ಫೋಲ್ಡೇಬಲ್ ಸ್ಯಾಮ್ ಸಂಗ್ ಗ್ಯಾಲಕ್ಸಿ Z Flip5, Z Fold5 ಫೋನ್ ದಾಖಲೆ, 28 ಗಂಟೆಯಲ್ಲಿ 1 ಲಕ್ಷ ಬುಕಿಂಗ್!

By Suvarna News  |  First Published Aug 15, 2023, 6:27 PM IST

ಸ್ಯಾಮ್ಸಂಗ್ ಇತ್ತೀಚಗೆ ಮಡಚಬಲ್ಲ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳ  ಈ ಫೋನ್ ಹೊಸ ದಾಖಲೆ ಬೆರೆದಿದೆ. ದಾಖಲೆ ಪ್ರಿ ಬುಕಿಂಗ್ ಮೂಲಕ ಸಂಚಲನ ಸೃಷ್ಟಿಸಿದೆ.


ಬೆಂಗಳೂರು(ಆ.15): ಭಾರತದ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್ ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಐದನೇ ಜನರೇಶನ್  ಫೋಲ್ಡೇಬಲ್ ಡಿವೈಸ್ ಫೋನ್‌ ದಾಖಲೆ ಬರೆದಿದೆ.  ಮೊದಲ 28 ಗಂಟೆಗಳಲ್ಲಿ 1,00,000ಕ್ಕೂ ಹೆಚ್ಚು ಗ್ರಾಹಕರು ಭಾರತದಲ್ಲಿ Galaxy Z Flip5 ಮತ್ತು Z Fold5 ಪ್ರಿ-ಬುಕ್ ಮಾಡಿದ್ದಾರೆ. ನಾಲ್ಕನೇ ತಲೆಮಾರಿನ ಫೋಲ್ಡಬಲ್ಸ್(Galaxy Z Flip4 and Z Fold4) ಗೆ ಹೋಲಿಸಿದರೆ ಸ್ಯಾಮ್ ಸಂಗ್ 1.7 ಪಟ್ಟು ಪ್ರಿ-ಬುಕಿಂಗ್ ಗಳನ್ನು Galaxy Z Flip5 ಮತ್ತು Z Fold5 ಗಳಿಗೆ ಪಡೆದಿರುವುದು ಭಾರತೀಯ ಗ್ರಾಹಕರಲ್ಲಿ ಮಡಚಬಲ್ಲ ವಿಭಾಗದ ಮೇಲೆ ಗ್ರಾಹಕರ ವಿಶ್ವಾಸ ಹೆಚ್ಚಾಗುತ್ತಿರುವುದನ್ನು ತೋರಿಸಿದೆ. ಭಾರತದಲ್ಲಿ Galaxy Z Flip5 ಮತ್ತು Z Fold5 ಗಳ ಪ್ರಿ-ಬುಕಿಂಗ್ ಜುಲೈ 27, 2023ರಂದು ಪ್ರಾರಂಭವಾಯಿತು. ಈ ಡಿವೈಸ್ ಗಳು ಆಗಸ್ಟ್ 18, 2023ರಂದು ಮಾರಾಟಕ್ಕೆ ಲಭ್ಯವಾಗಲಿವೆ.

Galaxy ZFlip5  99999 ರೂಪಾಯಿಂದ ಆರಂಭಗೊಳ್ಳುತ್ತದೆ (8/256 GB), Z Fold5, 154999 ರೂಪಾಯಿಗೆ ಲಭ್ಯ(12/256 GB). Galaxy ZFlip5 ಪ್ರಿ-ಬುಕಿಂಗ್ ಮಾಡುವ ಗ್ರಾಹಕರು 20000 ರೂಪಾಯಿ  ಮೌಲ್ಯದ ಅನುಕೂಲಗಳನ್ನು ಪಡೆಯುತ್ತಾರೆ. Galaxy Z Fold5 ಪ್ರಿ-ಬುಕಿಂಗ್ ಮಾಡುವ ಗ್ರಾಹಕರು 23000 ರೂಪಾಯಿ ಮೌಲ್ಯದ ಅನುಕೂಲಗಳನ್ನು ಪಡೆಯುತ್ತಾರೆ.

Tap to resize

Latest Videos

 

ಸ್ಯಾಮ್‌ಸಂಗ್‌ನಿಂದ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಬಿಡುಗಡೆ, ಮಡಚಿ-ತೆರೆಯುವ ತಂತ್ರಜ್ಞಾನ!

ಹೊಸದಾಗಿ ಬಿಡುಗಡೆಯಾದ Galaxy Z Flip5 ಮತ್ತು Z Fold5 ಫೋನ್ ಗಳಿಗೆ ಭಾರತದಲ್ಲಿ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಮ್ಮ ಸಂತಸ  ಇಮ್ಮಡಿಯಾಗಿದೆ ಎಂದು  ಎಂದು ಸ್ಯಾಮ್ ಸಂಗ್ ಏಷ್ಯಾದ ಅಧ್ಯಕ್ಷ ಜೆ.ಬಿ. ಪಾರ್ಕ್ ಹೇಳಿದ್ದಾರೆ. ಈ ಹೊಸ ಡಿವೈಸ್ ಗಳು ಆವಿಷ್ಕಾರಕ ತಂತ್ರಜ್ಞಾನದೊಂದಿಗೆ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ಸಾಬೀತುಪಡಿಸುತ್ತವೆ. Galaxy Z Flip5 ಮತ್ತು Z Fold5 ಯಶಸ್ಸು ಭಾರತೀಯ ಗ್ರಾಹಕರು ಹೊಸ ಆವಿಷ್ಕಾರಗಳಿಗೆ ಅತ್ಯಂತ ಸೂಕ್ಷ್ಮ ಸಂವೇದಿಗಳಾಗಿದ್ದಾರೆ ಎಂದು ತೋರಿಸಿದೆ. ನಮ್ಮ ಹೊಸ ಡಿವೈಸ್ ಗಳು ಫೋಲ್ಡಬಲ್ ಗಳನ್ನು ಮುಂಚೂಣಿಗೆ ತರಲು ಮತ್ತು ಭಾರತದಲ್ಲಿ ನಮ್ಮ ನಾಯಕತ್ವ ಸ್ಥಾನವನ್ನು ಕ್ರೋಢೀಕರಿಸುವುದರಲ್ಲಿ ನೆರವಾಗಲಿವೆ ಎಂದರು.

Galaxy Z Flip5 ಸ್ವಯಂ-ಅಭಿವ್ಯಕ್ತಿಗೆ ನಿರ್ಮಿಸಲಾದ ಪಾಕೆಟ್ ಗಾತ್ರದ ಡಿವೈಸ್ ನಲ್ಲಿ ಸ್ಟೈಲಿಷ್, ವಿಶಿಷ್ಟ ಫೋಲ್ಡಬಲ್ ಅನುಭವ ನೀಡುತ್ತದೆ. Galaxy Z Flip5ನ ಹೊರಗಿನ ಸ್ಕ್ರೀನ್ ಈಗ 3.78 ಪಟ್ಟು ದೊಡ್ಡದು ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಬಳಸಬಲ್ಲತೆ ನೀಡುತ್ತದೆ. Galaxy Z Fold5 ಉತ್ಪಾದಕತೆಯ ಅಲ್ಟಿಮೇಟ್ ಶಕ್ತಿ ಕೇಂದ್ರವಾಗಿದ್ದು ದೊಡ್ಡ ಸ್ಕ್ರೀನ್ ನಿಂದ Galaxy Z ಸೀರೀಸ್ ನಲ್ಲಿ ಅತ್ಯಂತ ಶಕ್ತಿಯುತ ಕಾರ್ಯಕ್ಷಮತೆ ನೀಡುತ್ತದೆ, ಏಕೆಂದರೆ ಇದು ಅತ್ಯಂತ ತೆಳು, ಹಗುರವಾದ ಫೋಲ್ಡ್ ಆಗಿದೆ.

ನೋ ಶೇಕ್ ಕ್ಯಾಮೆರಾ, ಸುದೀರ್ಘ ಬಾಳಿಕೆ ಬ್ಯಾಟರಿ; ಸ್ಯಾಮ್‌ಸಂಗ್ Galaxy F54 5G ಫೋನ್ ಬಿಡುಗಡೆ!

Galaxy Z Flip5 ಮತ್ತು Z Fold5 ಎರಡೂ ಫೋನ್ ಗಳು IPX8 ಬೆಂಬಲದೊಂದಿಗೆ ಸನ್ನದ್ಧವಾಗಿವೆ, ವಿಮಾನದ ಗುಣಮಟ್ಟದ ಆರ್ಮರ್ ಅಲ್ಯುಮಿನಿಯಂ ಫ್ರೇಮ್ ಗಳು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಫ್ಲೆಕ್ಸ್ ವಿಂಡೋ ಮತ್ತು ಹಿಂಬದಿಯ ಕವರ್ ಗೆ ಬಳಸಲಾಗಿದೆ. Galaxy Z Flip5 ಮತ್ತು Z Fold5 ಹೊಸ ಇಂಟಿಗ್ರೇಟೆಡ್ ಹಿಂಜ್ ಮಾಡ್ಯೂಲ್ ಹೊಂದಿದ್ದು ಅದು ಹೊರಗಿನ ಪರಿಣಾಮಗಳಿಗೆ ಡ್ಯುಯಲ್ ರೈಲ್ ರಚನೆ ಹೊಂದಿದೆ.  ಹೊಸ ಡಿವೈಸ್ ಗಳನ್ನು ಎಲ್ಲ ಮುಂಚೂಣಿಯ ಆನ್ಲೈನ್ ಮತ್ತು ಆಫ್ಲೈನ್ ರೀಟೇಲ್ ಮಳಿಗೆಗಳಲ್ಲಿ ಪ್ರಿ-ಬುಕ್ ಮಾಡಬಹುದು.  

click me!