ಆ್ಯಪಲ್ ಐಫೋನ್ 14ಗೆ ಭರ್ಜರಿ ಡಿಸ್ಕೌಂಟ್‌: ಫ್ಲಿಪ್‌ಕಾರ್ಟ್‌ನಲ್ಲಿ ಜಸ್ಟ್‌ 34,399 ರೂ.ಗೆ ಲಭ್ಯ, ಇಲ್ಲಿದೆ ವಿವರ

By Vinutha Perla  |  First Published Sep 21, 2023, 11:58 AM IST

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶದಲ್ಲಿನ ಸ್ಮಾರ್ಟ್‌ಫೋನ್ ಪ್ರಿಯರು, ಗ್ಯಾಜೆಟ್ ಪ್ರಿಯರು ಸೆಪ್ಟೆಂಬರ್ ತಿಂಗಳು ಬಂದಾಗ ಅಲರ್ಟ್ ಆಗುತ್ತಾರೆ. ಕಾರಣ ಆ್ಯಪಲ್ ಐಫೋನ್ ಸೇರಿದಂತೆ ಇತರ ಪಮುಖ ಪ್ರಾಡಕ್ಟ್‌ಗಳು ಸೆಪ್ಟೆಂಬರ್  ತಿಂಗಳಲ್ಲೇ ಬಿಡುಗಡೆಯಾಗುತ್ತವೆ. ಈ ಬಾರಿ  iPhone 14 ಸರಣಿಯ (iPhone 15) ಫೋನ್‌ ರಿಲೀಸ್ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್ ಕೂಡಾ ಇದೆ.


ವಿಶ್ವದ ಅತೀ ಹೆಚ್ಚು ಬೇಡಿಕೆ ಸ್ಮಾರ್ಟ್‌ಫೋನ್ ಹಾಗೂ ಗ್ಯಾಜೆಟ್ಸ್ ಅನ್ನೋ ಹೆಗ್ಗಳಿಕೆಗೆ ಆ್ಯಪಲ್ ಕಂಪನಿ ಪಾತ್ರವಾಗಿದೆ.  ಗುಣಮಟ್ಟ, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳಲ್ಲಿ ಐಫೋನ್ ಮುಂಚೂಣಿಯಲ್ಲಿದೆ. ಆ್ಯಪಲ್ ಹೊಸ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶದಲ್ಲಿನ ಸ್ಮಾರ್ಟ್‌ಫೋನ್ ಪ್ರಿಯರು, ಗ್ಯಾಜೆಟ್ ಪ್ರಿಯರು ಸೆಪ್ಟೆಂಬರ್ ತಿಂಗಳು ಬಂದಾಗ ಅಲರ್ಟ್ ಆಗುತ್ತಾರೆ. ಕಾರಣ ಆ್ಯಪಲ್ ಐಫೋನ್ ಸೇರಿದಂತೆ ಇತರ ಪಮುಖ ಪ್ರಾಡಕ್ಟ್‌ಗಳು ಸೆಪ್ಟೆಂಬರ್  ತಿಂಗಳಲ್ಲೇ ಬಿಡುಗಡೆಯಾಗುತ್ತವೆ. ಆ್ಯಪಲ್ ಪ್ರತಿ ಭಾರಿ ಐಫೋನ್ ಬಿಡುಗಡೆಯನ್ನು ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆ ಮಾಡುತ್ತದೆ. 

ಈ ಬಾರಿಯ ಸೆಪ್ಟೆಂಬರ್‌ನಲ್ಲಿ iPhone 14 ಸರಣಿಯ (iPhone 15) ಫೋನ್‌ಗಳನ್ನು ಕಳೆದ ವಾರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಇದರ ಮಾರಾಟವು ಭಾರತದಲ್ಲಿ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಲಿದೆ. ಆದರೆ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿದ ನಂತರ, ಆಪಲ್ ಹಳೆಯ ಫೋನ್​ಗಳ ಬೆಲೆಗಳನ್ನು ಕಡಿಮೆ ಮಾಡಿದೆ.

Tap to resize

Latest Videos

undefined

ಆ್ಯಪಲ್‌ ಐಓಎಸ್ 17 ಇಂದಿನಿಂದ ಲಭ್ಯ: ಯಾವ ಫೋನ್‌ಗಳಿಗೆ ಹೊಂದಿಕೆಯಾಗಲ್ಲ; ಡೌನ್ಲೋಡ್‌, ಇನ್ಸ್ಟಾಲ್‌ ಬಗ್ಗೆ ಇಲ್ಲಿದೆ ವಿವರ..

ಆ್ಯಪಲ್ ಐಫೋನ್‌ -14 ಫ್ಲಿಪ್‌ಕಾರ್ಟ್‌ನಲ್ಲಿ ಜಸ್ಟ್‌ 34,399 ರೂ.ಗಳಲ್ಲಿ ಲಭ್ಯ
ಆ್ಯಪಲ್ ಐಫೋನ್‌ 14 ಫ್ಲಿಪ್‌ಕಾರ್ಟ್‌ನಲ್ಲಿ ಜಸ್ಟ್‌ 34,399 ರೂ.ಗಳಲ್ಲಿ ಲಭ್ಯವಿದೆ. ಅಂದರೆ ಆ್ಯಪಲ್ ಹೊಸ iPhone 15 ಅನ್ನು ಭಾರತದಲ್ಲಿ ರೂ 79,900 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಹೊಸ ಆ್ಯಪಲ್ ಐಫೋನ್‌ 15 ಸ್ವಲ್ಪ ವಿಭಿನ್ನ ವಿನ್ಯಾಸ (Design), ಉತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು USB-C ಪೋರ್ಟ್‌ನೊಂದಿಗೆ ಬರುತ್ತದೆ.

ಆ್ಯಪಲ್ ಐಫೋನ್‌ 15 ಬಿಡುಗಡೆಯಾದ ನಂತರ ಆ್ಯಪಲ್ ಐಫೋನ್‌ 14 ಭಾರಿ ಬೆಲೆ ಕಡಿತವನ್ನು ಪಡೆಯಿತು. ಆ್ಯಪಲ್ ಐಫೋನ್‌ 14 ಈಗ Apple ಸ್ಟೋರ್‌ನಲ್ಲಿ 69,900 ರೂಗಳಲ್ಲಿ ಲಭ್ಯವಿದೆ. ಆದಾರೆ ಫೋನ್ Flipkart ನಲ್ಲಿ ಹೆಚ್ಚು ಅಗ್ಗವಾಗಿದೆ. ಆ್ಯಪಲ್ ಐಫೋನ್‌ 14 ಅನ್ನು ಕಳೆದ ವರ್ಷ ಆ್ಯಪಲ್ ಐಫೋನ್‌ 14 Pro ಮತ್ತು Plus ಜೊತೆಗೆ ರೂ 79,900 ಆರಂಭಿಕ ಬೆಲೆಗೆ ಬಿಡುಗಡೆ (Release) ಮಾಡಲಾಯಿತು. ಆ್ಯಪಲ್ ಐಫೋನ್‌ 14 ನ 256GB ಮತ್ತು 512GB ಸ್ಟೋರೇಜ್ ರೂಪಾಂತರಗಳು ಈಗ ಕ್ರಮವಾಗಿ 79,900 ಮತ್ತು 99,900 ರೂ. ಆ್ಯಪಲ್ ಐಫೋನ್‌14 ಅನ್ನು ಪ್ರಸ್ತುತ 64,999 ರೂಗಳಲ್ಲಿ ಪಟ್ಟಿ ಮಾಡಲಾಗಿದೆ.

ಭಾರತಕ್ಕಿಂತ ಈ ದೇಶಗಳಲ್ಲೇ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್ 15: ಮೇಡ್‌ ಇನ್ ಇಂಡಿಯಾ ಆದ್ರೂ ಯಾಕಿಷ್ಟು ವ್ಯತ್ಯಾಸ ನೋಡಿ..

ಹಳೆಯ ಸ್ಮಾರ್ಟ್‌ಫೋನ್‌ಗೆ ವಿನಿಮಯವಾಗಿ  30,600 ರೂ. ವರೆಗೆ ರಿಯಾಯಿತಿ
ಇದಲ್ಲದೆ, ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ವಿನಿಮಯವಾಗಿ  30,600 ರೂ. ವರೆಗೆ ರಿಯಾಯಿತಿ (Discount)ಯನ್ನು ನೀಡುತ್ತಿದೆ. ಇದರರ್ಥ ಎಲ್ಲಾ ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳ ನಂತರ, ಆ್ಯಪಲ್ ಐಫೋನ್‌ 14 ಫ್ಲಿಪ್‌ಕಾರ್ಟ್‌ನಲ್ಲಿ ರೂ 35,501 ರಿಯಾಯಿತಿಯ ನಂತರ ರೂ 34,399 ನಲ್ಲಿ ಲಭ್ಯವಿದೆ.

iPhone 14 ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮಾರಾಟದಲ್ಲಿ ರಿಯಾಯಿತಿಯನ್ನು ಪಡೆದ ನಂತರ ಖರೀದಿದಾರರಿಂದ ಸ್ವಲ್ಪ ಗಮನ ಸೆಳೆಯಿತು. ಆ್ಯಪಲ್ ಐಫೋನ್‌ 14, ಆಪಲ್ ಐಫೋನ್‌ 13ನಂತಹ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಆದರೆ ಹೆಚ್ಚಿನ ಕೋರ್‌ಗಳನ್ನು ಹೊಂದಿದೆ. ಇದು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಐಫೋನ್ 13 ತರಹದಂತೆ ಮುಂಭಾಗದಲ್ಲಿ ಹೊಂದಿದೆ. ಇದು ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12MP ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ, ಫೋನ್ 12MP ಸಂವೇದಕಗಳೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್‌ನ್ನು ಹೊಂದಿದೆ.

ಆಪಲ್ ಹೊಸ iPhone 15ನ್ನು ಭಾರತದಲ್ಲಿ ರೂ 79,900 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಹೊಸ ಆಪಲ್ ಐಫೋನ್‌ 15 ಸ್ವಲ್ಪ ವಿಭಿನ್ನ ವಿನ್ಯಾಸ, ಉತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು USB-C ಪೋರ್ಟ್‌ನೊಂದಿಗೆ ಬರುತ್ತದೆ. ಆದರೆ ಕಂಪನಿಯು ಆಪಲ್ ಐಫೋನ್‌ 15 ಸರಣಿಯಲ್ಲಿನ 'ಪ್ರೊ' ಮಾದರಿಗಳೊಂದಿಗೆ ಪ್ರಮುಖ ಬದಲಾವಣೆಗಳನ್ನು ತಂದಿದೆ. 

click me!