Apple iPhone Holi Exchange Offer: ಕೇವಲ ₹24,900ಗೆ ಐಫೋನ್‌ 12, 11-13 ಮೇಲೂ ಭರ್ಜರಿ ರಿಯಾಯಿತಿ!

By Suvarna News  |  First Published Mar 18, 2022, 10:24 AM IST

Apple iPhone Holi Exchange ಆಫರ್‌ನಲ್ಲಿ, iPhone 13 ನಿಂದ iPhone 11 ಮೇಲೆ ವಿವಿಧ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಕೇವಲ 24,900 ರೂಗಳಲ್ಲಿ iPhone 12 ಅನ್ನು ಖರೀದಿಸಬಹುದು. 


Tech Desk: ತನ್ನ ಯೂನಿಕ್‌ ಪ್ರೋಡಕ್ಟ್ಸ್‌ಗಳಿಂದ ಹೆಸರುವಾಸಿಯಾಗಿರುವ ಆಪಲ್‌ನ ಐಫೋನ್‌ನ ಕ್ರೇಜ್ ಈಗ ತುಂಬಾ ಹೆಚ್ಚಾಗಿದೆ. ಬಳಕೆದಾರರಲ್ಲಿ ಐಫೋನ್‌ ಬೇಡಿಕೆ ಹೆಚ್ಚಾದಂತೆ ಕಂಪನಿಯು ಕಾಲಕಾಲಕ್ಕೆ ವಿವಿಧ ರಿಯಾಯಿತಿಗಳನ್ನು ನೀಡುತ್ತಲೇ ಇರುತ್ತದೆ. ಈ ನಡುವೆ ಹೋಳಿ ಹಬ್ಬದ ಸಂಭ್ರಮದಲ್ಲಿ ನೀವು ಹೊಸ ಐಫೋನ್ ಖರೀದಿಸಲು ಯೋಚಿಸಿತ್ತಿದ್ದರೆ, ಈಗ ಉತ್ತಮ ಅವಕಾಶ. ಐಫೋನ್‌ ಮೇಲೆ ಹಲವು ರಿಯಾಯಿತಿ ಮತ್ತು ಇತರ ಕೊಡುಗೆಗಳನ್ನು ಕಂಪನಿ ನೀಡುತ್ತಿದೆ, 

ಹೋಳಿ ಮಾರಾಟದಲ್ಲಿ, iPhone 13 ಅನ್ನು ರೂ 53,300 ವರೆಗೆ ಖರೀದಿಸಬಹುದು, ಅಲ್ಲದೇ ನೀವು iPhone 12 ಅನ್ನು ರೂ 24,900 ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದು.  ಹೋಳಿ ಹಬ್ಬದ ಬೆನ್ನಲ್ಲೇ ಐಫೋನ್ ಮಾರಾಟದಲ್ಲಿ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ನೀಡಲಾಗುತ್ತಿದ್ದೂ ಈ ಕೊಡುಗೆಗಳ ಮೂಲಕ ಐಫೋನನ್ನು ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದು. 

Tap to resize

Latest Videos

undefined

9,900 ರೂಪಾಯಿಗಳ ಫ್ಲಾಟ್ ರಿಯಾಯಿತಿ:  ಆ್ಯಪಲ್‌ನ ಅಧಿಕೃತ ಮರುಮಾರಾಟಗಾರ ಆಪ್ಟ್ರೋನಿಕ್ಸ್ (Aptronix) ಭಾರತದಲ್ಲಿ iPhone 12 ಅನ್ನು 9,900 ರೂಪಾಯಿಗಳ ಫ್ಲಾಟ್ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಇದಲ್ಲದೇ ಇದರ ಮೇಲೆ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದ್ದು, ಇದರ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಈ ಮೂಲಕ ಭಾರತದಲ್ಲಿ  iPhone 12  24,900 ರೂ. ಬೆಲೆಯಲ್ಲಿ ಲಭ್ಯವಿದೆ. 

ಇದನ್ನೂ ಓದಿiPhone Tap to Pay: ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್‌ ವೈಶಿಷ್ಟ್ಯ ಘೋಷಿಸಿದ ಆ್ಯಪಲ್‌!

9,900 ಫ್ಲಾಟ್ ರಿಯಾಯಿತಿಯ ನಂತರ,  iPhone 12  64GB ರೂಪಾಂತ 56,000 ರೂ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಅಥವಾ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 5000 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.

ಈ ಕಾರಣದಿಂದಾಗಿ ಫೋನ್‌ನ ಬೆಲೆ  51000 ರೂ.ಗೆ ಇಳಿಯುತ್ತದೆ. ಇದರ ಹೊರತಾಗಿ, ನೀವು ನಿಮ್ಮ ಹಳೆಯ iPhone 11 ಅನ್ನು ವಿನಿಮಯ ಮಾಡಿಕೊಂಡರೆ, ನಿಮಗೆ 23,100 ರೂಪಾಯಿಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಇದಲ್ಲದೆ, ಕಂಪನಿಯು 3,000 ರೂಪಾಯಿಗಳ ವಿನಿಮಯ ಬೋನಸನ್ನು ಸಹ ನೀಡುತ್ತಿದೆ. ಈ ಎಲ್ಲಾ ರಿಯಾಯಿತಿಗಳೊಂದಿಗೆ, ನೀವು 24,900 ರೂಗಳಲ್ಲಿ iPhone 12 ಅನ್ನು ಖರೀದಿಸಬಹುದು.

ಐಫೋನ್ 12 ಖರೀದಿಸುವವರಿಗೆ 5000 ರೂಪಾಯಿಗಳ ಇ-ವೋಚರನ್ನು ಸಹ ನೀಡಲಾಗುತ್ತಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಈ ವೋಚರ್‌ಗಳನ್ನು ಹೇಗೆ ಬಳಸಬಹುದು ಎಂಬುದು ಸ್ಪಷ್ಟವಾಗಿಲ್ಲ. ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿನ Aptronix ಸ್ಟೋರ್‌ಗಳಲ್ಲಿ ಈ ಕೊಡುಗೆ ಲಭ್ಯವಿದೆ.

ಇದನ್ನೂ ಓದಿiPhone 13, 13 Pro Green Version ಪ್ರೀ ಆರ್ಡರ್‌ ಆರಂಭ, ಬೆಲೆ ಎಷ್ಟು?

74,900 ರೂ.ಗೆ ಐಫೋನ್ 13:  ಐಫೋನ್ 13 ನಲ್ಲಿಯೂ ರಿಯಾಯಿತಿ ನೀಡಲಾಗುತ್ತಿದೆ. ಇ-ಕಾಮರ್ಸ್ ಸೈಟ್ ಅಮೇಝಾನ್‌ ನಲ್ಲಿ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದನ್ನು 74,900 ರೂ.ಗೆ ಪಟ್ಟಿ ಮಾಡಲಾಗಿದೆ. ಈ SBI ಕ್ರೆಡಿಟ್ ಕಾರ್ಡ್ ಖರೀದಿಸಲು ಖರೀದಿದಾರರಿಗೆ 6000 ರೂಪಾಯಿಗಳ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಇದಲ್ಲದೇ ಫೋನ್ ನಲ್ಲಿ 15,600 ರೂ.ವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ಆದರೆ  ರಿಯಾಯಿತಿ ಮೌಲ್ಯವು ನಿಮ್ಮ ಫೋನ್‌ನ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಐಫೋನ್ 11 ಅನ್ನು ಸಹ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲಾಗಿದೆ. ಅಮೆಜಾನ್ ನಲ್ಲಿ 49,900 ರೂ.ಗೆ ಮಾರಾಟವಾಗುತ್ತಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ 4,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಇದರಿಂದ ಅದರ ಮೌಲ್ಯ 45,900 ರೂ ಗೆ ಇಳಿಕೆಯಾಗಿದೆ. ಇದಲ್ಲದೇ ಫೋನ್‌ನಲ್ಲಿ 13,750 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ.

click me!