
ನವದೆಹಲಿ (ಸೆ.12) ಆ್ಯಪಲ್ 17 ಬಿಡುಗಡೆಯಾಗಿ ಭರ್ಜರಿ ಮಾರಾಟ ಕಾಣುತ್ತಿದೆ. ಐಫೋನ್ 17 ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಆ್ಯಪಲ್ ತನ್ನ ಐಫೋನ್‌ಗೆ ನೀಡುತ್ತಿರುವ ಹೈಪ್ ಮೂಲಕ ಹಣ ಮಾಡಿಕೊಳ್ಳುತ್ತಿದೆಯಾ? ಈ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಐಫೋನ್ 17 ಸಿಕ್ಕಿರುವ ಪ್ರಚಾರ ಹಾಗೂ ಐಫೋನ್ 17 ಅಸಲಿಯತ್ತು. ಇನ್ನೋವೇಶನ್‌ಗಿಂತ ಐಫೋನ್ 17ನಲ್ಲಿ ಹೈಪ್ ಜಾಸ್ತಿಯಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ವರ್ಷ ಆ್ಯಪಲ್ ಅಪ್‌ಗ್ರೇಡೆಡ್ ವರ್ಶನ್ ಐಫೋನ್ ಬಿಡುಗಡೆ ಮಾಡುತ್ತಿದೆ. ಆದರೆ ನಿಜಕ್ಕೂ ಇದು ಅಪ್‌ಗ್ರೇಡೆಡ್, ಇನ್ನೋವೇಶನ್ ಐಫೋನ್ ಆಗಿದೆಯಾ?
ಆ್ಯಪಲ್ ಐಫೋನ್ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಇನ್ನೋವೇಶನ್ ಮೂಲಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಆದರೆ 2019 ರಿಂದ ಅಂದರೆ ಐಫೋನ್ 11 ರಿಂದ ಐಫೋನ್ 17ರ ವರೆಗೆ ಆ್ಯಪಲ್ ಮಾಡಿದ ಇನ್ನೋವೇಶನ್ ಏನು? ಪ್ರತಿ ವರ್ಷ ಹೊಸ ಬಾಟಲಿಯಲ್ಲಿ ಹಳೇ ವೈನ್ ಅನ್ನೋ ರೀತಿ. ಪ್ರತಿ ವರ್ಷ ಆ್ಯಪಲ್ ಹೊಸ ಹೊಸ ಉತ್ಪನ್ನ, ಎಐ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ್ ಟೆಕ್ ಚಾಲಿತ ಫೋನ್ ಬಿಡುಗಡೆ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತೆ. ಆದರೆ ನಿಜಕ್ಕೂ ಏನು?
ಭಾರತದಿಂದ ವಿಮಾನ ಹತ್ತಿ ದುಬೈನಲ್ಲಿ ಹೊಸ ಐಫೋನ್ ಖರೀದಿಸಿ ವಾಪಾಸ್ಸಾದರೂ ಹಣ ಉಳಿತಾಯ
ಐಫೋನ್ 11 ರಿಂದ ಐಫೋನ್ 17ರ ವರೆಗೆ ಡಿಸೈನ್‌ನಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಇನ್ನು ಕ್ಯಾಮೆರಾದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಚಿಪ್ ಅಪ್‌ಗ್ರೇಡ್ ಮಾಡಲಾಗಿದೆ. ಆದರೆ ಇದು ಮಹತ್ತರ ಬದಲಾವಣೆಯಲ್ಲ ಅಥವಾ ಇನ್ನೋವೇಶನ್ ಅಲ್ಲ. ಐಫೋನ್ ಬಳಕೆದಾರರು ಇದಕ್ಕಿಂತ ಹೆಚ್ಚು ಬಯಸುತ್ತಿದ್ದಾರೆ. ಟೆಕ್ ಟ್ರಾನ್ಸ್‌ಫಾರ್ಮೇಶನ್ ಬಯಸುತ್ತಿದ್ದಾರೆ. ಆದರೆ ಆ್ಯಪಲ್ ಐಫೋನ್ ಕಳೆದ ಹಲವು ವರ್ಷಗಳಿಂದ ನೀಡಿಲ್ಲ ಎನ್ನುತ್ತಿದೆ ವರದಿ.
ಹಲವರು ಆ್ಯಪಲ್ ಐಫೋನ್ 17 ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಹಲವರು ಖರೀದಿಸಿದ್ದಾರೆ. ಮತ್ತೆ ಕೆಲವರು ತಮ್ಮ ಐಫೋನ್ ಅಪ್‌ಗ್ರೇಡ್ ಮಾಡಲು ಬಯಸುತ್ತಿದ್ದಾರೆ. ಇಎಂಐ ಮೂಲಕ ಐಫೋನ್ ಖರೀದಿ ಹೆಚ್ಚಾಗುತ್ತಿದೆ. ಇದು ಐಫೋನ್‌ನಲ್ಲಿರುವ ಫೀಚರ್, ಟೆಕ್ ಕಾರಣಕ್ಕಲ್ಲ. ಕೇವಲ ಸ್ಟೇಟಸ್ ಕಾರಣಕ್ಕೆ. ನನಗೂ ಐಫೋನ್ ಬೇಕು, ರಿಂಗ್ ಆದಾಗ, ಫೋಟೋ ತೆಗೆಯುವಾಗ, ಮಾತನಾಡುವಾಗ ನನ್ನಲ್ಲೂ ಐಫೋನ್ ಇರಬೇಕು. ನನ್ನ ಸ್ಟೇಟಸ್‌ಗೆ ಐಫೋನ್ ಬೇಕು ಎಂದುಕೊಂಡು ಖರೀದಿಸುವವರ ಸಂಖ್ಯೆ ಹೆಚ್ಚು ಹೊರತು, ಐಫೋನ್‌ನಲ್ಲಿ ತಂತ್ರಜ್ಞಾನದಿಂದ ಅಲ್ಲ ಅನ್ನೋದು ಹಲವರ ಅಭಿಪ್ರಾಯ.
ಫೀಚರ್, ಟೆಕ್ ಸೇರಿದಂತೆ ಯಾವುದೇ ವಿಚಾರ ಮುನ್ನಲೆ ಬಂದಾಗ ಆ್ಯಪಲ್ ನೇರವಾಗಿ ಸುರಕ್ಷತೆ ಅಂಶ ಮುಂದಿಡುತ್ತದೆ. ಹೌದು, ಆ್ಯಪಲ್ ಐಫೋನ್ ಇತರ ಫೋನ್‌ಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ. ಇದು ಐಫೋನ್ ಒಂದು ಫೀಚರ್ ಅನ್ನೋದು ಎರಡು ಮಾತಿಲ್ಲ. ಇದು ಎಲ್ಲಾ ಐಫೋನ್‌ಗಳಲ್ಲಿದೆ. ಇದನ್ನು ಹೊರತುಪಡಿಸಿ ಹೊಸ ಫೀಚರ್ ಏನಿದೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ.
ಪ್ರತಿ ಬಾರಿ ಆ್ಯಪಲ್ 9.41ಕ್ಕೆ ಐಫೋನ್ ಲಾಂಚ್ ಮಾಡುವುದೇಕೆ? ರಹಸ್ಯ ಬಹಿರಂಗ
ಐಫೋನ್ ಭಾರತ ಮಾತ್ರವಲ್ಲ ಬಹುತೇಕ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ಫೋನ್. ಇತ್ತ ಆ್ಯಪಲ್ ಎಲ್ಲಾ ಉತ್ಪನ್ನಗಳು ಭಾರಿ ಬೇಡಿಕೆ ಪಡೆದುಕೊಂಡಿದೆ. ಐಫೋನ್ ಇದೀಗ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಹಲವು ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಈ ಪೈಕಿ ಅಮೆರಿಕಗೂ ರಫ್ತಾಗುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.