ಇನ್ಮುಂದೆ ಮಕ್ಕಳ ಇನ್ಸ್ಟಾ, ಎಫ್ಬಿ... ಎಲ್ಲಾ ಖಾತೆಗಳಿಗೆ ಬ್ರೇಕ್, ತಪ್ಪಿದ್ರೆ ಸಮಸ್ಯೆ ತಪ್ಪಿದ್ದಲ್ಲ. ಏನಿದು ಹೊಸ ರೂಲ್ಸ್? ಡಿಟೇಲ್ಸ್ ಇಲ್ಲಿದೆ
ಕೋವಿಡ್ ನೆಪದಿಂದ ಈಗ ಚಿಕ್ಕಪುಟ್ಟ ಮಕ್ಕಳ ಕೈಯಲ್ಲೂ ಸ್ಮಾರ್ಟ್‌ಫೋನ್ ಬಂದಿದೆ. ಹೊಟ್ಟೆಗೆ ಹಿಟ್ಟಲ್ಲದಿದ್ದರೂ ಕೈಯಲ್ಲೊಂದು ಮೊಬೈಲ್ ಎನ್ನುವ ಸ್ಥಿತಿಗೆ ತಲುಪಲಾಗಿದೆ. ಎಷ್ಟೋ ಮಕ್ಕಳು ಮೊಬೈಲ್ ಕೊಡಿಸಿಲ್ಲ ಎಂದು ಪ್ರಾಣ ಕಳೆದುಕೊಂಡಿರುವ ಘಟನೆಗಳು ಒಂದೆಡೆಯಾದರೆ, ಮೊಬೈಲ್ ನೋಡಿ ಇನ್ನಿಲ್ಲದ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಇಲ್ಲವೇ ಮಿತಿಮೀರುವ ಲೈಂಗಿಕಾಸಕ್ತಿಯನ್ನು ಬೆಳೆಸಿಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಇದಾಗಲೇ ಹಲವು ವರದಿಗಳನ್ನು ನೀಡಿವೆ. ಮಕ್ಕಳು ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಇನ್ನಿಲ್ಲದಂತೆ ತೊಂದರೆಗೆ ಒಳಗಾಗುತ್ತಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಎಲ್ಲದ್ದಕ್ಕೂ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP) ಕಾಯ್ದೆಯ ಕರಡು ನಿಯಮ ರೂಪಿಸಲಾಗಿದ್ದು, ಇದು ಅಂಗೀಕಾರಗೊಂಡರೆ ಶೀಘ್ರದಲ್ಲಿಯೇ ಮಕ್ಕಳ ಜಾಲತಾಣಗಳ ಖಾತೆಗೆ ಬ್ರೇಕ್ ಬೀಳಲಿದೆ.
ಈ ನಿಯಮದ ಅನ್ವಯ 18 ವರ್ಷದ ಒಳಗಿನ ಮಕ್ಕಳು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸುವಂತಿಲ್ಲ. ಒಂದು ವೇಳೆ ಹಾಗೆ ಮಾಡುವುದು ಅನಿವಾರ್ಯವಾದರೆ, ಪೋಷಕರ ಅಥವಾ ಹಿರಿಯರ ಒಪ್ಪಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಮಕ್ಕಳು ಆನ್ಲೈನ್ ಅಕೌಂಟ್ ತೆರೆಯಲು ಹೋದರೆ ಅಲ್ಲಿ ಒಂದು ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿ ಪೋಷಕರು ತಮ್ಮ ಪಾಸ್ವರ್ಡ್ ಎಂಟರ್ ಮಾಡಿ ಓಕೆ ಎಂದು ಕೊಟ್ಟರೆ ಮಾತ್ರ ಅಂಥ ಅಕೌಂಟ್ ತೆರೆಯಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಪೋಷಕರ ಬಳಿ ಯಾವುದಾದರೂ ಸೋಷಿಯಲ್ ಮೀಡಿಯಾ ಅಕೌಂಟ್ ಇದ್ದರೆ ಅದರಿಂದಲೇ ಲಾಗಿನ್ ಆಗಿ ಮಕ್ಕಳಿಗೆ ಅನುಮತಿ ಕೊಡಬಹುದು. ಪಾಲಕರ ಬಳಿ ಯಾವುದೇ ಸೋಷಿಯಲ್ ಮೀಡಿಯಾ ಖಾತೆ ಇಲ್ಲದಿದ್ದರೆ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದಾದರನ್ನೂ ಅಪ್ಲೋಡ್ ಮಾಡಿ ಅನುಮತಿ ಕೊಡಬೇಕಾಗುತ್ತದೆ.
ಟಿ.ವಿ ಪ್ರಿಯರಿಗೆ ಶಾಕ್ ಕೊಟ್ಟ ಕೆಲ ಚಾನೆಲ್ಗಳು: ಫೆ.1 ರಿಂದ ಟಿ.ವಿ ನೋಡುವುದು ಬಲು ದುಬಾರಿ- ಹೀಗಿವೆ ರೇಟ್
ಈಗಿನ ಮಕ್ಕಳು ರಂಗೋಲಿ ಕೆಳಗೆ ನುಸುಳುವ ಜಾಯಮಾನದವರು. ಆದ್ದರಿಂದ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡುವಾಗಲೇ ತಮ್ಮ ವಯಸ್ಸನ್ನು ಹೆಚ್ಚಿಗೆ ತೋರಿಸುವ ಸಾಧ್ಯತೆ ಇರುತ್ತದೆ. ಆದರೆ ಅದಕ್ಕೂ ಬ್ರೇಕ್ ಬೀಳಲಿದೆ. ಸದ್ಯ ಈ ಕರಡು ಪ್ರತಿಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ಜಾಲತಾಣಗಳ ಮಾಲೀಕರಿಗೆ ನಿಯಮ ರೂಪಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ವಯಸ್ಸಿನ ಬಗ್ಗೆ ಇಲ್ಲವೇ ಪಾಲಕರು ಎಂದು ಯಾರದ್ದಾದರೂ ಬಳಿ ವೆರಿಫಿಕೇಷನ್ ಮಾಡಿಸುವುದು ಎಲ್ಲಾ ಮಾಡಿದರೆ ಮಕ್ಕಳು ಕಾನೂನಾತ್ಮಕ ಸಮಸ್ಯೆಗಳಿಗೆ ಎದುರಾಗಬಹುದು. ಹಲವು ವರ್ಷ ಅವರು ಯಾವುದೇ ಸೋಷಿಯಲ್ ಮೀಡಿಯಾ ಖಾತೆ ತೆರೆಯಲು ಆಗದೇ ಇರಬಹುದು ಎನ್ನುವುದನ್ನೂ ಈ ಕರಡು ಪ್ರತಿ ಸೂಚಿಸಿದೆ.
ಅದೇ ರೀತಿ, ಕೆಟ್ಟದ್ದಾಗಿ ಕಮೆಂಟ್ ಹಾಕುವುದು, ನಕಲಿ ಐಡಿ ಇಟ್ಟುಕೊಂಡು ಮನಸೋ ಇಚ್ಛೆ ಬೈಯುವುದು, ನಿಂದನೆ ಮಾಡುವುದು ಇಂಥ ಅಕೌಂಟ್ಗಳ ಮೇಲೂ ಕೇಂದ್ರ ಸರ್ಕಾರ ಕಣ್ಣು ಇಟ್ಟಿದ್ದು, ಇವುಗಳಿಗೂ ಶೀಘ್ರದಲ್ಲಿಯೇ ಸೂಕ್ತ ನಿಯಮ ಜಾರಿಗೆ ಬರಲಿದೆ.
ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್ ಹಿಂದಿರೋ ಸತ್ಯನೇ ಬೇರೆ!