ಗೂಗಲ್‌ನ ಸಣ್ಣ ಕೆಲಸವೊಂದು ಮಾಡಿಕೊಡಿ; ಬರೋಬ್ಬರಿ 10 ಕೋಟಿ ರೂ. ಪಡೆಯಿರಿ!

By Web DeskFirst Published Nov 23, 2019, 2:03 PM IST
Highlights

ಸಾಫ್ಟ್‌ವೇರ್ ದೈತ್ಯ ಗೂಗಲ್ ಕಂಪನಿಯಿಂದ ಹೊಸ ಪ್ರಕಟಣೆ; ಬರೋಬ್ಬರಿ 10 ಕೋಟಿ ರೂ. ಗೆಲ್ಲುವ ಅವಕಾಶ! ; ಏನ್ಮಾಡ್ಬೇಕು? ಇಲ್ಲಿದೆ ವಿವರ...

ಬೆಂಗಳೂರು (ನ.23): ಸಾಫ್ಟ್‌ವೇರ್ ದೈತ್ಯ ಗೂಗಲ್ ಹೊಸದೊಂದು ಪ್ರಕಟಣೆಯನ್ನು ಮಾಡಿದೆ.  ಅದು ಒಂದು ಸಣ್ಣ ಸವಾಲೇ ಸರಿ, ನೀವು 1.5 ಮಿಲಿಯನ್ ಡಾಲರ್ ಹಣವನ್ನು (ಸುಮಾರು 10.76 ಕೋಟಿ ರೂಪಾಯಿ) ನಿಮ್ಮದಾಗಿಸಬಹುದು.

ಮೇಲ್ನೋಟಕ್ಕೆ ಇದು ನಿಮಗೆ ಸುಲಭ ಕೆಲಸ ಅಂತಾ ಅನಿಸಬಹುದು. ಆದರೆ ಗೂಗಲ್‌ನ ಕಾನ್ಫಿಡೆನ್ಸ್ ನೋಡಿದ್ರೆ, ಅಸಾಧ್ಯ ಅಂತಾ ಕಾಣ್ಸುತ್ತೆ.

ಇದನ್ನೂ ಓದಿ | ಯುವಕರ, ಆಂಟಿಯರ ನೆಚ್ಚಿನ ಟಿಕ್ ಟಾಕ್ ಬ್ಯಾನ್!?...

ಅದಿರಲಿ, ಹಾಗಾದ್ರೆ ಸವಾಲೇನು? 

ಗೂಗಲ್ ಮೊಬೈಲ್‌ಗಳನ್ನು ತಯಾರಿಸುತ್ತಿರೋದು ಹಳೇ ವಿಚಾರ. ಗೂಗಲ್‌ನ ಪಿಕ್ಸೆಲ್ ಸರಣಿಯ ಫೋನ್‌ಗಳು ಜನಪ್ರಿಯ ಕೂಡಾ ಆಗಿವೆ. ಪಿಕ್ಸೆಲ್ ಫೋನ್‌ನಲ್ಲಿ ಬಳಕೆದಾರರ ಮಾಹಿತಿಯೊಂದಿಗೆ ರಾಜಿ ಮಾಡಲಾಗುತ್ತಿದೆ, ಎಂಬ ಬಗ್ (ಲೋಪ) ತೋರಿಸಿದರೆ ಸಾಕು, ನೀವು 10 ಕೋಟಿ ಹಣ ಪಡೆಯಬಹುದು!

ಇತ್ತೀಚಿಗಿನ ವರ್ಷಗಳಲ್ಲಿ ಮೊಬೈಲ್ ಬಳಕೆದಾರರ ಮಾಹಿತಿ ಸುರಕ್ಷತೆಗೆ ಭಾರೀ ಪ್ರಾಶಸ್ತ್ಯವನ್ನು ಕೊಡಲಾಗುತ್ತಿದೆ. ಅದನ್ನು ಖುದ್ದು ಕಂಪನಿಗಳು ಬಳಸುತ್ತವಲ್ಲದೇ, ಹ್ಯಾಕರ್‌ಗಳು ಕೂಡಾ ಕದಿಯಲು ಪ್ರಯತ್ನಿಸುತ್ತಾರೆ. ಹಾಗಾಗಿ ಬಳಕೆದಾರರ ಮಾಹಿತಿ ಸುರಕ್ಷತೆ ಮೊಬೈಲ್ ಮತ್ತು ಆ್ಯಪ್ ಕಂಪನಿಗಳ ಮೇಲೆರುವ ಬಹುದೊಡ್ಡ ಹೊಣೆಗಾರಿಕೆ ಮತ್ತು ಸವಾಲಾಗಿದೆ.   

ಗೂಗಲ್‌ನ ಈ ಬಗ್ ಬೌಂಟಿ ಕಾರ್ಯಕ್ರಮ ಸೆಕ್ಯೂರಿಟಿ ರಿಸರ್ಚರ್‌ಗಳಿಗೆ ಸವಾಲನ್ನು ಮುಂದಿಟ್ಟಿದೆ. ಈ ಹಿಂದೆ ಇದೇ ಪ್ರಕಟಿಸಲಾಗಿದ್ದ ಬಗ್ ಬೌಂಟಿ ಕಾರ್ಯಕ್ರಮಕ್ಕೆ 38ಸಾವಿರ ಡಾಲರ್ (ಸುಮಾರು 27 ಲಕ್ಷ ರೂ.) ಬಹುಮಾನ ಘೋಷಿಸಲಾಗಿತ್ತು.

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 
  

click me!