ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!

By Suvarna NewsFirst Published Oct 17, 2020, 4:12 PM IST
Highlights

ಭಾರತದ ಮೊಬೈಲ್ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ ಮತ್ತೆ ಬರುತ್ತಿದೆ. ಚೀನಾ ಮೊಬೈಲ್ ಹಾವಳಿಯಿಂದ ಪರದೆ ಹಿಂದೆ ಸರಿದಿದ್ದ ಮೈಕ್ರೋಮ್ಯಾಕ್ಸ್ ಇದೀಗ ಭಾರತೀಯರಿಗಾಗಿ ಇನ್ ಮೊಬೈಲ್ ಸೀರಿಸ್ ಬಿಡುಗಡೆ ಮಾಡಲು ಸಜ್ಜಾಗಿದೆ. 
 

ದೆಹಲಿ(ಅ.17): ಮೈಕ್ರೋಮ್ಯಾಕ್ಸ್ ಮೊಬೈಲ್ ಭರಾತದ ಮೊಬೈಲ್ ಬ್ರ್ಯಾಂಡ್ ಕಂಪನಿ. ಆದರೆ ಚೀನಾ ಮೊಬೈಲ್ ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಸ್ವದೇಶಿ ಮೊಬೈಲ್ ಮೈಕ್ರೋಮ್ಯಾಕ್ಸ್ ಮರೆಯಾಗಿತ್ತು. ಆದರೆ ಇತ್ತೀಗೆ ಸ್ವದೇಶಿ  ವಸ್ತುಗಳ ಬಳಕೆ, ಸ್ವದೇಶಿ ವಸ್ತುಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆ ಇದೀಗ ಹಲವು ಉದ್ಯಮಗಳಿಗೆ ಹೊಸ ಚೈತೈನ್ಯ ನೀಡಿದೆ.  ಆತ್ಮನಿರ್ಭರ್ ಪರಿಕಲ್ಪನೆ ಅಡಿಯಲ್ಲಿ ಭಾರತದ ಮೈಕ್ರೋಮ್ಯಾಕ್ಸ್ ಇಂಡಿಯಾ ಜನರಿಗಾಗಿ  ಇನ್ ಮೊಬೈಲ್ ಸೀರಿಸ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಚೀನಾ ಉತ್ಪನ್ನಗಳಿಗೆ ಬಹಿಷ್ಕಾರ; ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾದ ಭಾರತದ ಮೈಕ್ರೋಮ್ಯಾಕ್ಸ್ !...

ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಹೊಸ ಫೋನ್ ಟೀಸರ್‌ನಲ್ಲಿ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಣ್ಣ ಕುಟುಂಬದಲ್ಲಿ ಹುಟ್ಟಿದ ನಾನು ಗೆಳೆಯರೊಂದಿಗೆ ಸೇರಿ ಮೈಕ್ರೋಮ್ಯಾಕ್ಸ್ ಕಂಪನಿ ಹುಟ್ಟಹಾಕಿದೆ. ಜಗತ್ತಿನಲ್ಲಿ ಅತ್ಯುತ್ತಮ ಬ್ರ್ಯಾಂಡ್ ಕಂಪನಿಯಾಗಿ ಹೊರಹೊಮ್ಮಿತ್ತು. ಆದರೆ ಚೀನಾ ಮೊಬೈಲ್ ಹಾವಳಿಯಿಂದ ಮೈಕ್ರೋಮ್ಯಾಕ್ಸ್ ಪರದೆ ಹಿಂದೆ ಸರಿಯಿತು. ನನ್ನ ಹಾಗು ಕುಟುಂಬ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಿರ್ವಹಣೆ ಮಾಡುತ್ತಿದೆ. ಆದರೆ ದೇಶದ ಗಡಿಯಲ್ಲಿ ನಡೆದ ಘಟನೆ ನನ್ನನ್ನು ಕಾಡುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ್ ಘೋಷಣೆ ಮಾಡಿದರು. ಹೀಗಾಗಿ ಇದೀಗ ಮೈಕ್ರೋಮ್ಯಾಕ್ಸ್ ಭಾರತೀಯರಿಗಾಗಿ ಮತ್ತೆ ಮೈಕ್ರೋಮ್ಯಾಕ್ಸ್ ಇನ್ ಸೀರಿಸ್ ಮೊಬೈಲ್ ಬಿಡುಗಡೆ ಮಾಡುತ್ತಿದೆ ಎಂದು ರಾಹುಲ್ ಶರ್ಮಾ ಹೇಳಿದ್ದಾರೆ.

 

We're with ! What about you? pic.twitter.com/eridOF5MdQ

— Micromax India (@Micromax__India)

ಮತ್ತೊಂದು ವಿಶೇಷ ಅಂದರೆ ಮೈಕ್ರೋಮ್ಯಾಕ್ಸ್  ಇನ್ ಸೀರಿಸ್ ಮೊಬೈಲ್ ಸಂಪೂರ್ಣವಾಗಿ ಭಾರತದಲ್ಲೇ ಉತ್ಪಾದನೆಯಾಗುತ್ತಿರುವ ಮೊಬೈಲ್. ಯಾವ ಬಿಡಿ ಭಾಗವೂ ಆಮದು ಮಾಡಿಕೊಂಡಿಲ್ಲ ಎಂದು ರಾಹುಲ್ ಶರ್ಮಾ ಹೇಳಿದ್ದಾರೆ. ಇಂಡಿಯಾ ಜನತೆ ಬಿಡುಗಡೆ ಮಾಡುತ್ತಿರುವ ಇನ್ ಸೀರಿಸ್ ಸ್ಮಾರ್ಟ್‌ಫೋನ್ ಇದಾಗಿದೆ.

ಕಡಿಮೆ ಬೆಲೆಯ ಅತ್ಯುತ್ತಮ ಫೋನ್ ಬಿಡುಗಡೆ ಮಾಡುವುದಾಗಿ ಮೈಕ್ರೋಮ್ಯಾಕ್ಸ್ ಹೇಳಿದೆ. ಆರಂಭಿಕ ಹಂತದಲ್ಲಿ ಪ್ರಿಮಿಯಂ ಮೊಬೈಲ್ ಸೀರಿಸ್ ಬಿಡುಗಡೆ ಮಾಡುವುದಾಗಿ ಹೇಳಿದೆ. 10,000 ರೂಪಾಯಿ ಒಳಗಿನ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಬಳಿಕ ಹಂತ ಹಂತವಾಗಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ.  

click me!