಟ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಭಾರತದಲ್ಲೂ ನೊಕಿಯಾ 215 ಹಾಗೂ 225 ಫೋನ್ ಬಿಡುಗಡೆಯಾಗಲಿದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!
ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌