ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಯಾರಿಗೇ ಕರೆ ಮಾಡುವ ಮುನ್ನ ಕೊರೋನಾ ವೈರಸ್ ಸಂದೇಶ ಭಾರಿ ಸಂಚಲನ ಮೂಡಿಸಿತ್ತು. ಇದಕ್ಕೆ ಆಕ್ರೋಶವೂ ವ್ಯಕ್ತವಾಗಿತ್ತು. ಕಾರಣ ಕೊರೋನಾ ವೈರಸ್ ಸಂದೇಶ ಪೂರ್ತಿಯಾದ ಬಳಿಕವೇ ಕರೆ ಸಂಪರ್ಕಕ್ಕೆ ಸಿಗುತ್ತಿತ್ತು. ಮಾರ್ಚ್ ತಿಂಗಳಿನಿಂದ ಸರ್ಕಾರದ ಆದೇಶದಂತೆ ಕಡ್ಡಾಯವಾಗಿದ್ದ ಈ ಸಂದೇಶಕ್ಕೆ ಬ್ರೇಕ್ ಹಾಕಲಾಗಿದೆ.
ನವದೆಹಲಿ(ಆ.11): ಕೊರೋನಾ ವೈರಸ್ ಭಾರತದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಪ್ರತಿ ದೂರವಾಣಿ ಕರೆಗೂ ಮುನ್ನ ಕರೋನಾ ವೈರಸ್ ಸಂದೇಶ ಕೇಳಿಸುತ್ತಿತ್ತು. ಇದು ಸರ್ಕಾರದ ಆದೇಶದಂತೆ ಕಡ್ಡಾಯ ಮಾಡಲಾಗಿತ್ತು. 4 ತಿಂಗಳ ಬಳಿಕ ಇದೀಗ BSNL ಕೊರೋನಾ ವೈರಸ್ ಸಂದೇಶದಿಂದ ಗ್ರಾಹಕರಿಗೆ ಮುಕ್ತಿ ನೀಡಿದೆ.
ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್!
undefined
ಕೊರೋನಾ ವೈರಸ್ ಆಡಿಯೋ ಸಂದೇಶದ ವಿರುದ್ಧ ಹಲವು ದೂರುಗಳು ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸರಿಸುಮಾರು 1 ನಿಮಿಷಗಳ ಈ ಸಂದೇಶ ಕೇಳಿಸುತ್ತಿತ್ತು. ಈ ಸಂದೇಶದ ಬಳಿಕವೇ ದೂರವಾಣಿ ಕರೆ ಸಂಪರ್ಕಕ್ಕೆ ಸಿಗುತ್ತಿತ್ತು. ತುರ್ತು ಸಂದರ್ಭದಲ್ಲಿ ಒಂದೊಂದು ನಿಮಿಷವೂ ಅಗತ್ಯವಾಗಿರುತ್ತದೆ. ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ, ಸೇರಿದಂತೆ ಹಲವು ಸಂದರ್ಭಗಳಲ್ಲಿ ಅನಗತ್ಯವಾಗಿ ಕೊರೋನಾ ಸಂದೇಶದಿಂದ ಸಮಸ್ಯೆಯಾಗುತ್ತಿತ್ತು ಎಂದು ದೂರು ದಾಖಲಾಗಿತ್ತು.
ವೇತನ, 4G ಸೇರಿ BSNL ಉದ್ಯೋಗಿಗಳ ಹಲವು ಬೇಡಿಕೆ: ಈಡೇರದಿದ್ದರೆ ಹೋರಾಟ ಎಚ್ಚರಿಕೆ...
ಹಲವು ದೂರುಗಳ ದಾಖಲಾದ ಕಾರಣ BSNL ಕೊರೋನಾ ವೈರಸ್ ಆಡಿಯೋ ಸಂದೇಶನ್ನು ತೆಗೆದುಹಾಕಿದೆ. ಇದರಿಂದ BSNL ಗ್ರಾಹಕರು ನಿಟ್ಟುಸಿರುಬಿಟ್ಟಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿದ BSNL, ಕೊರೋನಾ ವೈರಸ್ ಸಂದೇಶವನ್ನು ಸ್ಟಾಪ್ ಮಾಡಿದೆ. ಇದೀಗ ಇತರ ನೆಟ್‌ವರ್ಕ್ ಗ್ರಾಹಕರ, ನಮಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.