ಪ್ರತಿಷ್ಠಿತ ವಿಶ್ವ ಸಂವಹನ ಪ್ರಶಸ್ತಿಗೆ ಭಾಜನವಾದ ಜಿಯೋ | ಜಿಯೋ ಫೋನ್ ಮತ್ತು ಜಿಯೋ ಇಂಟೆರಾಕ್ಟ್ ಸೇವೆಗೆ ಮೆಚ್ಚುಗೆ | 4 ವಿಭಾಗಗಳ ಅಡಿಯಲ್ಲಿ ನಾಮ ನಿರ್ದೇಶನಗೊಂಡಿದ್ದ ಜಿಯೋ
ಬೆಂಗಳೂರು (ನ. 13): ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಜಿಯೋ ಜಾಗತಿಕ ಪ್ರಶಸ್ತಿಗೆ ಭಾಜನವಾಗಿದೆ. ಜಿಯೋನ ಜನಪ್ರಿಯ ಟಿವಿ ಮತ್ತು ಪ್ರಸಾರ ಅಪ್ಲಿಕೇಶನ್ ಜಿಯೋ ಟಿವಿಗೆ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ ಸಿಕ್ಕಿದೆ. ಲಂಡನ್‌ನಲ್ಲಿ ನಡೆದ ವಿಶ್ವ ಸಂವಹನ ಪ್ರಶಸ್ತಿ-2019 ಕಾರ್ಯಕ್ರಮದಲ್ಲಿ ಜಿಯೋಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಜಾಗತಿಕ ಟೆಲಿಕಾಂ ಆಪರೇಟರ್ ಮತ್ತು ಆ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ, ವಿಶ್ವ ಸಂವಹನ ಪ್ರಶಸ್ತಿಗಳನ್ನು ಟೋಟಲ್ ಟೆಲಿಕಾಂ ಎಂಬ ಸಂಸ್ಥೆಯು, 1999 ರಿಂದ ಕೊಡುತ್ತಾ ಬಂದಿದೆ. ಟೆಲಿಕಾಂ ತಜ್ಞರ ಸಮಿತಿಯು 25 ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತದೆ.
undefined
ಏರ್‌ಟೆಲ್, ವೊಡಾಫೋನ್‌ಗೆ ಏನ್ ಮಾಡಬೇಕೆಂದು ಹೇಳಿದ ಅಂಬಾನಿ
ಜಿಯೋಗೆ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿಯನ್ನು ಹೋಮ್‌ಗ್ರೀಡ್ ಫೋರಂನ ಮಾರ್ಕೆಟಿಂಗ್ ಚೇರ್ ಮತ್ತು ಬೋರ್ಡ್ ಸದಸ್ಯೆ ಲಿವಿಯಾ ರೋಸು ಮತ್ತು ಬಿಬಿಸಿಯ ವಿಶ್ವ ವ್ಯವಹಾರಗಳ ಸಂಪಾದಕ ಜಾನ್ ಸಿಂಪ್ಸನ್ ಅವರು ಪ್ರದಾನ ಮಾಡಿದರು.
ಜಿಯೋ ಆಪರೇಟರ್ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ ಸೇರಿದಂತೆ 4 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. ಜಿಯೋ ಫೋನ್ ಮತ್ತು ಜಿಯೋ ಇಂಟೆರಾಕ್ಟ್ ಅನ್ನು ಕ್ರಮವಾಗಿ ದಿ ಸೋಷಿಯಲ್ ಕಾಂಟ್ರಿಬ್ಯೂಷನ್ ಅವಾರ್ಡ್ ಮತ್ತು ದಿ ಇನ್ನೋವೇಶನ್ ಅವಾರ್ಡ್ - ಆಪರೇಟರ್ ವಿಭಾಗಗಳ ಅಡಿಯಲ್ಲಿ ಪ್ರಸಂಶೆಗೆ ಪಾತ್ರವಾಯಿತು.
ಮೊಬೈಲ್ ಇಂಟರ್ನೆಟ್ ಸ್ಪೀಡ್ ಪ್ರಕಟ: ಗ್ರಾಹಕರ ಪ್ರೀತಿಗೆ ಯಾರು ಪಾತ್ರ?