ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಸಿಗುವ ಟಾಪ್ 10 ದೇಶಗಳು..! ಭಾರತದಲ್ಲಿ ಯಾಕೆ ಇಷ್ಟೊಂದು ದುಬಾರಿ?

Published : Sep 10, 2026, 02:12 PM IST
iPhone 18 Pro

ಸಾರಾಂಶ

ಹೊಸ ಐಫೋನ್ 18 ಪ್ರೊ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದರ ಬೆಲೆ ಹೆಚ್ಚಿದೆ. ಆದರೆ ಅಮೆರಿಕ, ಜಪಾನ್, ಮತ್ತು ದುಬೈನಂತಹ ಹಲವು ದೇಶಗಳಲ್ಲಿ ತೆರಿಗೆ ಮತ್ತು ಆಮದು ಸುಂಕದ ಕಾರಣದಿಂದ ಐಫೋನ್‌ಗಳು ಕಡಿಮೆ ಬೆಲೆಗೆ ಲಭ್ಯವಿವೆ. ವಿದೇಶದಿಂದ ಐಫೋನ್ ಖರೀದಿಸುವ ಮುನ್ನ ಪರಿಗಣಿಸಬೇಕಾದ ಅಂಶಗಳ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.

ಇಂದು ಟೆಕ್ ದೈತ್ಯ ಕಂಪನಿಯಾದ ಆ್ಯಪಲ್, ಬಹುನಿರೀಕ್ಷಿತ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಂದಹಾಗೆ ಕಳೆದ ವರ್ಷದ ಐಫೋನ್ 17 ಪ್ರೊ ಮಾಡೆಲ್‌ಗಳಿಗೆ ಹೋಲಿಸಿದರೆ, ಈ ಬಾರಿ ಹಾರ್ಡ್‌ವೇರ್‌ನಲ್ಲಿ ದೊಡ್ಡ ಮಟ್ಟದ ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 12 ರಿಂದ ಪ್ರೀ-ಆರ್ಡರ್ ಶುರುವಾಗಲಿದ್ದು, ಸೆಪ್ಟೆಂಬರ್ 18 ರಿಂದ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಆ್ಯಪಲ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

ಐಫೋನ್‌ ಖರೀದಿಸಬೇಕು ಎಂಬ ಆಸೆ ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿರುತ್ತದೆ. ಆದರೆ ಭಾರತದಲ್ಲಿ ಐಫೋನ್‌ಗಳ ಬೆಲೆ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಹೆಚ್ಚಾಗಿರುವುದು ಗ್ರಾಹಕರ ಗಮನಕ್ಕೆ ಬರುತ್ತದೆ. ಇದೇ ಕಾರಣಕ್ಕೆ ವಿದೇಶಕ್ಕೆ ತೆರಳುವವರು ಅಲ್ಲಿಂದ ಐಫೋನ್‌ ಖರೀದಿಸಿ ಭಾರತಕ್ಕೆ ತರುವ ಬಗ್ಗೆ ಯೋಚಿಸುತ್ತಾರೆ.

ಡಾಯ್ಚ ಬ್ಯಾಂಕ್‌ (Deutsche Bank) ವರದಿ ಹಾಗೂ ಜಾಗತಿಕ ಮಾರುಕಟ್ಟೆಯ ಬೆಲೆಗಳ ಆಧಾರದ ಮೇಲೆ, ಭಾರತಕ್ಕೆ ಹೋಲಿಸಿದರೆ ಕೆಲವು ದೇಶಗಳಲ್ಲಿ ಐಫೋನ್‌ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ತೆರಿಗೆ, ಆಮದು ಸುಂಕ, ಸ್ಥಳೀಯ ಮಾರುಕಟ್ಟೆಯ ಬೆಲೆ ನೀತಿ ಹಾಗೂ ಕರೆನ್ಸಿ ಮೌಲ್ಯ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಿವೆ.

ಅತಿ ಕಡಿಮೆ ಬೆಲೆಗೆ ಐಫೋನ್ ಸಿಗುವ ಟಾಪ್ 10 ದೇಶಗಳು

1. ಅಮೆರಿಕ (USA)

ಐಫೋನ್‌ ಖರೀದಿಸಲು ವಿಶ್ವದ ಅಗ್ಗದ ಮಾರುಕಟ್ಟೆಗಳಲ್ಲಿ ಅಮೆರಿಕ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿ ಐಫೋನ್‌ಗಳ ಮೂಲ ಬೆಲೆ ಹಲವು ದೇಶಗಳಿಗಿಂತ ಕಡಿಮೆಯಿರುತ್ತದೆ. ಆದರೆ ಅಮೆರಿಕದ ಕೆಲವು ರಾಜ್ಯಗಳಲ್ಲಿ ಮಾರಾಟ ತೆರಿಗೆ ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಹೀಗಾಗಿ ಅಂಗಡಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಕಾಣಿಸುವ ಬೆಲೆ ಮತ್ತು ಅಂತಿಮವಾಗಿ ಪಾವತಿಸುವ ಮೊತ್ತ ಒಂದೇ ಆಗಿರುವುದಿಲ್ಲ ಎನ್ನುವುದು ನೆನಪಿರಲಿ.

2. ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ ಕೂಡ ಐಫೋನ್‌ ಕಡಿಮೆ ಬೆಲೆಗೆ ಸಿಗುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆಪಲ್‌ನ ಪ್ರಾದೇಶಿಕ ಬೆಲೆ ನೀತಿ ಹಾಗೂ ಸ್ಥಳೀಯ ತೆರಿಗೆ ವ್ಯವಸ್ಥೆಯಿಂದಾಗಿ ಕೆಲವು ಮಾದರಿಗಳು ಭಾರತಕ್ಕಿಂತ ಕಡಿಮೆ ದರದಲ್ಲಿ ಐಫೋನ್ ಖರೀದಿಸಬಹುದು.

3. ಜಪಾನ್

ಜಪಾನ್‌ನಲ್ಲಿ ಐಫೋನ್‌ಗಳ ಬೆಲೆ ಹಲವು ದೇಶಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕವಾಗಿದೆ. ಅಲ್ಲಿನ ಬಳಕೆ ತೆರಿಗೆ ಹಾಗೂ ಆಪಲ್‌ನ ಪ್ರಾದೇಶಿಕ ಬೆಲೆ ತಂತ್ರಗಾರಿಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಪ್ರವಾಸಿಗರಿಗೆ ಲಭ್ಯವಿರುವ ತೆರಿಗೆ ಮರುಪಾವತಿ ಸೌಲಭ್ಯವೂ ಕೆಲವು ಸಂದರ್ಭಗಳಲ್ಲಿ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಭಾರತಕ್ಕಿಂತ ಜಪಾನ್‌ನಲ್ಲಿ ಕಡಿಮೆ ಬೆಲೆಗೆ ಐಫೋನ್ ದೊರೆಯುತ್ತದೆ.

4. ಹಾಂಗ್ ಕಾಂಗ್

ಹಾಂಗ್ ಕಾಂಗ್‌ನಲ್ಲಿ ಸಾಮಾನ್ಯ VAT ಅಥವಾ Sales Tax ವ್ಯವಸ್ಥೆ ಇಲ್ಲದಿರುವುದು ಎಲೆಕ್ಟ್ರಾನಿಕ್ಸ್‌ ಬೆಲೆ ಕಡಿಮೆ ಇರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಐಫೋನ್‌ ಖರೀದಿಸಲು ಇದು ಜನಪ್ರಿಯ ಮಾರುಕಟ್ಟೆಯಾಗಿದೆ.

5. ತೈವಾನ್

ತೈವಾನ್‌ನಲ್ಲೂ ಕೆಲವು ಐಫೋನ್‌ ಮಾದರಿಗಳು ಭಾರತಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತವೆ. ತೆರಿಗೆ ವ್ಯವಸ್ಥೆ, ಸ್ಥಳೀಯ ಮಾರುಕಟ್ಟೆ ಬೆಲೆ ಮತ್ತು ಕರೆನ್ಸಿ ಮೌಲ್ಯ ಇವುಗಳ ಪ್ರಭಾವದಿಂದಾಗಿ ಗ್ರಾಹಕರಿಗೆ ಬೆಲೆಯಲ್ಲಿ ವ್ಯತ್ಯಾಸ ಕಾಣಿಸಬಹುದು.

6. ಯುನೈಟೆಡ್ ಅರಬ್ ಎಮಿರೇಟ್ಸ್ (UAE)

ಭಾರತೀಯರಿಗೆ ಐಫೋನ್‌ ಖರೀದಿಸಲು ದುಬೈ ಅತ್ಯಂತ ಜನಪ್ರಿಯ ವಿದೇಶಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. UAEಯಲ್ಲಿ ಕಡಿಮೆ ಪ್ರಮಾಣದ VAT ಇರುವುದರ ಜೊತೆಗೆ, ಅರ್ಹ ಪ್ರವಾಸಿಗರಿಗೆ Tax Refund ಸೌಲಭ್ಯವೂ ಲಭ್ಯವಿದೆ. ಹೀಗಾಗಿ ತೆರಿಗೆ ಮರುಪಾವತಿ ಪಡೆಯಲು ಸಾಧ್ಯವಾದರೆ ಐಫೋನ್‌ನ ಒಟ್ಟಾರೆ ಖರೀದಿ ವೆಚ್ಚ ಕಡಿಮೆಯಾಗಬಹುದು.

7. ಕೆನಡಾ

ಕೆನಡಾದಲ್ಲೂ ಕೆಲವು ಐಫೋನ್‌ ಮಾದರಿಗಳು ಭಾರತಕ್ಕಿಂತ ಕಡಿಮೆ ದರದಲ್ಲಿ ಲಭ್ಯವಾಗಬಹುದು. ಆದರೆ ಇಲ್ಲಿ ಪ್ರಾಂತ್ಯದ ಆಧಾರದ ಮೇಲೆ Sales Tax ಬದಲಾಗುವುದರಿಂದ ಅಂತಿಮ ಬೆಲೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗಬಹುದು.

8. ಫಿಲಿಪೈನ್ಸ್

ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಫಿಲಿಪೈನ್ಸ್‌ ಕೂಡ ಐಫೋನ್‌ಗಳಿಗೆ ತುಸು ಕೈಗೆಟುಕುವ ಬೆಲೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಆಪಲ್‌ನ ಪ್ರಾದೇಶಿಕ ಬೆಲೆ ನೀತಿ ಹಾಗೂ ತೆರಿಗೆ ವ್ಯವಸ್ಥೆಯಿಂದಾಗಿ ಕೆಲವು ಮಾದರಿಗಳ ಬೆಲೆ ಭಾರತಕ್ಕಿಂತ ಕಡಿಮೆಯಾಗಿರುತ್ತದೆ.

9. ವಿಯೆಟ್ನಾಂ

ವಿಯೆಟ್ನಾಂನಲ್ಲಿ ಇತ್ತೀಚಿನ ವರ್ಷಗಳಲ್ಲಿ ಐಫೋನ್‌ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಸ್ಥಳೀಯ ಮಾರುಕಟ್ಟೆಯ ಸ್ಪರ್ಧೆ ಹಾಗೂ ಆಪಲ್‌ನ ಬೆಲೆ ನೀತಿಯಿಂದಾಗಿ ಕೆಲವು ಐಫೋನ್‌ ಮಾದರಿಗಳು ಜಾಗತಿಕ ಬೆಲೆಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುತ್ತವೆ.

10. ಚೀನಾ

ಆಪಲ್‌ನ ಪೂರೈಕೆ ಸರಪಳಿಯಲ್ಲಿ ಚೀನಾಕ್ಕೆ ಪ್ರಮುಖ ಸ್ಥಾನವಿದೆ. ಹಲವು ಐಫೋನ್‌ಗಳ ಉತ್ಪಾದನೆ ಮತ್ತು ಅಸೆಂಬ್ಲಿ ಚೀನಾದಲ್ಲಿ ನಡೆಯುವುದರಿಂದ, ಕೆಲವು ಸಂದರ್ಭಗಳಲ್ಲಿ ಸಾಗಣೆ ಮತ್ತು ಪೂರೈಕೆ ಸರಪಳಿ ವೆಚ್ಚದ ಪರಿಣಾಮ ಕಡಿಮೆಯಾಗಬಹುದು.

ಭಾರತದಲ್ಲಿ ಐಫೋನ್‌ ಬೆಲೆ ಏಕೆ ಹೆಚ್ಚಾಗಿದೆ?

ಭಾರತದಲ್ಲಿ ಐಫೋನ್‌ ಬೆಲೆ ಹೆಚ್ಚಾಗಲು ತೆರಿಗೆ ಮತ್ತು ಆಮದು ಸಂಬಂಧಿತ ವೆಚ್ಚಗಳು ಪ್ರಮುಖ ಕಾರಣಗಳಾಗಿವೆ. ಐಫೋನ್‌ ಮೇಲೆ 18% GST ಅನ್ವಯಿಸುತ್ತದೆ. ಇದರ ಜೊತೆಗೆ, ಆಮದು ಮಾಡಿಕೊಳ್ಳುವ ಘಟಕಗಳು ಮತ್ತು ಉತ್ಪನ್ನಗಳಿಗೆ ಸಂಬಂಧಿಸಿದ ಸುಂಕ ಹಾಗೂ ಪೂರೈಕೆ ಸರಪಳಿ ವೆಚ್ಚಗಳು ಅಂತಿಮ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.

ಭಾರತದಲ್ಲಿ ಆಪಲ್‌ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದರೂ, ಎಲ್ಲಾ ಮಾದರಿಗಳು ಮತ್ತು ಎಲ್ಲಾ ಘಟಕಗಳ ಪೂರೈಕೆ ಒಂದೇ ರೀತಿಯಲ್ಲಿ ಸ್ಥಳೀಯವಾಗಿಲ್ಲ. ಹೀಗಾಗಿ ಮಾದರಿ, ಉತ್ಪಾದನಾ ಸ್ಥಳ, ಆಮದು ಮಾಡಿಕೊಳ್ಳುವ ಘಟಕಗಳು ಮತ್ತು ತೆರಿಗೆ ರಚನೆಯ ಆಧಾರದ ಮೇಲೆ ಬೆಲೆ ಬದಲಾಗುತ್ತದೆ.

ಹಾಗಾದರೆ ವಿದೇಶದಿಂದ ಐಫೋನ್‌ ಖರೀದಿಸುವುದು ಉತ್ತಮವಾ?

ವಿದೇಶದಲ್ಲಿ ಐಫೋನ್‌ ಬೆಲೆ ಕಡಿಮೆ ಕಾಣಿಸಿದರೂ, ಭಾರತಕ್ಕೆ ತರುವ ಒಟ್ಟು ವೆಚ್ಚವನ್ನು ಪರಿಗಣಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು. ವಾರಂಟಿ, SIM/eSIM, 5G ಬ್ಯಾಂಡ್‌ಗಳು ಹಾಗೂ ತೆರಿಗೆ ನಿಯಮಗಳನ್ನು ಪರಿಶೀಲಿಸಿದ ಬಳಿಕ ಖರೀದಿಸಿದರೆ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

iPhone 18 Pro: ಆ್ಯಪಲ್‌ನಿಂದ iPhone 18 ಪ್ರೊ, ಪ್ರೊ ಮ್ಯಾಕ್ಸ್ ಲಾಂಚ್..! ಭಾರತದಲ್ಲಿ ಬೆಲೆ ಎಷ್ಟು? 2 ಐಫೋನ್‌ಗಿರೋ ವ್ಯತ್ಯಾಸವೇನು?
ಅಪ್ಪಿತಪ್ಪಿಯೂ ಈ 3 ವೆಬ್‌ಸೈಟ್ ಓಪನ್ ಮಾಡಬೇಡಿ! ನೋಡ್ತಾ ನೋಡ್ತಾ ಬೇರೆ ಲೋಕಕ್ಕೆ ಹೋಗಿಬಿಡ್ತೀರಾ!