ಏಕಕಾಲಕ್ಕೆ 4 ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಕೆ ಸೌಲಭ್ಯ!

By Suvarna News  |  First Published Jul 16, 2021, 10:01 AM IST

* ವಾಟ್ಸಾಪ್ ಹೊಸ ಫೀಚರ್‌ ಪ್ರಾಯೋಗಿಕವಾಗಿ ಜಾರಿ

* ಏಕಕಾಲಕ್ಕೆ 4 ಉಪಕರಣಗಳಲ್ಲಿ ವಾಟ್ಸಾಪ್‌ ಬಳಕೆ ಸೌಲಭ್ಯ

* ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಸೇರಿದಂತೆ ಬಹುವಿಧ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಏಕಕಾಲಕ್ಕೆ ಬಳಕೆ 


 

ನವದೆಹಲಿ(ಜು.16): ವಾಟ್ಸಾಪ್‌ ಆ್ಯಪ್‌ ಅನ್ನು ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಸೇರಿದಂತೆ ಬಹುವಿಧ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಏಕಕಾಲಕ್ಕೆ ಬಳಕೆ ಮಾಡಬಹುದಾದ ವ್ಯವಸ್ಥೆ ಸದ್ಯದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಇದರಿಂದಾಗಿ ಬಳಕೆದಾರರರು ವಾಟ್ಸಾಪ್‌ ಅನ್ನು ತಮ್ಮ ಫೋನ್‌ ಜೊತೆಗೆ ಇತರೆ ಉಪಕರಣಗಳಲ್ಲಿ ಸ್ವತಂತ್ರವಾಗಿ ಬಳಕೆ ಮಾಡಬಹುದಾಗಿದೆ. ಸದ್ಯ ಈ ಫೀಚರ್‌ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

Tap to resize

Latest Videos

undefined

ಹೊಸ ಫೀಚರ್‌ನಲ್ಲಿ ಏನಿದೆ?

-ಪ್ರಸ್ತುತ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಅನ್ನು ಬಳಸಲು ಅವಕಾಶ ಇದೆ. ಆದರೆ, ಇದಕ್ಕೆ ಪೋನ್‌ನಲ್ಲಿರುವ ಅಕೌಂಟ್‌ ಹಾಗೂ ಇಂಟರ್‌ನೆಟ್‌ ಬೇಕು. ಆದರೆ, ಹೊಸ ಫೀಚರ್‌ನಲ್ಲಿ ಫೋನ್‌ ಇಲ್ಲದೇ ಇದ್ದರೂ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಅನ್ನು ಸ್ವತಂತ್ರವಾಗಿ ಬಳಕೆ ಮಾಡಬಹುದಾಗಿದೆ.

-ವಾಟ್ಸಾಪ್‌ನಲ್ಲಿ ಕಳುಹಿಸುವ ಸಂದೇಶಗಳು ಗೂಢಲಿಪಿಗೆ ಪರಿವರ್ತನೆ ಆಗುವುದರಿಂದ ಅವುಗಳನ್ನು ಮೂರನೇ ವ್ಯಕ್ತಿ ಭೇದಿಸುವುದು ಸಾಧ್ಯವಿಲ್ಲ. ಬಹುವಿಧ ಸಾಧನಗಳಲ್ಲಿಯೂ ವಾಟ್ಸಾಪ್‌ ಈ ಸೌಲಭ್ಯವನ್ನು ಕಲ್ಪಿಸಲಿದೆ. ಹೀಗಾಗಿ ಬಳಕೆದಾರರು ವಾಟ್ಸಾಪ್‌ನ ಸುರಕ್ಷತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸಂದೇಶಗಳು ರವಾನೆ ಆದ ಬಳಿಕ ಅವು ಸರ್ವರ್‌ನಲ್ಲಿ ಸಂಗ್ರಹಗೊಂಡಿರುವುದಿಲ್ಲ. ಪ್ರತಿಯೊಂದು ಸಂದೇಶಗಳು ಎನ್‌ಕ್ರಿಪ್ಟ್‌ ಕೋಡ್‌ ಆಗಿ ಪರಿವರ್ತನೆಗೊಳ್ಳುತ್ತವೆ.

- ವಾಟ್ಸಾಪ್‌ ಅನ್ನು ಇತರ ಸಾಧನಗಳಲ್ಲಿ ಬಳಸಲು ಪ್ರಾಥಮಿಕ ಸಾಧನವಾಗಿ ಫೋನ್‌ನ ಅಗತ್ಯವಿದೆ. ಫೋನ್‌ನಲ್ಲಿರುವ ಕ್ಯೂಆರ್‌ ಕೋಡ್‌ ಅನ್ನು ಇತರ ಸಾಧನಗಳಲ್ಲಿ ಸೈನ್‌ ಇನ್‌ ಆಗಲು ಬಳಕೆ ಮಾಡಲಾಗುತ್ತಿದೆ. ಆದರೆ, ಹೊಸ ಫೀಚರ್‌ನಲ್ಲಿ ಫೋನ್‌ ಅನ್ನು ಹತ್ತಿರದಲ್ಲೇ ಇಟ್ಟಕೊಳ್ಳುವ ಅಗತ್ಯತೆ ಇರುವುದಿಲ್ಲ. ಸಣ್ಣ ಪ್ರಮಾಣದ ಬಳಕೆದಾರರ ಗುಂಪಿನಲ್ಲಿ ಬೆಟಾ ಅವೃತ್ತಿಯಾಗಿ ವಾಟ್ಸಾಪ್‌ನ ಹೊಸ ಫೀಚರ್‌ ಅನ್ನು ಜಾರಿ ಮಾಡಲಾಗಿದೆ.

click me!