
ನವದೆಹಲಿ (ಸೆ.10) ಆ್ಯಪಲ್ ಐಫೋನ್ 17 ಬಿಡುಗಡೆ ಮಾಡಿ ಭಾರಿ ಸುದ್ದಿಯಲ್ಲಿದೆ. ಐಫೋನ್ 17 ಬೇಡಿಕೆ ಹೆಚ್ಚಾಗುತ್ತಿದೆ. ಹಲವು ವಿಶೇಷತೆ, ಸ್ಲಿಮ್ ಡಿಸೈನ್ ಸೇರಿದಂತೆ ಅತ್ಯಾಕರ್ಷಕ ಐಫೋನ್ 17 ಬಿಡುಗಡೆಯಾಗಿದೆ. ಆದರೆ ಆ್ಯಪಲ್ ಪ್ರತಿ ಭಾರಿ ಐಫೋನ್, ಐಪಾಡ್, ಮ್ಯಾಕ್ ಸೇರಿದಂತೆ ಯಾವುದೇ ಉತ್ಪನ್ನ ಲಾಂಚ್ ಮಾಡುವುದು 9.41ಕ್ಕೆ. ಆ್ಯಪಲ್ ಉತ್ಪನ್ನ ಯಾವುದೇ ಇರಲಿ, ಸಮಯ ಬದಲಾಗಲ್ಲ. ಅದೆಷ್ಟೇ ವರ್ಷ ಉರುಳಿದರೂ ಎಲ್ಲಾ ಆ್ಯಪಲ್ ಉತ್ಪನ್ನ ಲಾಂಚ್ ಸಮಯ ಬದಲಾಗಿಲ್ಲ. ಹಲವು ವರ್ಷಗಳ ಈ ಸೀಕ್ರೆಟ್ ಇದೀಗ ಬಯಲಾಗಿದೆ.
ಆ್ಯಪಲ್ ತನ್ನ ಎಲ್ಲಾ ಉತ್ಪನ್ನಗಳನ್ನು 9.41ಕ್ಕೆ ಲಾಂಚ್ ಮಾಡುತ್ತದೆ. ಇದು ಆ್ಯಪಲ್ ಸಿಗ್ನೇಚರ್ ಸಮಯ. ಯಾವುದೇ ಉತ್ಪನ್ನ ಲಾಂಚ್ ಮಾಡುವುದಿದ್ದರೂ ಈ ಸಮಯ ಬದಲಾಗುವುದಿಲ್ಲ. ಇನ್ನು ಯಾವುದೇ ಉತ್ಪನ್ನ ಲಾಂಚ್ ಒಟ್ಟು ಸಮಯ 40 ನಿಮಿಷಕ್ಕೆ ಫಿಕ್ಸ್ ಮಾಡಲಾಗುತ್ತದೆ. ಈ ಸಮಯ ನಿಗಧಿಪಡಿಸಿದ್ದು ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್. ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧರಾಗಿ ದಶಕಗಳೇ ಉರುಳಿದೆ. ಆದರೆ ಸಂಪ್ರದಾಯ ಬದಲಾಗಿಲ್ಲ.
ಭಾರತದಿಂದ ವಿಮಾನ ಹತ್ತಿ ದುಬೈನಲ್ಲಿ ಹೊಸ ಐಫೋನ್ ಖರೀದಿಸಿ ವಾಪಾಸ್ಸಾದರೂ ಹಣ ಉಳಿತಾಯ
ಆ್ಯಪಲ್ ಮೊತ್ತ ಮೊದಲ ಬಾರಿಗೆ ಅಂದರ 2007ರಲ್ಲಿ ಮೊದಲ ಐಫೋನ್ ಬಿಡುಗಡೆ ಮಾಡಿತ್ತು. ಮ್ಯಾಕ್‌ವರ್ಲ್ಡ್ ಎಕ್ಸ್‌ಪೋದಲ್ಲಿ ಐಫೋನ್ ಬಿಡುಗಡೆ ಮಾಡಲಾಗಿತ್ತು. 9.41ಕ್ಕೆ ಈ ಫೋನ್ ಲಾಂಚ್ ಮಾಡಲಾಗಿತ್ತು. ಇದರ ಡಿವೈಸ್ ಸ್ಕ್ರೀನ್ 9.41ಕ್ಕೆ ಮ್ಯಾಚ್ ಮಾಡಲು ಈ ಸಮಯ ನಿಗಧಿ ಮಾಡಲಾಗಿತ್ತು. ಈ ಒಟ್ಟು ಕಾರ್ಯಕ್ರಮ 40 ನಿಮಿಷ ನಡೆದಿತ್ತು. ಇದು ಡಿವೈಸ್ ಹಾಗೂ ಪ್ರೇಕ್ಷಕರ ಸಮಯ ಹೊಂದಿಕೆಯಾಗುವಂತೆ ಮಾಡಲಾಗಿತ್ತು. ಮೊದಲ ಐಫೋನ್ ಫೋಟೋವನ್ನು ಸ್ಟೀವ್ಸ್ ಜಾಬ್ಸ್ 9.41ಕ್ಕೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಐಫೋನ್‌ಗೆ ಸಿಕ್ಕ ಸ್ಪಂದನೆ ಸ್ಟೀವ್ಸ್ ಜಾಬ್ಸ್ ಸೇರಿದಂತೆ ಆ್ಯಪಲ್ ಕಂಪನಿಯನ್ನುವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆಸಿತ್ತು. ಹೀಗಾಗಿ ಅಂದಿನಿಂದ ಸ್ಟೀವ್ಸ್ ಜಾಬ್ಸ್ ಉತ್ತಮ ಸಮಯ ಎಂದು 9.41 ಫಿಕ್ಸ್ ಮಾಡಿದ್ದರು. ಪ್ರತಿ ಆ್ಯಪಲ್ ಉತ್ಪನ್ನ ಇದೇ ಸಮಯಕ್ಕೆ ಲಾಂಚ್ ಮಾಡಲಾಗುತ್ತಿತ್ತು.
ಸ್ಟೀವ್ಸ್ ಕಾಲದಲ್ಲಿ ಆ್ಯಪಲ್ ಆರಂಭಿಸಿದ ಈ ಸಂಪ್ರದಾಯ ಈಗಲೂ ಮುದುವರಿದಿದೆ. ಸ್ಟೀವ್ ಜಾಬ್ಸ್ ನಿಗಧಿಪಡಿಸಿದ ಸಮಯ ಆ್ಯಪಲ್ ಕಂಪನಿಯ ಆದಾಯ ಹೆಚ್ಚಿಸಿದೆ. ಇಷ್ಟೇ ಅಲ್ಲ ಆ್ಯಪಲ್ ಕಂಪನಿಯ ಎಲ್ಲಾ ಉತ್ಪನ್ನಗಳು ಲಾಭಾದಾಯಕವಾಗಿದೆ. ಯಾವ ಉತ್ಪನ್ನ ಕೂಡ ವಿಫಲಗೊಂಡಿಲ್ಲ. ಗ್ರಾಹಕರು ಆ್ಯಪಲ್ ಉತ್ಪನ್ನವನ್ನು ಅತ್ಯಂತ ನಂಬಿಕೆಯಿಂದ ಖರೀದಿಸುತ್ತಾರೆ. ಬೆಲೆ ದುಬಾರಿಯಾದರೂ ಬಹುತೇಕರು ಆ್ಯಪಲ್ ಉತ್ಪನ್ನಗಳ್ನೇ ಖರೀದಿಸುತ್ತಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.