Apple iPhone 11 ಹಂತ ಹಂತವಾಗಿ ಸ್ಥಗಿತ, ಏನು ಕಾರಣ?

By Suvarna News  |  First Published Apr 22, 2022, 11:56 AM IST

*ಆಪಲ್ ಸೆಪ್ಟೆಂಬರ್‌ನಲ್ಲಿ  ಐಫೋನ್ 14 ಸೇರಿ ಹೊಸ ಸಾಧನಗಳನ್ನು ಲಾಂಚ್ ಮಾಡಲಿದೆ
*ಆಪಲ್ ತನ್ನ ಕೆಲವು ಹಳೆಯ  ಫೋನುಗಳನ್ನು ಸ್ಥಗಿತ ಮಾಡುವ ಸಾಧ್ಯತೆ ಇದೆ 
*ಭಾರತದಲ್ಲಿ ಆಪಲ್ 12 ಸ್ಮಾರ್ಟ್‌ಫೋನ್ ಬೆಲೆ ಕೂಡ ಕಡಿತವಾಗಬಹುದು


ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಯಾಗಿರುವ ಆಪಲ್ ಈ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಐಫೋನ್ 14(iPhone 14) ಲಾಂಚ್ ಮಾಡುವ ಸಾಧ್ಯತೆ ಇದೆ. ಇದರ ನಡುವೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ, ಆಪಲ್‌ ಐಫೋನ್ 11 ಸ್ಮಾರ್ಟ್‌ಫೋನ್ ಅನ್ನು ಹಂತ ಹಂತವಾಗಿ ಕಂಪನಿಯು ಸ್ಥಗಿತಗೊಳಿಸಲಿದೆ. ಸೆಪ್ಟೆಂಬರ್ 2019 ರಲ್ಲಿ ಲಾಂಚ್ ಆದ iPhone 11 ಸರಣಿಯನ್ನು ಹಂತಹಂತವಾಗಿ ಹೊರಹಾಕಲಾಗುವುದು ಎಂಬ ಮಾಹಿತಿ ಬಹುತೇಕ ಪಕ್ಕಾಗಿ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ವರದಿಯ ಪ್ರಕಾರ, iPhone 11 ಅನ್ನು ಅದರ ವಯಸ್ಸು ಮತ್ತು ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ iPhone SE 3 ನೊಂದಿಗೆ ನೇರವಾಗಿ ಸ್ಪರ್ಧಿಸುವ ಕಾರಣದಿಂದಾಗಿ ಈ ವರ್ಷ ಹಂತಹಂತವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಭಾರತದಲ್ಲಿ, iPhone 11 ಬೆಲೆ 49,900 ರೂ. ಇದ್ದರೆ,  iPhone SE 3 ಅಥವಾ iPhone SE 2022 ಬೆಲೆ 43,900 ರೂ. ಇದೆ.

ಏ.27ಕ್ಕೆ Xiaomi Pad 5 ಲಾಂಚ್, 7 ವರ್ಷದ ಬಳಿಕ ಭಾರತದಲ್ಲಿ ಶವೊಮಿ ಟ್ಯಾಬ್ಲೆಟ್

Tap to resize

Latest Videos

undefined

ಮೂಲಗಳ ಪ್ರಕಾರ, ಆಪಲ್ 2020ರಲ್ಲಿ ಲಾಂಚ್ ಮಾಡಿದ  ಅನಾವರಣಗೊಂಡ ಐಫೋನ್ 12 ಸರಣಿಯ ಬೆಲೆಯನ್ನು ಸಹ ಕಡಿಮೆ ಮಾಡಬಹುದು. ಭಾರತದಲ್ಲಿ ಈ ಸರಣಿಯ ಬೆಲೆ 65,900 ರೂ.ವರೆಗೂ ಇದೆ. ಐಫೋನ್ 12 ಬೆಲೆಯನ್ನು $999 ರಿಂದ $599 ಕ್ಕೆ  ಕಡಿತಗೊಳಿಸಲು ಯೋಜಿಸಲಾಗಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ಸುಮಾರು 45,672 ರೂ. ಆಗಬಹುದು. ಹಾಗೆಯೇ,  iPhone 12 ಅನ್ನು iPhone 11ಗೆ ಸಮಾನವಾಗಿ ಬೆಲೆ ನಿಗದಿಪಡಿಸಬಹುದು, ಇದು ಸಂಭಾವ್ಯ ಗ್ರಾಹಕರಿಗೆ ಹೆಚ್ಚು ಸ್ಪರ್ಧಾತ್ಮಕ ಶ್ರೇಣಿಯ ಪರ್ಯಾಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ವರದಿಗಳ ಪ್ರಕಾರ ಐಫೋನ್ 13 ಸರಣಿಯು ಹಲವಾರು ವರ್ಷಗಳವರೆಗೆ ಲಭ್ಯವಿರುತ್ತದೆ. ಸದ್ಯಕ್ಕೆ ಈ ಸರಣಿಯ ಫೋನುಗಳಿಗೆ ಯಾವುದೇ ಅಪಾಯವಿಲ್ಲ. ಇನ್ನು ಐಫೋನ್ 14 ಬಗ್ಗೆ ಹೇಳಬೇಕೆಂದರೆ, ಈ ಫೋನು  ಮತ್ತು iPhone 14 Pro 6.1-ಇಂಚಿನ ಪ್ರದರ್ಶಕಗಳನ್ನು ಹೊಂದಿದೆ ಎಂದು ನಂಬಲಾಗಿದೆ, ಆದರೆ iPhone 14 Plus ಮತ್ತು iPhone Pro Max 6.7-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅವು Qualcomm ನ A16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತವೆ ಮತ್ತು 5G ಸಂಪರ್ಕವನ್ನು ಒಳಗೊಂಡಿರುತ್ತವೆ. iPhone 14 Plus ಮತ್ತು iPhone 14 Max 120Hz ವರೆಗಿನ ರಿಫ್ರೆಶ್ ದರಗಳೊಂದಿಗೆ LTPO ಡಿಸ್ಪ್ಲೇಗಳನ್ನು ಬಳಸುತ್ತದೆ.

ಸರಣಿಯ ಟಾಪ್ ಪ್ಲಸ್ ಮತ್ತು ಮ್ಯಾಕ್ಸ್ ಮಾದರಿಗಳು 48 MP ಮುಖ್ಯ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ, iPhone 14 ಸರಣಿಯು iPhone 13 ಸರಣಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ.

ಆ್ಯಪಲ್ ಫುಲ್ ಸ್ಕ್ರೀನ್ iPhone ಬಿಡುಗಡೆಗೆ ತಯಾರಿ, ಡಿಸ್‌ಪ್ಲೆ ಒಳಗೆ ಕ್ಯಾಮರಾ!

ಭಾರತದಲ್ಲೇ Apple iPhone 13 ಉತ್ಪಾದನೆ
ಐಫೋನ್ 13 (iPhone) ಸ್ಮಾರ್ಟ್‌ಫೋನ್ ಆಪಲ್ (Apple) ಅತಿ ಹೆಚ್ಚು ಮಾರಟವಾಗುವ ಫೋನ್ ಆಗಿರುವ ಗೊತ್ತಿರುವ ಸಂಗತಿಯೇ. ಈಗಿನ ಹೊಸ ಸುದ್ದಿ ಏನೆಂದರೆ, ಆಪಲ್ ಕಂಪನಿಯು ಈ ಐಫೋನ್ 13 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲೇ ಉತ್ಪಾದಿಸಲು ಮುಂದಾಗಿದೆ. ಸೋಮವಾರದಿಂದಲೇ ಉತ್ಪಾದನೆ ಕೂಡ ಆರಂಭವಾಗಿದೆ.  ಇದು ಜಾಗತಿಕ ಉತ್ಪಾದನಾ ಕೇಂದ್ರವಾಗುವ ಭಾರತದ ಗುರಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ. ಕಂಪನಿಯು 2017 ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. "ನಮ್ಮ ಸ್ಥಳೀಯ ಗ್ರಾಹಕರಿಗಾಗಿ ಭಾರತದಲ್ಲಿಯೇ ಐಫೋನ್ 13 (iPhone 13) ಉತ್ಪಾದನೆಯನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ, ಅದರ ಬಹುಕಾಂತೀಯ ವಿನ್ಯಾಸ, ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳಿಗಾಗಿ ಉನ್ನತ ಕ್ಯಾಮೆರಾ ವ್ಯವಸ್ಥೆಗಳು ಮತ್ತು A15 ಬಯೋನಿಕ್ CPU ನ ಉತ್ತಮ ಕಾರ್ಯಕ್ಷಮತೆಯೊಂದಿಗೆ ಉತ್ಪಾದನೆ ಮಾಡಲಾಗುತ್ತಿದೆ" ಎಂದು ಆಪಲ್ ಹೇಳಿಕೆಯಲ್ಲಿ ತಿಳಿಸಿದೆ.

click me!