ಗೂಗಲ್ ಸಿಇಒ ಸುಂದರ್ ಪಿಚೈ ಮಹತ್ವದ ಘೋಷಣೆ, 2 ರಾಷ್ಟ್ರಕ್ಕೆ 30 ಸಾವಿರ ಪಿಕ್ಸೆಲ್ ಫೋನ್ ದಾನ!

By Suvarna News  |  First Published Jun 25, 2022, 9:06 PM IST
  • 30,000 ಗೂಗಲ್ ಪಿಕ್ಸೆಲ್ ಮೊಬೈಲ್ ಫೋನ್ ದಾನ ಮಾಡುವುದಾಗಿ ಘೋಷಣೆ
  • ಎರಡು ರಾಷ್ಟ್ರದ ನಿರಾಶ್ರಿತರಿಗಾಗಿ ಈ ಯೋಜನೆ ಘೋಷಿಸಿದ ಪಿಚೈ
  • ಸುಂದರ್ ಪಿಚೈ ನಿರ್ಧಾರಕ್ಕೆ ವಿಶ್ವದೆಲ್ಲೆಡೆಗಳಿಂದ ಭಾರಿ ಮೆಚ್ಚುಗೆ

ನವದೆಹಲಿ(ಜೂ.25): ಗೂಗಲ್ ಸಿಇಒ ಸುಂದರ್ ಪಿಚೈ ಮಹತ್ವದ ಘೋಷಣೆ ಮಾಡಿದ್ದಾರೆ. ಬರೋಬ್ಬರಿ 30,000 ಗೂಗಲ್ ಪಿಕ್ಸೆಲ್ ಮೊಬೈಲ್ ಫೋನ್ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಹೌದು, ಉಕ್ರೇನ್ ಹಾಗೂ ಆಫ್ಘಾನಿಸ್ತಾನದ ನಿರಾಶ್ರಿತರಿಗೆ 30,000 ಗೂಗಲ್ ಪಿಕ್ಸೆಲ್ ಫೋನ್ ದಾನ ಮಾಡುವುದಾಗಿ ಪಿಚೈ ಘೋಷಿಸಿದ್ದಾರೆ.

ರಷ್ಯಾ ಯುದ್ಧದಿಂದ ಉಕ್ರೇನ್ ನಾಗರೀಕರು ನಿರಾಶ್ರಿತರಾಗಿದ್ದಾರೆ. ಹಲವು ನಿರಾಶ್ರಿತರು ಅಮೆರಿಕ ತಲುಪಿದ್ದಾರೆ. ಇತ್ತ ತಾಲಿಬಾನ್ ಆಕ್ರಮಣದ ವೇಳೆ ಆಫ್ಘಾನಿಸ್ತಾನ ಜನ ನಿರಾಶ್ರಿತರಾಗಿ ಅಮೆರಿಕ ತಲುಪಿದ್ದಾರೆ. ಇವರಿಗೆ ನೆರವಾಗಲು ಗೂಗಲ್ ಒಟ್ಟು 30,000 ಗೂಗಲ್ ಪಿಕ್ಸೆಲ್ ಫೋನ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.

Tap to resize

Latest Videos

undefined

ಭಾರತದ ಮಹಿಳಾ ಉದ್ಯಮಿಗಳಿಗೆ ನೆರವು ಘೋಷಿಸಿದ ಗೂಗಲ್

ಈಗಾಗಲೇ 10,000 ಪಿಕ್ಸೆಲ್ ಫೋನ್ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದರಿಂದ ಹಲವು ನಿರಾಶ್ರಿತರಿಗೆ ಈಗಾಗಲೇ ಪಿಕ್ಸೆಲ್ ಮೊಬೈಲ್ ಫೋನ್ ನೀಡಲಾಗಿದೆ. ಇದೇ ಯೋಜನೆಗೆ ಇದೀಗ 20,000 ಫೋನ್ ಸೇರಿಸಲಾಗಿದೆ. ಈ ಕುರಿತು ಸುಂದರ್ ಪಿಚೈ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಫ್ಘಾನಿಸ್ತಾನ ಹಾಗೂ ಉಕ್ರೇನ್‌ನಿಂದ ನಿರಾಶ್ರಿತರಾಗಿ ಅಮೆರಿಕಾಗೆ ಬಂದಿರುವ ಮಂದಿಗೆ ನಿರಾಶ್ರಿತ ನೋವಿನಿಂದ ಹೊರಬಲು ಫೋನ್ ನೀಡಲಾಗುತ್ತಿದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ. 

ಇದರ ಜೊತೆಗೆ ಗೂಗಲ್ ಉಕ್ರೇನ್ ಫಂಡ್ ಮೂಲಕ ಹಲವು ನಿರಾಶ್ರಿತರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇದರಿಂದ  ನಿರಾಶ್ರಿತರಾಗಿ ಅಮೆರಿಕ ತಲುಪಿರುವ ಮಂದಿಗೆ ತಮ್ಮ ರಾಷ್ಟ್ರದಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಲು ಮುಂದಿನ ಜೀವನ ರೂಪಿಸಿಕೊಲ್ಳಲು ನೆರವಾಗಲಿದೆ ಎಂದು ಗೂಗಲ್ ಹೇಳಿದೆ.

ಈಗಾಗಲೇ ಹಲವು ರಾಷ್ಟ್ರಗಳು ನಿರಾಶ್ರಿತರಿಗೆ ನೆರವು ನೀಡುತ್ತಿದೆ. ಇಧರ ನಡುವೆ  ಯುದ್ಧ ಪೀಡಿತ ಉಕ್ರೇನ್‌ ನಿರಾಶ್ರಿತ ಮಕ್ಕಳಿಗಾಗಿ ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರತೋವ್‌, ತಮ್ಮ ನೊಬೆಲ್‌ ಪ್ರಶಸ್ತಿಯನ್ನು ಹರಾಜು ಹಾಕಿದ್ದು, ಅದು ಭರ್ಜರಿ 808 ಕೋಟಿ ರು. ಮಾರಾಟವಾಗಿದೆ. ಪ್ರಶಸ್ತಿಯನ್ನು ಖರೀದಿಸಿದ್ದ ಯಾರು ಎಂಬುದನ್ನು ಹರಾಜು ಸಂಸ್ಥೆ ಬಹಿರಂಗಪಡಿಸಿಲ್ಲ. ಇದು ಇತಿಹಾಸದಲ್ಲೇ ನೊಬೆಲ್‌ ಪ್ರಶಸ್ತಿಗೆ ಸಿಕ್ಕಿದ 2ನೇ ಗರಿಷ್ಠ ಮೊತ್ತವಾಗಿದೆ. ಡಿಮಿಟ್ರಿ ಮುರಾತೋವ ಅವರಿಗೆ 2021ರಲ್ಲಿ ಪತ್ರಕರ್ತರ ವಾಕ್‌ ಸ್ವಾತಂತ್ರ ಕುರಿತು ಹೋರಾಟ ನಡೆಸಿದ್ದಕ್ಕಾಗಿ ನೋಬೆಲ್‌ ಪ್ರಶಸ್ತಿ ದೊರಕಿತ್ತು. ಡಿಮಿಟ್ರಿ ರಷ್ಯಾದ ಪತ್ರಿಕೆ ನೋವಾಯಾ ಗೇಜೆಟ್‌ ಸ್ಥಾಪಕರಾಗಿದ್ದರು. ಮಾಚ್‌ರ್‍ನಲ್ಲಿ ಉಕ್ರೇನ್‌ ಮೇಲಿನ ರಷ್ಯಾ ದಾಳಿ ವೇಳೆ ಪತ್ರಿಕೆ ಮುಚ್ಚಿಹೊಯಿತು. ಹರಾಜಿನಿಂದ ಬಂದ ಹಣ ನೇರವಾಗಿ ‘ಯುನಿಸೆಫ್‌’ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಉಪಟಳಕ್ಕೆ ಬೇಸತ್ತು ಅಲ್ಲಿನ ನಾಗರಿಕರು ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಒಂದು ವೇಳೆ ಭಾರತವನ್ನು ಬೆಂಬಲಿಸುವ ಆಫ್ಘಾನಿಸ್ತಾನ ನಾಗರಿಕರು ಆಶ್ರಯ ಕೋರಿದರೆ, ಅಂಥ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಸರ್ಕಾರ ಚಿಂತನೆ ನಡೆಸಿದೆ.

ಹಿಂಸಾಚಾರದಿಂದ ಪಲಾಯನ ಮಾಡುವ ಎಲ್ಲರಿಗೂ ಆಶ್ರಯ ನೀಡುವ ನಿಟ್ಟಿನಿಂದ ಭಾರತ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಭಾರತದ ಬೆಂಬಲಿಗರನ್ನು ಧರ್ಮವನ್ನು ಪರಿಗಣಿಸದೇ ಸಹಾಯವನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

click me!