BSNL ಕೇವಲ 88 ರೂಗೆ ಬ್ರಾಡ್‌ಬ್ಯಾಂಡ್ ಪ್ಲಾನ್ ಆಫರ್, 200Mbps ಇಂಟರ್ನೆಟ್‌ನಲ್ಲಿ 26 OTT

Published : Sep 10, 2026, 10:22 PM IST
BSNL Low budget recharge plan

ಸಾರಾಂಶ

ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಒಳ್ಳೆಯ ಆಫರ್ ನೀಡಿದೆ. ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಪ್ಲಾನ್‌ನಲ್ಲಿ ಬರೋಬ್ಬರಿ 6 ತಿಂಗಳವರೆಗೆ ಆಫರ್ ನೀಡುತ್ತಿದೆ. ಕಂಪನಿಯ ಹೊಸ ಪ್ಲಾನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಈ ಯೋಜನೆಯಲ್ಲಿ ಗ್ರಾಹಕರು 200mbps ವೇಗದ ಜೊತೆಗೆ 5000 GB ಡೇಟಾ ಪಡೆಯಲಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಒಳ್ಳೆಯ ಆಫರ್ ನೀಡಿದೆ. ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಪ್ಲಾನ್‌ನಲ್ಲಿ ಬರೋಬ್ಬರಿ 6 ತಿಂಗಳವರೆಗೆ ಆಫರ್ ನೀಡುತ್ತಿದೆ. ಕಂಪನಿಯ ಹೊಸ ಪ್ಲಾನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಈ ಯೋಜನೆಯಲ್ಲಿ ಗ್ರಾಹಕರು 200mbps ವೇಗದ ಜೊತೆಗೆ 5000 GB ಡೇಟಾ ಪಡೆಯಲಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

BSNL ತನ್ನ ಫೈಭರ್ ಸೂಪರ್ ಪ್ಲಸ್ ಒಟಿಟಿ ಪ್ಲಾನ್‌ನಲ್ಲಿ ಈ ರಿಯಾಯಿತಿ ನೀಡುತ್ತಿದೆ. ಈ ಯೋಜನೆಯು ಬಳಕೆದಾರರಿಗೆ 200mbps ವೇಗದ ಜೊತೆಗೆ 5000 GB ಡೇಟಾ ನೀಡುತ್ತಿದೆ. ಒಂದು ವೇಳೆ ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 10mbpsಗೆ ಇಳಿಯುತ್ತದೆ. ಈ ಪ್ಲಾನ್‌ ಅಡಿಯಲ್ಲಿ ನೀವು ಸುಮಾರು 25ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬಳಕೆಗೆ ಅವಕಾಶ ಇದೆ. ಅದರಲ್ಲಿ ಅನಿಯಮಿತ ಕರೆಗಳನ್ನೂ ಸಹ ಮಾಡಬಹುದು.

ಆರು ತಿಂಗಳ ಕಾಲ ಆಫರ್

ಪ್ಲಾನ್‌ನ ಬೆಲೆ ತಿಂಗಳಿಗೆ 1,199 ರೂಪಾಯಿ. ಆಫರ್‍‌ನ ಭಾಗವಾಗಿ ಕಂಪನಿಯು ತನ್ನ ಬಳಕೆದಾರರಿಗೆ ಆರು ತಿಂಗಳವರೆಗೆ 88 ರೂಪಾಯಿಗಳ ರಿಯಾಯತಿ ನೀಡುತ್ತಿದೆ. ಅಂದರೆ ತಿಂಗಳಿಗೆ ನೀವು 1111 ರೂಪಾಯಿ ಪೇ ಮಾಡಿದರೆ ಸಾಕು. ಅಂದ್ಹಾಗೆ ಈ ರಿಯಾಯಿತಿ ಆರು ತಿಂಗಳವರೆಗೆ ಮಾತ್ರ ಅನ್ವಯಿಸುತ್ತದೆ. ನಂತರ ಬಳಕೆದಾರರು 1199 ರೂಪಾಯಿ ಹಣ ಪಾವತಿಸಬೇಕಾಗುತ್ತದೆ. ಇನ್ನು ಅಂತಿಮ ಕೊಡುಗೆ ದಿನಾಂಕವನ್ನು ಬಿಎಸ್‌ಎನ್‌ಎಲ್ ಇನ್ನೂ ಬಹಿರಂಗಪಡಿಸಿಲ್ಲ.

ವಿಶೇಷ ಅಂದ್ರೆ ಅನಿಯಮಿತ ಕರೆಗಳಿಗೆ ಉಚಿತ ಲ್ಯಾಂಡ್‌ಲೈನ್ ಸಂಪರ್ಕವನ್ನೂ ನೀಡುತ್ತದೆ. ಇದರಿಂದ ನೀವು ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ ಜೊತೆ ಕನೆಕ್ಟ್ ಆಗಬಹುದು. ಈಗಾಗಲೇ ನೀವು ರೀಚಾರ್ಜ್‌ ಮಾಡಿ ಮಾಡಿ ಸಾಕಾಗಿದ್ದರೆ, ಈ ದೀರ್ಘಾವಧಿ ಪ್ಲಾನ್‌ಗೆ ಹೋಗಬಹುದು. ಆದರೆ ಇದನ್ನು ನೀವು ಒಂದೇ ಬಾರಿಗೆ ಪಾವತಿಸಬೇಕಾಗುತ್ತದೆ.

ಒಟಿಟಿ ಸೇವೆಗಳು

ಜಿಯೋ ಹಾಟ್‌ಸ್ಟಾರ್, ಲಯನ್ಸ್‌ಗೇಟ್, ಶೆಮರೂ, ಹಂಗಾಮಾ ಆಫ್, ಎಪಿಕ್ ಆನ್, ಸೋನಿಲೈವ್, ಜೀ5, ಮರೋರಾ ಮ್ಯಾಕ್ಸ್, ಚೌಪಾಲ್ ಇತ್ಯಾದಿ ಸೇರಿದಂತೆ 25ಕ್ಕೂ ಹೆಚ್ಚು ಉಚಿತ ಒಟಿಟಿ ಚಂದಾದಾರಿಕೆಗಳು ಸಿಗುತ್ತವೆ. ಈ ಯೋಜನೆಯು 500ಕ್ಕೂ ಹೆಚ್ಚು ಉಚಿತ ಚಾನೆಲ್‌ಗಳೊಂದಿಗೆ IFTV ಸಹ ವೀಕ್ಷಿಸಬಹುದಾಗಿದೆ.

ಇನ್ನು ಈ ಪ್ಲಾನ್ ಪಡೆಯಲು ಗ್ರಾಹಕರು ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿ, ಬಿಎಸ್‌ಎನ್‌ಎಲ್ ವೆಬ್‌ಸೈಟ್, ಬಿಎಸ್‌ಎನ್‌ಎಲ್ ಸೆಲ್ಪ್‌ಕೇರ್ ಅಪ್ಲಿಕೇಷನ್‌ನಿಂದ ಪಡೆಯಬಹುದು. ಗ್ರಾಹಕರು 18004444ಗೆ ವಾಟ್ಸ್‌ಆಪ್ ಮಾಡುವ ಮೂಲಕವೂ ಪ್ಲಾನ್ ಬುಕ್ ಮಾಡಬಹುದು.

ಕಂಪನಿಯು ಫೈಬರ್ ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್‌ ಒಟಿಟಿ ಎಂಬ ಮತ್ತೊಂದು ಪ್ಲಾನ್ ನೀಡುತ್ತಿದೆ. ಇದರ ಬೆಲೆ ತಿಂಗಳಿಗೆ 999 ರೂಪಾಯಿ. ಇದರ ಅಡಿಯಲ್ಲಿ 5000 ಜಿಬಿವರೆಗಿನ ಡೇಟಾದೊಂದಿಗೆ 200ಎಂಬಿಪಿಎಸ್‌ ವೇಗ ಸಿಗಲಿದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 10 ಎಂಬಿಪಿಎಸ್‌ ಗೆ ಇಳಿಯಲಿದೆ. ಈ ಪ್ಲಾನ್‌ನಲ್ಲೂ ನೀವು ಹಲವಾರು ಒಟಿಟಿ ಆಪ್‌ಗಳ ಪ್ರವೇಶ ಪಡೆಯಲಿದ್ದೀರ. ಇದನ್ನು 6 ಅಥವಾ 12 ತಿಂಗಳ ಅವಧಿಗೆ ಖರೀದಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಸಿಗುವ ಟಾಪ್ 10 ದೇಶಗಳು..! ಭಾರತದಲ್ಲಿ ಯಾಕೆ ಇಷ್ಟೊಂದು ದುಬಾರಿ?
iPhone 18 Pro: ಆ್ಯಪಲ್‌ನಿಂದ iPhone 18 ಪ್ರೊ, ಪ್ರೊ ಮ್ಯಾಕ್ಸ್ ಲಾಂಚ್..! ಭಾರತದಲ್ಲಿ ಬೆಲೆ ಎಷ್ಟು? 2 ಐಫೋನ್‌ಗಿರೋ ವ್ಯತ್ಯಾಸವೇನು?