*ಶಿಯೊಮಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ಮತ್ತೊಂದು ಸ್ಮಾರ್ಟ್ ಲಾಂಚ್ ಮಾಡಿದೆ
*ರೆಡ್‌ಮಿ 10 ಪ್ರೋ ಫೋನ್‌ಗೆ ಹೋಲಿಸಿದರೆ ರೆಡ್‌ಮಿ 10 ಸ್ಮಾರ್ಟ್‌ಫೋನ್ ಅಗ್ಗವಾಗಿದೆ
*ಈ ಫೋನಿನಲ್ಲಿ ಕಂಪನಿಯು 50 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ.
ಸ್ಮಾರ್ಟ್‌ಫೋನ್ ಲುಕ್ ಮತ್ತು ಫೀಚರ್‌ಗಳನ್ನು ಒಳಗೊಂಡಿರುವ ಬಜೆಟ್ ಸ್ಮಾರ್ಟ್‌ಫೋನ್ ರೆಡ್‌ಮಿ (Redmi), ಭಾರತೀಯ ಮಾರುಕಟ್ಟೆಗೆ ಗುರುವಾರ ರೆಡ್‌ಮಿ 10 (Redmi 10) ಮೊಬೈಲ್ ಲಾಂಚ್ ಮಾಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ರೆಡ್‌ಮಿ 10 ಪ್ರೋ (Redmi 10 Pro) ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ, ರೆಡ್‌ಮಿ 10 ಅಗ್ಗದ ಫೋನ್ ಆಗಿದೆ ಮತ್ತು ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಬೇಕು ಎನ್ನುವವರು ಇಚ್ಛೆಯನ್ನು ಈಡೇರಿಸಲಿದೆ. ಮಾರ್ಚ್ 24ರಿಂದ ಮಾರಾಟಕ್ಕೆ ಲಭ್ಯ ಇರಲಿರುವ ಈ ಫೋನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 10,999 ರೂಪಾಯಿಯಿಂದ ಆರಂಭವಾಗುತ್ತದೆ. ಚೀನಾ ಮೂಲದ ಹಾಗೂ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಪೈಕಿ ಪ್ರಮುಖ ಎನಿಸಿರುವ ಶಿಯೋಮಿ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ತನ್ನ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಗ್ರಾಹಕರನ್ನು ಪಡೆದುಕೊಂಡಿದೆ. ವಿಶೇಷವಾಗಿ ಬಜೆಟ್ ಫೋನ್‌ಗಳು ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ ಎಂಬ ಅಭಿಪ್ರಾಯ ಬಳಕೆದಾರರಲ್ಲಿದೆ. ಇದೀಗ ಕಂಪನಿ ಬಿಡುಗಡೆ ಮಾಡಿರುವ ರೆಡ್‌ಮಿ 10 ಕೂಡ ಬಜೆಟ್ ಫೋನ್ ಆಗಿರುವುದರಿಂದ ಬಳಕೆದಾರರ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.
iQoo Z6 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ? ಕ್ಯಾಮೆರಾ ಹೇಗಿದೆ? ಏನೆಲ್ಲ ಫೀಚರ್ಸ್?
undefined
Redmi 10 ಮೊದಲ ಬಾರಿಗೆ 2021ರಲ್ಲಿ ಬಿಡುಗಡೆಯಾಯಿತು. ಆನಂತರ ಶಿಯೋಮಿ ಇದೇ ಫೋನ್ ಅನ್ನು ಅದೇ ಫೀಚರ್‌ಗಳೊಂದಿಗೆ 2022ರಲ್ಲಿ ಲಾಂಚ್ ಮಾಡಿತು. ಆದರೆ, ವಾಟರ್‌ಡ್ರಾಪ್-ಶೈಲಿಯ ನಾಚ್ ಮತ್ತು ನವೀಕರಿಸಿದ ಹಾರ್ಡ್‌ವೇರ್‌ನೊಂದಿಗೆ ಟ್ವೀಕ್ ಮಾಡಿದ ವಿನ್ಯಾಸದೊಂದಿಗೆ ಭಾರತಕ್ಕೆ ಬರುವ ಮಾದರಿಯು ವಿಭಿನ್ನವಾಗಿದೆ. ಹಾಗೆಯೇ ಇದು ಇತ್ತೀಚೆಗ ನೈಜೀರಿಯಾದಲ್ಲಿ ಬಿಡುಗಡೆಯಾದ ರೆಡ್‌ಮಿ 10 ಸಿ (Redmi 10C) ಸ್ಮಾರ್ಟ್‌ಫೋನ್ ಆಧರಿತವಾಗಿದೆ ಎಂದು ಹೇಳಬಹುದು.
ಈಗಾಗಲೇ ಹೇಳಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಈ ರೆಡ್‌ಮಿ 10 ಸ್ಮಾರ್ಟ್‌ಫೋನ್ ಬೆಲೆ 10,999 ರೂ.ನಿಂದ (4 GB RAM ಮತ್ತು 64 GB ಸ್ಟೋರೇಜ್) ಆರಂಭವಾಗುತ್ತದೆ. ಹಾಗೆಯೇ, 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 12,999 ರೂ. ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡುದಾರರು ರೆಡ್‌ಮಿ 10 ಸ್ಮಾರ್ಟ್‌ಫೋನ್ ಖರೀದಿ ಮೇಲೆ 1000 ರೂ. ಡಿಸ್ಕೌಂಟ್ ಕೂಡ ಸಿಗಲಿದೆ. ಈ ಫೋನು ಕೆರಬಿಯನ್ ಗ್ರೀನ್, ಪೆಸಿಫಿಕ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣ ಆಯ್ಕೆಯಲ್ಲಿ ಬಳಕೆದಾರರಿಗೆ ಸಿಗಲಿದೆ. ಸ್ಮಾರ್ಟ್‌ಫೋನ್ ಮಾರ್ಚ್ 17ರಂದು ಲಾಂಚ್ ಆಗಿದ್ದರೂ, ಮಾರ್ಚ್ 24ರಿಂದ Mi.com, ಫ್ಲಿಪ್‌ಕಾರ್ಟ್, ಎಂಐ ಹೋಮ್, ಎಂಐ ಸ್ಟುಡಿಯೂಗಳಲ್ಲಿ ಮಾರಾಟಕ್ಕೆ ಸಿಗಲಿದೆ.
ರೆಡ್‌ಮಿ 10 ಆಂಡ್ರಾಯ್ಡ್ ಆಧರಿತ ಎಂಐಯುಐ 13 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ಸ್ಮಾರ್ಟ್‌ಫೋನಿನಲ್ಲಿ ನೀವು 10 6.71-ಇಂಚಿನ 720p IPS LCD ಡಿಸ್‌ಪ್ಲೇ ಜೊತೆಗೆ 60Hz ರಿಫ್ರೆಶ್ ರೇಟ್ ಮತ್ತು ವಾಟರ್‌ಡ್ರಾಪ್-ಶೈಲಿಯ ನಾಚ್ ಇದೆ. ಡಿಸ್‌ಪ್ಲೇಗೆ ಬಳಸಲಾಗಿರುವ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3ರಿಂದ ರಕ್ಷಿಸಲಾಗಿದೆ. Qualcomm Snapdragon 680 ಪ್ರೊಸೆಸರ್ ಇದ್ದು, 6 GB RAM ಮತ್ತು 128 GB UFS2.2 ಸ್ಟೋರೇಜ್‌ನೊಂದಿಗೆ ಸಂಯೋಜಿತಗೊಂಡಿದೆ. ಬಳಕೆದಾರರು ರೆಡ್‌ಮಿ 10 ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
Boat Wave Pro 47 ಸ್ಮಾರ್ಟ್ ವಾಚ್ ಲಾಂಚ್, ಗಮನಸೆಳೆಯುವ ಫೀಚರ್‌ಗಳು!
ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾದರೆ ರೆಡ್‌ಮಿ 10 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕಂಪನಿಯು ಡುಯಲ್ ಕ್ಯಾಮೆರಾ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ರೆ, ಮತ್ತೊಂದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಚಾಟಿಂಗ್‌ಗಾಗಿ ಕಂಪನಿಯು ಫೋನ್ ಫ್ರಂಟ್‌ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ. ಹಾಗೆ ನೋಡಿದರೆ, ಈ ಬಜೆಟ್ ಫೋನಿನಲ್ಲಿ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿರುವುದು ಹಣದ ದೃಷ್ಟಿಯಿಂದ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ರೆಡ್‌ಮಿ 10ನಲ್ಲಿ ಕಂಪನಿಯು 6000 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಈ ಬ್ಯಾಟರಿಯು 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.