
ನವದೆಹಲಿ(ಜು.27): ಚೀನಾ ವಿರೋಧಿ ಅಲೆಯಿಂದ ಚೀನಾ ಉತ್ಪನ್ನ, ಚೀನಾ ಕಂಪನಿಗಳು, ಚೀನಾ ಆ್ಯಪ್‌ಗಳಿಗೆ ಭಾರಿ ಹೊಡೆತ ಬಿದ್ದಿದೆ. ಇದೀಗ ಚೀನಾದ ಅತೀ ದೊಡ್ಡ ಟೆಲಿಕಾಂ ಸಲಕರಣೆ ಉತ್ಪಾದನಾ ಕಂಪನಿ ಹುವೈಗೆ ತೀವ್ರ ಹೊಡೆತ ಬಿದ್ದಿದೆ. ಭಾರತ ಟೆಲಿಕಾಂ ಮಾರುಕಟ್ಟೆಯನ್ನು ಬಹುತೇಕ ಆಕ್ರಮಿಸಿಕೊಂಡಿದ್ದ ಹುವೈ ಇದೀಗ ಹಲವು ಒಪ್ಪಂದಗಳು ರದ್ದಾಗಿದೆ. ಆದಾಯ ಕುಸಿತಗೊಂಡಿದೆ. ಹೀಗಾಗಿ ಉದ್ಯೋಗ ಕಡಿತಕ್ಕೂ ಮುಂದಾಗಿದೆ.
ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು; ಭಾರತಕ್ಕೆ ಸಂಕಷ್ಟ ಉಂಟು..!.
ಚೀನಾ ವಿರೋಧಿ ಅಲೆಯಿಂದ ಭಾರತದ ಬಹುತೇಕ ಟಿಲಿಕಾಂ ವಲಯಗಳು ಹುವೈ ಸಲಕಣೆ ನಿರಾಕರಿಸಿದೆ. ಸ್ಥಳೀಯ ಹಾಗೂ ಬೇರೆ ದೇಶದ ಟೆಲಿಕಾಂ ಸಲಕರಣೆ ಬಳಸುತ್ತಿದೆ. ಇದು ಚೀನಾದ ಹುವೈ ಕಂಪನಿಗೆ ತೀವ್ರ ಹೊಡೆತ ನೀಡಿದೆ. ಸದ್ಯ ಭಾರತದಲ್ಲಿ ಹುವೈ ಇಂಡಿಯಾ ಕೇವಲ ಎರಡು ಟೆಲಿಕಾಂ ಗ್ರಾಹಕರನ್ನು ಹೊಂದಿದೆ. ಒಂದು ಭಾರತಿ ಏರ್‌ಟೆಲ್ , ಇನ್ನೊಂದು ವೋಡಾಫೋನ್ ಐಡಿಯಾ.
ಭಾರತೀ ಏರ್‌ಟೆಲ್ ಹಲವು ರಾಜ್ಯಗಳಲ್ಲಿ ಹುವೈ ಜೊತೆಗಿನ ಒಪ್ಪಂದ ರದ್ದು ಮಾಡಿದೆ. 2017ರಲ್ಲಿ ಭಾರತದಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸಿದ್ದ ಹುವೈ ಈ ವರ್ಷ 350 ರಿಂದ 500 ಮಿಲಿಯನ್ ಆದಾಯ ನಿರೀಕ್ಷೆಯಲ್ಲಿದೆ. ಆದಾಯಲ್ಲಿ ಗಣನೀಯ ಕುಸಿತ ಕಂಡ ಕಾರಣ ಶೇಕಡಾ 60-70 ರಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದೆ.
ಅಮೆರಿಕ ಕೂಡ ಹುವೈ ಸ್ಮಾರ್ಟ್‌ಪೋನ್‌ಗೆ ನಿರ್ಬಂಧ ಹೇರಿತ್ತು. ಹೀಗಾಗಿ ಜಾಗತಿಕವಾಗಿ ಹುವೈ ತೀವ್ರ ಹೊಡೆತ ಅನುಭವಿಸುತ್ತಿದೆ. ಪ್ರಮುಖವಾಗಿ ಭಾರತದಲ್ಲಿ ಟಿಲಿಕಾಂ ವ್ಯವಹಾರ ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಇದೀಗ ಭಾರತದಲ್ಲೇ ಹುವೈ ಹಿಡಿತ ಸಡಿಲಗೊಳ್ಳುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.