ಐಫೋನ್‌ 12ರಿಂದ ನಿಗದಿಕ್ಕಿಂತ ಹೆಚ್ಚು ವಿಕಿರಣ ಹೊರಕ್ಕೆ: ಫೋನ್‌ ಹಿಂಪಡೆಯಲು ಫ್ರಾನ್ಸ್‌ ಸೂಚನೆ

By Kannadaprabha News  |  First Published Sep 14, 2023, 11:28 AM IST

ಸಾಮಾನ್ಯಕ್ಕಿಂತ ಅತಿ ಹೆಚ್ಚು ವಿಕಿರಣ ಸೂಸುವಿಕೆ ಕಾರಣ ಆ್ಯಪಲ್‌ನ ಐಫೋನ್‌ 12 ಮಾದರಿಯನ್ನು ಸರಿಪಡಿಸುವಂತೆ ಫ್ರಾನ್ಸ್‌ ದೇಶ ಆದೇಶಿಸಿದೆ. ಒಂದು ವೇಳೆ ಸರಿಪಡಿಸಲು ವಿಫಲವಾದರೆ ದೇಶಾದ್ಯಂತ ಐಫೋನ್‌ 12 ಹಿಂಪಡೆಯುವಂತೆ ಆದೇಶಿಸಲಾಗುವುದು ಎಂದು ತಿಳಿಸಿದೆ.


ಪ್ಯಾರಿಸ್‌: ಸಾಮಾನ್ಯಕ್ಕಿಂತ ಅತಿ ಹೆಚ್ಚು ವಿಕಿರಣ ಸೂಸುವಿಕೆ ಕಾರಣ ಆ್ಯಪಲ್‌ನ ಐಫೋನ್‌ 12 ಮಾದರಿಯನ್ನು ಸರಿಪಡಿಸುವಂತೆ ಫ್ರಾನ್ಸ್‌ ದೇಶ ಆದೇಶಿಸಿದೆ. ಒಂದು ವೇಳೆ ಸರಿಪಡಿಸಲು ವಿಫಲವಾದರೆ ದೇಶಾದ್ಯಂತ ಐಫೋನ್‌ 12 ಹಿಂಪಡೆಯುವಂತೆ ಆದೇಶಿಸಲಾಗುವುದು ಎಂದು ತಿಳಿಸಿದೆ. ಫ್ರಾನ್ಸ್‌ನ ರಾಷ್ಟ್ರೀಯ ಫ್ರೀಕ್ವೆಂನ್ಸಿ ಏಜೆನ್ಸಿ ಎಂಬ ಸರ್ಕಾರಿ ಸಂಸ್ಥೆ ವಿಕಿರಣಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಇದು ಮೊಬೈಲ್‌ಗಳನ್ನು ಅಧ್ಯಯನ ಮಾಡುತ್ತದೆ. ಈ ವೇಳೆ ಐಫೋನ್‌ ಐರೋಪ್ಯ ಒಕ್ಕೂಟದ ನಿಗದಿತ 4.0 ವ್ಯಾಟ್‌ ಮೀರಿ ಕೇಜಿಗೆ 5.44 ವ್ಯಾಟ್‌ ವಿದ್ಯುತ್‌ಕಾಂತೀಯ ವಿಕಿರಣವನ್ನು ಮಾನವನ ದೇಹಕ್ಕೆ ಸೂಸುತ್ತಿದೆ. ಹೀಗಾಗಿ ಅದನ್ನು ಶೀಘ್ರದಲ್ಲೇ ಸರಿಪಡಿಸಬೇಕು. ಇಲ್ಲವಾದರೆ ಎಲ್ಲ ಐಫೋನ್‌12ರನ್ನು ಹಿಂಪಡೆದುಕೊಳ್ಳಲು ಆದೇಶಿಸಲಾಗುತ್ತದೆ ಎಂದು ತಿಳಿಸಿದೆ.

iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್‌ ಜಾಬ್ಸ್‌ ಪುತ್ರಿ

Latest Videos

undefined

ಆ್ಯಪಲ್ (Apple) ತನ್ನ ಐಫೋನ್ 14 (i Phone) ಶ್ರೇಣಿಯಲ್ಲಿ  4 ಮಾಡೆಲ್‌ಗಳನ್ನು ಪರಿಚಯಿಸಿದೆ. ಹಿಂದಿನ ವರ್ಷಗಳಂತೆ,  ಈ ವರ್ಷವೂ ಹೊಸ ಪೀಳಿಗೆಯ ಐಫೋನ್‌ಗಳು ನಾವೀನ್ಯತೆಯ ಕೊರತೆಯಿಂದಾಗಿ ಕೆಲವು ಟೀಕೆಗಳನ್ನು ಎದುರಿಸಿವೆ. ಆದರೆ, ಈ ವರ್ಷ, ಐಫೋನ್ 14 ವಿರುದ್ಧದ ಟೀಕೆಗಳ ಸಾಲಿಗೆ ಗಮನಾರ್ಹವಾದ ಹೊಸ ಧ್ವನಿ ಸೇರಿಕೊಂಡಿದೆ - ಅದು ದಿವಂಗತ ಆ್ಯಪಲ್ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ (Steve Jobs) ಅವರ ಪುತ್ರಿ ಈವ್ ಜಾಬ್ಸ್ (Eve Jobs). ಹೌದು, 24 ವರ್ಷದ ಈವ್ ಜಾಬ್ಸ್ ಐಫೋನ್ 14 ವಿರುದ್ಧ ಟೀಕೆ ಮಾಡಿದ್ದಾರೆ. ಪ್ರತಿ ಹೊಸ ಪೀಳಿಗೆಯ ಐಫೋನ್‌ಗಳ ಹೆಸರಲ್ಲಿ ಹಳೆಯ ವಿನ್ಯಾಸಗಳನೇ ರಿಪೀಟ್‌ ಮಾಡಲಾಗುತ್ತಿದೆ ಎಂಬಂತೆ ಟೀಕೆ ಮಾಡಿದ್ದಾರೆ. 

IPhone 14: ಹೊಸ ಐಫೋನ್‌ ಮಾಡೆಲ್‌ ಖರೀದಿಸಲು ಕೊಚ್ಚಿಯಿಂದ ದುಬೈಗೆ ಹಾರಿದ ಉದ್ಯಮಿ

ಈ ಸಂಬಂಧ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ (Instagram Stories), ಅವರು ಈಗಾಗಲೇ ಧರಿಸಿರುವ ಶರ್ಟ್‌ಗೆ ಹೋಲುವ ಶರ್ಟ್ ಅನ್ನು ಎತ್ತಿ ಹಿಡಿದಿರುವ ವ್ಯಕ್ತಿಯನ್ನು ತೋರಿಸುವ ಮೀಮ್ಸ್‌ (Memes) ಅನ್ನು ಪೋಸ್ಟ್‌ ಮಾಡಿದ್ದಾರೆ. ‘’ಆ್ಯಪಲ್ ಇಂದು ಘೋಷಿಸಿದ ನಂತರ ನಾನು iPhone 13 ನಿಂದ iPhone 14 ಗೆ ಅಪ್‌ಗ್ರೇಡ್ ಮಾಡುತ್ತಿದ್ದೇನೆ" ಎಂದು ಈ ಮೀಮ್ಸ್‌ನ ಶೀರ್ಷಿಕೆ (Caption) ಹೇಳುತ್ತದೆ. 

ಸ್ಟೀವ್ ಜಾಬ್ಸ್ 1976 ರಲ್ಲಿ ತನ್ನ ಪೋಷಕರ ಗ್ಯಾರೇಜ್‌ನಲ್ಲಿ ಆ್ಯಪಲ್ ಅನ್ನು ಸ್ಥಾಪಿಸಿದ ದಾರ್ಶನಿಕ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. 2011 ರಲ್ಲಿ ಅವರ ಮರಣದ ಸಮಯದಲ್ಲಿ, ಆ್ಯಪಲ್ ವಿಶ್ವದ ಅತ್ಯಮೂಲ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿತ್ತು. ಫೋನ್ ಮತ್ತು ಪರ್ಸನಲ್ ಕಂಪ್ಯೂಟಿಂಗ್ ಉದ್ಯಮಗಳನ್ನು ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಮತ್ತು ಇಂದು ಅನೇಕ ಆ್ಯಪಲ್ ಅಭಿಮಾನಿಗಳು ಅವರ ಮರಣದ ನಂತರ ಕಂಪನಿಯಲ್ಲಿ ನಾವೀನ್ಯತೆ ಸ್ಥಗಿತಗೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋಲಾರದಲ್ಲಿ ಮತ್ತೆ ಐ ಫೋನ್ ಘಟಕ ಆರಂಭ : ಬಿಗಿ ಭದ್ರತೆ

ಕಂಪನಿಯ ಹೊಸ ಸ್ಮಾರ್ಟ್‌ಫೋನ್, iPhone 14, ಮೂಲ ಮಾಡೆಲ್‌ಗೆ 799 ಡಾಲರ್‌ ವೆಚ್ಚವಾಗುತ್ತದೆ - ಪ್ರಸ್ತುತ ಆವೃತ್ತಿಯ ಅದೇ ಬೆಲೆ, ಆದರೆ ಪ್ರೀಮಿಯಂ iPhone 14 Pro Max $1,100 ವರೆಗೆ ವೆಚ್ಚವಾಗುತ್ತದೆ.  ಭಾರತದಲ್ಲಿ iPhone 14 ಬೆಲೆಯನ್ನು ಮೂಲ 128GB ರೂಪಾಂತರಕ್ಕಾಗಿ 79,900 ರೂ.ಗಳಿಗೆ ನಿಗದಿಪಡಿಸಲಾಗಿದೆ. iPhone 14 Plus ಗಾಗಿ, ಗ್ರಾಹಕರು 128GB ರೂಪಾಂತರಕ್ಕಾಗಿ 89,900 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. iPhone 14 Pro ಭಾರತಕ್ಕೆ 1,29,900 ರೂ.ಗೆ ಲಭ್ಯವಿರುತ್ತದೆ, ಆದರೆ iPhone 14 Pro Max 1,39,900 ರೂ.ಗಳಿಂದ ಪ್ರಾರಂಭವಾಗುತ್ತದೆ (ಪಟ್ಟಿ ಮಾಡಲಾದ ಬೆಲೆಗಳು ಮೂಲ 128GB ರೂಪಾಂತರ) ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸ್ಟೀವ್‌ ಜಾಬ್ಸ್ ಪುತ್ರಿ ಮಾತ್ರವಲ್ಲದೆ ಹಲವು ನೆಟ್ಟಿಗರು ಟೀಕೆ ಮಾಡಿದ್ದಾರೆ. 

ದೇಶದಲ್ಲಿ ಒಟ್ಟು 150 ಆನೆ ಕಾರಿಡಾರ್‌: ಪ.ಬಂಗಾಳದಲ್ಲಿ ಹೆಚ್ಚು

ನವದೆಹಲಿ: ಅನೆಗಳು ಸಾಮಾನ್ಯವಾಗಿ ಸಂಚರಿಸುವ 150 ಆನೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಪೈಕಿ 26 ಕಾರಿಡಾರ್‌ಗಳೊಂದಿಗೆ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಕೇಂದ್ರ ಪರಿಸರ ಇಲಾಖೆ ಹೊರತಂದಿರುವ ವರದಿ ಅನ್ವಯ, 15ರಾಜ್ಯಗಳ ವ್ಯಾಪ್ತಿಯಲ್ಲಿ 150 ಆನೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. 150 ಆನೆ ಕಾರಿಡಾರ್‌ಗಳ ಪೈಕಿ 59ರಲ್ಲಿ ಆನೆಗಳ ಸಂಚಾರ ವೃದ್ಧಿಯಾಗಿದ್ದು, 29ರಲ್ಲಿ ಯಥಾಸ್ಥಿತಿ ಹೊಂದಿದ್ದು, 29ರಲ್ಲಿ ಇಳಿಕೆಯಾಗಿದೆ. ಮಿಕ್ಕ 18 ಕಾರಿಡಾರ್‌ಗಳ ಮಾಹಿತಿ ಪತ್ತೆಯಾಗಿಲ್ಲ, 2010ರಲ್ಲಿ ಈ ಸಂಖ್ಯೆ ಕೇವಲ 88 ಇತ್ತು ಎಂದು ವರದಿ ಹೇಳಿದೆ. 2017ರ ಅಧ್ಯಯನದ ಪ್ರಕಾರ ದೇಶದಲ್ಲಿ 30,000 ಆನೆಗಳು ವಾಸವಿದ್ದು, ಜಗತ್ತಿನ ಶೇ.30ರಷ್ಟು ಹೊಂದಿದೆ. 

click me!