ಯೂಥ್‌ಫುಲ್ ಫೋನು, ಆಕರ್ಷಕ ಡಿಸೈನು Tecno Pova 5 Pro!

By Ravi Janekal  |  First Published Aug 25, 2023, 6:41 PM IST

ಫೋನು ಮತ್ತು ಕಾರು ಎರಡೂ ಯೂಥ್‌ಫುಲ್ ಆಗಿರಬೇಕು ಅನ್ನೋದು ಈ ಕಾಲದ ಕಾನ್ಸೆಪ್ಟು. ಶ್ರೀಮದ್ಗಾಂಭೀರ್ಯ ತುಂಬಿತುಳುಕುವ ದುಬಾರಿ ಫೋನುಗಳಿಗಿಂತ ಜಿಂಗ್‌ಚಾಕ್ ಫೋನುಗಳಿಗೆ ಬೇಡಿಕೆ ಜಾಸ್ತಿ. ಅದನ್ನು ಗಮನದಲ್ಲಿಟ್ಟುಕೊಂಡು ಟೆಕ್ನೋ ಕಂಪೆನಿ ಪೋವಾ 5 ಪ್ರೊ(Tecno Pova 5 Pro ) ಎಂಬ ಫೋನನ್ನು ಮಾರುಕಟ್ಟೆಗೆ ತಂದಿದೆ.


ಫೋನು ಮತ್ತು ಕಾರು ಎರಡೂ ಯೂಥ್‌ಫುಲ್ ಆಗಿರಬೇಕು ಅನ್ನೋದು ಈ ಕಾಲದ ಕಾನ್ಸೆಪ್ಟು. ಶ್ರೀಮದ್ಗಾಂಭೀರ್ಯ ತುಂಬಿತುಳುಕುವ ದುಬಾರಿ ಫೋನುಗಳಿಗಿಂತ ಜಿಂಗ್‌ಚಾಕ್ ಫೋನುಗಳಿಗೆ ಬೇಡಿಕೆ ಜಾಸ್ತಿ. ಅದನ್ನು ಗಮನದಲ್ಲಿಟ್ಟುಕೊಂಡು ಟೆಕ್ನೋ ಕಂಪೆನಿ ಪೋವಾ 5 ಪ್ರೊ(Tecno Pova 5 Pro ) ಎಂಬ ಫೋನನ್ನು ಮಾರುಕಟ್ಟೆಗೆ ತಂದಿದೆ.

ಇದರ ಬೆಲೆ 14,999 ರುಪಾಯಿ ಮಾತ್ರ. ರೆಡ್‌ಮಿ ನೋಟ್ 12, ಸ್ಯಾಮ್ಸಂಗ್ ಗೆಲಾಕ್ಸಿ ಎಂ 14 ಮುಂತಾದ ಫೋನುಗಳನ್ನು ನಿವಾಳಿಸಿ ತೆಗೆದಂತಿರುವ ಇದು ಗೇಮಿಂಗ್ ಆಡಲೂ ಶಕ್ತ, ಫೋಟೋಗ್ರಾಫರಿಗೂ ಮುಕ್ತ, ವಿಡಿಯೋ ನೋಡುವವರಿಗೂ ಭಕ್ತ.

Latest Videos

undefined

 

999 ರೂ. ಗೆ ಅಮೆಜಾನ್‌ನಲ್ಲಿ ಲಭ್ಯ ಜಿಯೋ ಭಾರತ್ ಫೀಚರ್ ಫೋನ್: ಮಾರಾಟ ದಿನಾಂಕ, ವೈಶಿಷ್ಟ್ಯತೆ ಹೀಗಿದೆ..

ಈ ಫೋನಿನ ವಿಶೇಷವೆಂದರೆ, ಇದನ್ನು ಬಚ್ಚಿಟ್ಟುಕೊಂಡಿರುವ ಪೆಟ್ಟಿಗೆಯ ಬದಿಯಲ್ಲೊಂದು ಸ್ವಿಚ್ ಇದೆ. ಅದನ್ನು ಒತ್ತಿದರೆ ಪೆಟ್ಟಿಗೆಯ ಮೇಲೆ ಬೆಳಕಿನ ಗೆರೆಗಳು ಮೂಡುತ್ತವೆ. ಈ ಫೋನ್ ಹಿಂಭಾಗದಲ್ಲೂ ಅಂಥ ತ್ರಿಕೋನಾಕೃತಿಯ ಗೆರೆಗಳಿವೆ. ಕಾಲ್ ಬಂದರೆ, ಮೆಸೇಜ್ ಬಂದರೆ ಅವು ಮಿಂಚಿನಂತೆ ಬೆಳಗುತ್ತವೆ. ನೋಟಿಫಿಕೇಷನ್ ನೀಡುತ್ತವೆ. ರಾತ್ರಿ ಅವುಗಳು ಕಾಟ ಕೊಡುತ್ತವೆ ಅನ್ನಿಸಿದರೆ ನೀವದನ್ನು ಆಫ್ ಮಾಡಬಹುದು.

ಈ ಫೋನಿನ ಸ್ಪೆಸಿಫಿಕೇಷನ್ ನೋಡೋಣ: 6.78 ಇಂಚ್ ಡಿಸ್‌ಪ್ಲೇ, 120 ಹರ್ಟ್ಸ್ ರಿಫ್ರೆಶ್ ರೇಟ್, 50 ಮೆಗಾಫಿಕ್ಸೆಲ್ ಎಐ ಡುಯೆಲ್ ಕ್ಯಾಮರಾ, 16 ಮೆಗಾ ಫಿಕ್ಸೆಲ್ ಸೆಲ್ಪೀ ಕ್ಯಾಮರಾ, 256 ಜಿಬಿ ಸ್ಟೋರೇಜ್, 16 ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ. ಜತೆಗೆ 68 ವಾಟ್ ಫಾಸ್ಟ್ ಚಾರ್ಜಿಂಗ್.

ಈ ಫೋನ್ ಎರಡು ಬಣ್ಣಗಳಲ್ಲಿ ಲಭ್ಯ. ನನಗೆ ಇಷ್ಟವಾದದ್ದು ಡಾರ್ಕ್ ಇಲ್ಯೂಷನ್. ಪ್ಯಾಂಥರ್ ಗೇಮ್ ಇಂಜಿನ್ ಜತೆಗೇ ರಿವರ್ಸ್ ಚಾರ್ಜಿಂಗ್ ಕೂಡ ಲಭ್ಯ.

ಈ ಫೈನ್ ಕೈಗೆ ಕೊಂಚ ದೊಡ್ಡದು ಅನ್ನಿಸುತ್ತದೆ. ಆದರೆ ಸಿನಿಮಾ ನೋಡುವುದಕ್ಕಿದು ಬೆಸ್ಟ್ ಫ್ರೆಂಡ್. ಎರಡು ಸ್ಪೀಕರ್ ಇರುವುದರಿಂದ ಸೌಂಡ್ ಎಫೆಕ್ಟೂ ಚೆನ್ನಾಗಿದೆ. ಗೇಮಿಂಗ್, ಬ್ರೌಸಿಂಗ್, ಮೀಡಿಯಾ ಮೂರಕ್ಕೂ ಉಪಯುಕ್ತ.

ಏಸೂಸ್ ಆರ್‌ಓಜಿ ಗೇಮಿಂಗ್ ಫೋನುಗಳಂತೆ ಕಾಣಿಸುವ ಇದು ಅಷ್ಟೇ ಶಕ್ತಿಶಾಲಿ ಗೇಮಿಂಗ್ ಇಂಜಿನ್ ಕೂಡ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗೀಗ ಬಹುತೇಕ ಫೋನುಗಳಲ್ಲಿ ಕಾಣೆಯಾಗುತ್ತಿರುವ 3.5 ಎಂಎಂ ಹೆಡ್ ಫೋನ್ ಜ್ಯಾಕ್ ಇದರಲ್ಲಿದೆ.

ಇದರ ಫಿಂಗರ್ ಪ್ರಿಂಟ್ ಸೆನ್ಸರ್ ಪವರ್ ಬಟನ್ನಿನಲ್ಲಿದೆ. ಅದು ಥಟ್ಚನೆ ಬೆರಳಿಗೆ ಸಿಗಲು ಅಭ್ಯಾಸ ಆಗಬೇಕು. ವಾಲ್ಯೂಮ್ ಬಟನ್ ಕೂಡ ಕೊಂಚ ಒಳಗಿದೆ.
ಈ ಫೋನುಗಳ ಫೋಟೋ ಸೊಗಸಾಗಿ ಬರುತ್ತದೆ. ಬಣ್ಣಬಣ್ಣಕ್ಕೆ ಚಂದಚಂದಕ್ಕೆ ಕಾಣುತ್ತದೆ. ಅದು ನಿಜವೆಂದು ನಂಬಬಾರದು. ಅತಿಯಾದ ಆರ್ಟಿಫಿಷಿಯಲ್ ಪ್ರಾಸೆಸಿಂಗ್ ಫಲ ಅದು. ನೀವು ತೆಗೆದ ಫೋಟೋ ಬಣ್ಣದ ಹೊಳೆಯೇ ಆದರೂ ಮತ್ತೊಬ್ಬರಿಗೆ ಕಳಿಸಿದಾಗ ಬಣ್ಣ ತೊಳೆದಂತಿರುತ್ತದೆ. ಆದರೂ ಫೋಟೋ ಪ್ರಿಯರಿಗೆ ಅಂಥ ನಿರಾಶೆ ಉಂಟು ಮಾಡುವುದಿಲ್ಲ. ಇದೇ ಮಾತನ್ನು ವಿಡಿಯೋ ವಿಚಾರದಲ್ಲಿ ಹೇಳಲಾಗುವುದಿಲ್ಲ.

ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ ನ್ಯೂಸ್‌: 999 ರೂ. ಗೆ ರೀಲಾಂಚ್ ಆಯ್ತು ಮುಖೇಶ್‌ ಅಂಬಾನಿಯ ಜಿಯೋಭಾರತ್ V2 ಫೋನ್

ಇಪ್ಪತ್ತು ನಿಮಿಷದಲ್ಲಿ 50 ಪರ್ಸೆಂಟ್ ಬ್ಯಾಟರಿ ಚಾರ್ಜ್ ಆಗುತ್ತದೆ. ಪೂರ್ತಿ ಚಾರ್ಜ್ ಆಗಲು ಒಂದು ಗಂಟೆ ಬರೋಬ್ಬರಿ. ಒಮ್ಮೆ ಚಾರ್ಜ್ ಮಾಡಿದರೆ ಇಡೀ ದಿನ ಹಸಿಯುವುದಿಲ್ಲ.

ಈ ಫೋನಿನಲ್ಲಿ ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವಿದೆ. ಇದರ ಗಮ್ಮತ್ತೆಂದರೆ ನೀವು ಚಾರ್ಜ್ ಹಾಕಿಕೊಂಡೇ ಕೆಲಸ ಮಾಡುತ್ತಿದ್ದರೆ ಫೋನ್ ಬಿಸಿಯಾಗುವುದಿಲ್ಲ. ಬ್ಯಾಟರಿ ಬೇಗನೇ ಸತ್ವ ಕಳಕೊಳ್ಳುವುದಿಲ್ಲ. ಚಾರ್ಜಿಂಗ್ ಮತ್ತು ಡಿಸ್ ಚಾರ್ಜಿಂಗ್ ಸೈಕಲ್ ಕಡಿಮೆ ಇರುತ್ತದೆ.

click me!