iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ? ಬೆಲೆ ಬಹಿರಂಗ ಪಡಿಸಿದ Apple!

Published : Oct 19, 2020, 03:58 PM ISTUpdated : Oct 19, 2020, 03:59 PM IST
iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ? ಬೆಲೆ ಬಹಿರಂಗ ಪಡಿಸಿದ Apple!

ಸಾರಾಂಶ

ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪಲ್ ಐಫೋನ್‌ಗೆ ಅಗ್ರಸ್ಥಾನ. ಎಲ್ಲಾ ರೀತಿಯಿಂದ ಐಫೋನ್ ಉತ್ತಮವಾಗಿದೆ. ಬಾಳಿಕೆಯಲ್ಲೂ, ಫೀಚರ್ಸ್, ಹಾಗೂ ವೈಯುಕ್ತಿಕ ಮಾಹಿತಿ ಸುರಕ್ಷಿತವಾಗಿಡಲು ಐಫೋನ್ ಸೂಕ್ತ. ಆದರೆ ಇದರ ಬೆಲೆ ಕೂಡ ದುಬಾರಿಯಾಗಿದೆ. ಇನ್ನು ಈ ಫೋನ್ ರಿಪೇರಿ ಬೆಲೆ ಎಷ್ಟಾಗುತ್ತೆ? ಈ ಕುರಿತ ಮಾಹಿತಿಯನ್ನು ಆ್ಯಪಲ್ ಬಹಿರಂಗ ಪಡಿಸಿದೆ.

ನವದೆಹಲಿ(ಅ.19): ಆ್ಯಪಲ್ ಐಫೋನ್ ಸಾಮಾನ್ಯವಾಗಿಬಿಟ್ಟಿದೆ. ಬಹುತೇಕರು  ಆ್ಯಪಲ್ ಐಫೋನ್ ಬಳಕೆ ಮಾಡುತ್ತಿದ್ದಾರೆ. ಬೆಲೆ ದುಬಾರಿಯಾದರೂ ಹೆಚ್ಚಿನವರೂ ಐಫೋನ್ ಖರೀದಿ ಮಾಡುತ್ತಾರೆ.  ಸೆಕೆಂಡ್ ಹ್ಯಾಂಡ್ ಐಫೋನ್ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಐಫೋನ್ ಬೆಲೆ ಕೊಂಚ ದುಬಾರಿ. ಇದೀಗ ಐಫೋನ್ ರಿಪೇರಿ ಬೆಲೆಯನ್ನೂ ಆ್ಯಪಲ್ ಬಹಿರಂಗ ಪಡಿಸಿದೆ.

ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!

ಭಾರತದಲ್ಲಿ ಚೀನಾ ಮೊಬೈಲ್‌ಗಳು ಕಡಿಮೆ ಬೆಲೆಯಲ್ಲಿ ಐಫೋನ್ ಫೀಚರ್ಸ್ ನೀಡುತ್ತಿದೆ. ಇಷ್ಟಾದರೂ ಐಫೋನ್‌ಗೆ ಭಾರಿ ಬೇಡಿಕೆ ಇದೆ. ಇತ್ತೀಚೆಗೆ ಭಾರತದಲ್ಲಿ ಐಫೋನ್ 12 ಸೀರಿಸ್ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ 64,000 ರೂಪಾಯಿಂದ ಆರಂಭಗೊಳ್ಳುತ್ತಿದೆ.  ಇದೀಗ ಆ್ಯಪಲ್ ಅಧೀಕೃತ ವೆಬ್‌ಸೈಟ್‌ನಲ್ಲಿ ಆ್ಯಪ್ ಫೋನ್ ರಿಪೇರಿ ಬೆಲೆಯನ್ನು ದಾಖಲಿಸಿದೆ.

ಕರ್ನಾಟಕದಲ್ಲಿ iPhone 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ!.

ಐಫೋನ್ 12 ಹಾಗೂ ಐಫೋನ್ 12 ಮಿನಿ ಫೋನ್ ರಿಪೇರಿಗೆ 16,900 ರೂಪಾಯಿ. ಇನ್ನು ಐಫೋನ್ Pro ಹಾಗೂ ಐಫೋನ್ Pro ಮ್ಯಾಕ್ಸ್ ಮೊಬೈಲ್ ರಿಪೇರಿಗೆ 26,000 ರೂಪಾಯಿ. ಅಮೆರಿಕದಲ್ಲಿ ಈ ಬೆಲೆ ನಿಗದಿ ಮಾಡಲಾಗಿದೆ. ಭಾರತದ ರಿಪೇರಿ ಬೆಲೆ ಕೊಂಚ ಹೆಚ್ಚಾಗಲಿದೆ.

iPhone ರಿಪೇರಿ ಬೆಲೆ ಭಾರತೀಯ ರೂಪಾಯಿಗಳಲ್ಲಿ
iPhone 12 ಹಾಗೂ 12 Pro ರಿಪೇರಿ ಬೆಲೆ 21,000 ರೂಪಾಯಿ
iPhone 11 ಸ್ಕ್ರೀನ್ ರಿಪೇರಿ ಬೆಲೆ 14,000 ರೂಪಾಯಿ
iPhone 11 Pro ರಿಪೇರಿ ಬೆಲೆ 21,000 ರೂಪಾಯಿ
iPhone 11 Pro ಮ್ಯಾಕ್ಸ್ ರಿಪೇರಿ ಬೆಲೆ 24,000 ರೂಪಾಯಿ
iPhone XR ರಿಪೇರಿ ಬೆಲೆ 14,000 ರೂಪಾಯಿ
iPhone SE ರಿಪೇರಿ ಬೆಲೆ 10,000 ರೂಪಾಯಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ