ಮೊಬೈಲ್ ಆಯ್ತು, ಈಗ ಭಾರತದಲ್ಲಿ ಟೆಲಿಕಾಂ ಸೇವೆಗೂ ಚೀನಾ ಕಂಪನಿ ಎಂಟ್ರಿ?

By Suvarna News  |  First Published Jan 14, 2020, 7:18 PM IST
  • ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್
  • ಭಾರತೀಯ ಕಂಪನಿಗಳ ಜೊತೆ ಸೇರಿ ವ್ಯವಹಾರಕ್ಕೆ ಮುಂದಾದ ಚೀನಾ ಮೊಬೈಲ್
  • ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಚೀನಾ ಕಂಪನಿ; ಏರ್ಟೆಲ್, ವೊಡಾಫೋನ್‌ ಜೊತೆ ಚರ್ಚೆ

ನವದೆಹಲಿ (ಜ.14) ಭಾರತದ ಟೆಲಿಕಾಂ ಕಂಪನಿಗಳು ಕುಂಟುತ್ತಿರುವ ಬೆನ್ನಲ್ಲಿ, ಚೀನಾದ ಟೆಲಿಕಾಂ ಕಂಪನಿ ಭಾರತದ ಮಾರುಕಟ್ಟೆಗೆ ಕಾಲಿಡುವ ಲೆಕ್ಕಾಚಾರದಲ್ಲಿದೆ ಎಂದು ವರದಿಯಾಗಿದೆ.

ಚೀನಾದ ಅತೀ ದೊಡ್ಡ ಟೆಲಿಕಾಂ ಕಂಪನಿ 'ಚೀನಾ ಮೊಬೈಲ್'  ಭಾರತದಲ್ಲಿ ಏರ್ಟೆಲ್ ಮತ್ತು ವೊಡಾಫೋನ್ ಜೊತೆ ಒಪ್ಪಂದದ ಕುರಿತಂತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

ಇದನ್ನೂ ಓದಿ | ರಾತ್ರಿ ಹೊತ್ತು ಮೊಬೈಲ್ ಚಾರ್ಜ್‌ಗೆ ಹಾಕಿ ಮಲಗ್ತೀರಾ? ಬಂದಿದೆ ಹೊಸ ಫೀಚರ್...

ದೇಶಾದ್ಯಂತ ಕ್ಲೌಡ್ ನೆಟ್ವರ್ಕ್ ಅಭಿವೃದ್ಧಿಪಡಿಸುವ ಕುರಿತು ಭಾರತೀಯ ಕಂಪನಿಗಳ ಜೊತೆ ಚೀನಾ ಮೊಬೈಲ್ ಆರಂಭಿಕ ಹಂತದ ಚರ್ಚೆ ನಡೆಸುತ್ತಿದೆ. ವರದಿಯ ಪ್ರಕಾರ, ಯಾವುದೋ ಒಂದು ಅಥವಾ ಸಾಧ್ಯವಾದರೆ ಎರಡೂ ಕಂಪನಿಗಳ ಜೊತೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಚೀನಾ ಕಂಪನಿ ಸಿದ್ಧವಿದೆ.

ಹೋಲ್ಡಿಂಗ್ ಕಂಪನಿಯಾಗಿ ಎಂಟ್ರಿ ನೀಡುವ ಮೂಲಕ, ಚೀನಾ ಮೊಬೈಲ್‌ ಕಂಪನಿಯು ಆಡಳಿತಾತ್ಮಕ ನೀತಿ ರೂಪಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರಲಿದೆ. ಆದರೆ, ದಿನನಿತ್ಯದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲ್ಲ.

ಇದನ್ನೂ ಓದಿ | ಪೌರತ್ವ ಕಾಯ್ದೆಗೆ ಬೇಸರ ವ್ಯಕ್ತಪಡಿಸಿದ ಮೈಕ್ರೋಸಾಫ್ಟ್ ಸಿಇಒ!...

ಚೀನಾದಲ್ಲಿ ಈಗಾಗಲೇ 900 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಚೀನಾ ಮೊಬೈಲ್ ಕಂಪನಿ ಈಗ ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.

ಅದಕ್ಕಾಗಿಯೇ, ಚೀನಾ ಮೊಬೈಲ್ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್  ಲಿ. ಎಂಬ ಕಂಪನಿಯನ್ನು 2016ರಲ್ಲಿ ಆರಂಭಿಸಿದೆ. ಒಂದು ವೇಳೆ ಈ ಮಾತುಕತೆ ಸಫಲವಾದರೆ, ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಏರ್ಟೆಲ್ ಮತ್ತು ವೊಡಾಫೋನ್‌ಗೆ ವರದಾನವಾಗಲಿದೆ.
    

click me!