* ಜೆಡ್ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಚೀನಾ ಮೂಲದ ಐಕ್ಯೂ
* ಐಕ್ಯೂ ಜೆಡ್6 5ಜಿ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆಯುತ್ತಿಗೆ, ಕ್ಯಾಮೆರಾ ಚೆನ್ನಾಗಿದೆ
* ಕ್ರೋಮಿಟಿಕ್ ಬ್ಲೂ, ಡೈನಮೊ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಈ ಫೋನು ಮಾರಾಟಕ್ಕೆ ಲಭ್ಯ
Tech Desk: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಎಂಟ್ರಿ ಕೊಟ್ಟಿದೆ. ಚೀನಾ ಮೂಲದ ಐಕ್ಯೂ (iQoo) ಕಂಪನಿಯು ತನ್ನ ಹೊಸ ಐಕ್ಯೂ ಜೆಡ್6 5ಜಿ (iQoo Z6 5G) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಇದು ಜೆಡ್ ಸೀರೀಸ್‌ನಲ್ಲಿ ಮತ್ತೊಂದು ಹೊಸ ಫೋನ್ ಆಗಿದೆ. ಚೀನಾ ಮೂಲದ ಐಕ್ಯೂ, ವಿವೋ (Vivo) ಸ್ಮಾರ್ಟ್‌ಫೋನ್ ಕಂಪನಿಗೆ ಸೇರಿದ ಬ್ರ್ಯಾಂಡ್ ಆಗಿದ್ದು, 2019ರಲ್ಲಿ ಆರಂಭವಾಯಿತು. ಈ ಬ್ರ್ಯಾಂಡ್ ಆರಂಭವಾದ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುತ್ತಾ ಬಂದಿದೆ.
ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನುಗಳ ಮೂಲಕ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಹಾಗಾಗಿ, ಬೇಡಿಕೆಗೆ ಅನುಗುಣವಾಗಿಯೇ ಸ್ಮಾರ್ಟ್‌ಫೋನುಗಳ್ನು ಲಾಂಚ್ ಮಾಡುತ್ತಿದೆ. ಇನ್ನು, ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಐಕ್ಯೂ ಜೆಡ್6 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಹೇಳುವುದಾದರೆ, ಇದು ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.
undefined
ಕ್ಯಾಮೆರಾಗೆ ಸಂಬಂಧಿಸಿದಂತೆ ಸೂಪರ್ ನೈಟ್ ಮೋಡ್, ಬೊಕೆ ಮೋಡ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಡಿಪಾಲ್ಡ್ ಆಗಿಯೇ ಹೊಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ರೆಡ್‌ಮಿ ನೋಟ್ ನೋಟ್ 11 ಪ್ರೋ+ (Redmi Note 11 Pro+ 5G), ವಿವೋ ಟಿ1 5ಜಿ (Vivo T1 5G), ಸ್ಯಾಮ್ಸಂಗ್ ಗ್ಯಾಲಕ್ಸಿ ಎ52 (Samsung Galaxy A52) ಸ್ಮಾರ್ಟ್‌ಫೋನುಗಳಿಗೆ ಈ ಫೋನ್ ಪೈಪೋಟಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: Boat Wave Pro 47 ಸ್ಮಾರ್ಟ್ ವಾಚ್ ಲಾಂಚ್, ಗಮನಸೆಳೆಯುವ ಫೀಚರ್‌ಗಳು!
ಏನೆಲ್ಲ ವಿಶೇಷತೆಗಳಿವೆ?: ಐಕ್ಯೂ ಜೆಡ್ 6 5ಜಿ ಸ್ಮಾರ್ಟ್‌ಫೋನ್ ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಹೊಂದಿದೆ. ಈ ಫೋನ್ ಡ್ಯುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 12 ಆಧರಿತ ಫನ್‌ಟಜ್ ಒಎಸ್ 12 ಸಹಾಯದಿಂದ ರನ್ ಆಗುತ್ತದೆ. 6.58-ಇಂಚಿನ ಪೂರ್ಣ-HD+ (1,080x2,408 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ.
ಈ ಹೊಸ ಸ್ಮಾರ್ಟ್‌ಫೋನಿನಲ್ಲಿ 8GB LPDDR4X RAM ಜತೆಗೆ ಅಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 695 ಎಸ್ಒಸಿ ಇರುವುದನ್ನು ನೋಡಬಹುದು. iQoo Z6 5G ಪ್ರಮಾಣಿತವಾಗಿ 128GB UFS 2.2 ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ. ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
50 ಮೆಗಾ ಪಿಕ್ಸೆಲ್ ಕ್ಯಾಮೆರಾ: iQoo Z6 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕಂಪನಿಯು ಮೂರು ಕ್ಯಾಮೆರಾಗಳ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಗಾ ಪಿಕ್ಸೆಲ್ ಬೊಕ್ ಕ್ಯಾಮೆರಾಗಳಾಗಿವೆ. Bokeh ಕ್ಯಾಮೆರಾ 6 ಜಿಬಿ ಮತ್ತು 8 ಜಿಬಿ ವೆರಿಯೆಂಟ್‌ಗಳಲ್ಲಿ ಮಾತ್ರವೇ ಸಿಗಲಿದೆ. 4 ಜಿಬಿ ವೆರಿಯೆಂಟ್ ಫೋನ್‌ನಲ್ಲಿ ನೀವು ಕ್ಯಾಮೆರಾ ಕಾಣಲಾರಿರಿ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಚಾಟಿಂಗ್‌ಗೆ ನೆರವಾಗಲು ಕಂಪನಿಯು ಫೋನ್ ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ.
ಇದನ್ನೂ ಓದಿ:
ಬೆಲೆ ಎಷ್ಟು, ಆಫರ್ಸ್ ಏನಿದೆ?: 4 ಜಿಬಿ ವೆರಿಯೆಂಟ್ iQoo Z6 5G ಆರಂಭಿಕ ಬೆಲೆ 15,999 ರೂ ಇದ್ದರೆ, 6GB ವೆರಿಯೆಂಟ್ ಬೆಲೆ 16,999 ರೂ. ಹಾಗೆಯೇ, 8GB ಫೋನ್ ಬೆಲೆ 17,999 ರೂಪಾಯಿ. ಲಾಂಚ್ ಆಫರ್ಸ್ ಆಗಿ ಕಂಪನಿಯು 2 ಸಾವಿರ ಇನ್ಸಟಂಟ್ ಡಿಸ್ಕೌಂಟ್ ನೀಡುತ್ತಿದೆ. ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಅಥವಾ ಇಎಂಐಗೆ ಮಾತ್ರವೇ ಈ ಆಫರ್ಸ್ ಇರಲಿದೆ. ಹಾಗೆಯೇ ಈ ಫೋನು ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಡ್ ಆಫರ್‌ನಲ್ಲಿ ಸಿಗಲಿದೆ. ಕ್ರೋಮಿಟಿಕ್ ಬ್ಲೂ, ಡೈನಮೊ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಈ ಫೋನು ಸಿಗಲಿದ್ದು, ಮಾರ್ಚ್ 22ರಿಂದ ಗ್ರಾಹಕರು ಅಮೆಜಾನ್ ಮತ್ತು ಐಕ್ಯೂ ಇಂಡಿಯಾ ಇ ಸ್ಟೋರ್‌ನಿಂದ ಖರೀದಿಸಬಹುದಾಗಿದೆ.