Iphone ಮೀರಬಹುದಾದ ಟೆಸ್ಲಾ ಪೈ ಫೋನ್, ಹೀಗಿದೆ ಫೀಚರ್ಸ್‌!

Published : Apr 21, 2022, 04:59 PM IST
Iphone ಮೀರಬಹುದಾದ ಟೆಸ್ಲಾ ಪೈ ಫೋನ್, ಹೀಗಿದೆ ಫೀಚರ್ಸ್‌!

ಸಾರಾಂಶ

* ವಿಶ್ವದ ಶ್ರೀಮಂತನಿಂದ ಮತ್ತೊಂದು ಪ್ರಮುಖ ಹೆಜ್ಜೆ * ಐಫೋನ್‌ಗೆ ಟಕ್ಕರ್ ನೀಡಲು ಬರ್ತಿದೆ ಟೆಸ್ಲಾ ಪೈ ಫೋನ್ * ಹೇಗಿದೆ ಈ ಫೋನ್? ಇಲ್ಲಿದೆ ;ಫೀಚರ್ಸ್‌

ವಿವೇಕ್ ಚಂದ್ರನ್, ಎಸ್. ಡಿ. ಎಂ  ಸ್ನಾತಕೋತ್ತರ ಕೇಂದ್ರ, ಉಜಿರೆ

ಎಲೋನ್ ಮಸ್ಕ್ ತನ್ನ ಬುದ್ಧಿವಂತ ಮತ್ತು ಹುಚ್ಚು ಸ್ವಭಾವಕ್ಕೆ ಎಲ್ಲಾ ಟೆಕ್ ಪ್ರಿಯರಿಗೆ ಹೆಸರುವಾಸಿಯಾಗಿದ್ದಾನೆ. ಅವರು ಹಲವು ಬಾರಿ ಬುದ್ಧಿವಂತಿಕೆಗೆ ಪುರಾವೆಯನ್ನು ನೀಡಿದ್ದಾರೆ. ಈಗ ಅವರು ಹೊಸ ಫೋನ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಈಗ ಟೆಸ್ಲಾ 'ಪೈ' ಹೆಸರಿನ ಹೊಸ ಫೋನ್ ಅನ್ನು ತರುತ್ತಿದೆ ಎಂಬ ವದಂತಿ ಪ್ರಾರಂಭವಾಗಿದೆ.

ಟೆಸ್ಲಾ ಅವರ ಪೈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಚಿಪ್ಸೆಟ್ ಅನ್ನು ಹೊಂದಿರಬಹುದು.  ಇದು ಉಪಗ್ರಹ ಆಧಾರಿತ  5 ಜಿ ತಂತ್ರಜ್ಞಾನವನ್ನು ಬಳಸುತ್ತದೆ.  ಪೈ ಫೋನ್‌ನ ದೊಡ್ಡ ಪ್ರಯೋಜನವೆಂದರೆ ಅದು ಸ್ಟಾರ್ ಲಿಂಕಿನ ಉಪಗ್ರಹ ಆಧಾರಿತ ಸೇವೆ ಆಗುವುದರಿಂದ ನೆಟ್‌ವರ್ಕ್ ಪಡೆಯುವಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ.

'ಪೈ' ಫೋನ್‌ನಲ್ಲಿ ಇರಬಹುದಾದ ಸ್ಪೆಶಾಲಿಟಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಅಂದರೆ ಸ್ಪೇಸ್‌ಎಕ್ಸ್ ನಾ ಸ್ಟಾರ್‌ಲಿಂಕ್ ಬಾಹ್ಯಾಕಾಶ ಆಧಾರಿತ ಇಂಟರ್ನೆಟ್ ಸೇವೆ, ವಾಹನಗಳ ನಿಯಂತ್ರಣ ಕಾರ್ ಅನ್ನು ಫೋನ್ ಮೂಲಕ ಲಾಕ್/ಅನ್‌ಲಾಕ್ ಮಾಡಲು ಸಾಧ್ಯ. ಸೊಲಾರ್ ಚಾರ್ಜಿಂಗ್ ಸೌರ ಶಕ್ತಿಯನ್ನು ಬಳಸಿಕೊಂಡು ಚಾರ್ಜಿಂಗ್, ಬಾಹ್ಯಾಕಾಶದ ಚಿತ್ರಗಳನ್ನು ಸೆರೆಹಿಡಿಯ ಬಹುದಾದ ಆಸ್ಟ್ರೋಫೋಟೋಗ್ರಫಿ, ಕ್ರಿಪ್ಟೋಕರೆನ್ಸಿಯನ್ನು ಮೈನಿಂಗ್, ನ್ಯೂರಾಲಿಂಕ್ ಬೆಂಬಲ, ಎಮೋಲ್ಡ್ ಡಿಸ್ಪ್ಲೇ , 160 ಮೆಗಾಪಿಕ್ಸಲ್‌ನ ನಾಲ್ಕು ಬಾಕ್ ಕಾಮೆರ, 16 ಜಿಬಿ RAM ಮತ್ತು 1 ಟಿ ಬಿ ಸ್ಟೋರೇಜ್  ಸ್ಪೇಸ್ ಒಳಗೊಂಡಿದೆ.

' ಪೈ' ಫೋನ್ ನ ಅಧಿಕೃತವಾದ ದೃಢೀಕರಣ ಟೆಸ್ಲಾ ಕಡೆಯಿಂದ ಬರಲಿಲ್ಲ. ಈಗಿನ ಸ್ಮಾರ್ಟ್ ಫೋನ್‌ಗಳನ್ನು ಸೂರ್ಯನ ಶಾಖದಲ್ಲಿ ಇಟ್ಟರೆ ಫೋನ್ ಬಿಸಿ ಹೆಚ್ಚಾಗಿ ಆಂತರಿಕ ಭಾಗಗಳು ಹಾನಿಯಗುತ್ತದೆ ಅದಕ್ಕಾಗಿ ಸೂರ್ಯನ ಶಾಖವನ್ನು ತಡೆಯುವಂತಹ ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಗಳು ಪೈ ಫೋನ್ ಎಲ್ಲಾ ಭಾಗಗಳಿಗೂ ಬೇಕಾಗುತ್ತದೆ. ನ್ಯೂರಾಲಿಂಕ್ ಅನ್ನು ಅಳವಡಿಸಲು ಅನೇಕ ಪ್ರಯೋಗ ಹಾಗು ಪರಿಶೀಲನೆಗಳ ಅವಶ್ಯಕತೆಗಳಿವೆ. ಎಲೋನ್ ಮಸ್ಕ್ ಅವರು ತಮ್ಮ ಎಲ್ಲಾ ಕಲ್ಪನೆಗಳನ್ನು ಸಂಶೋದನೆ ನಡೆಯುವ ಮುನ್ನವೆ ವ್ಯಕ್ತ ಪಡಿಸುತ್ತಾರೆ, ಯಾವುದೆ ವಿಷಯವನ್ನು ಗೌಪ್ಯವಾಗಿಡುವ ವ್ಯಕ್ತಿಯಲ್ಲ. ಆದುದರಿಂದ ಇದನ್ನು ಸುಳ್ಳು ಸುದ್ದಿ ಎಂದು ತಂತ್ರಜ್ಞಾನ ಲೋಕವು ಪರಿಗಣಿಸಿದೆ. ಇದನ್ನು ಕೆಲವು ವ್ಯಕ್ತಿಗಳು ತಮ್ಮ ವಯಕ್ತಿಕ ಲಾಭಕ್ಕೆ ಹಾಗೂ ತನ್ನ ಯುಟ್ಯೂಬ್ ಚಾನೆಲ್‌ಗಳ ಬೆಳವಣಿಗೆ ಗೋಸ್ಕರ ಪ್ರಚಲಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ.

ಎಲ್ಲಾ ವದಂತಿಗಳನ್ನು ಬದಿಗಿಟ್ಟು ಟೆಸ್ಲಾ ಕಡೆಯಿಂದ ಅಧಿಕೃತವಾದ ಮಾಹಿತಿ ಬರುವರೆಗೂ ನಾವು ಕಾಯಬೇಕಾಗಿದೆ. ಈ ವಿಷಯದ ಬಗೆಗಿನ ಎಲೋನ್ ಮಸ್ಕ್ ಅವರ ಅಭಿಪ್ರಾಯಕ್ಕೆ ನಾನು ಕೂಡ ಕುತೂಹಲದಿಂದ ಕಾದಿದ್ದೇನೆ. ಏಕೆಂದರೆ ಮನುಷ್ಯನಿಗೆ ಅಸಾಧ್ಯವಾದುದು ಯಾವುದು ಇಲ್ಲ ಎಂದು ತನ್ನ ಜೀವನದ ಸಾಧನೆಗಳ ಮೂಲಕ ಜಗತ್ತಿಗೆ ಗ ತೋರಿಸಿಕೊಟ್ಟವರಲ್ಲಿ ಎಲೋನ್ ಮಸ್ಕ್ ಒಬ್ಬರು. ಇವರು ಹಲವು ಭವಿಷ್ಯದ ಪರಿಕಲ್ಪನೆಗಳು ಸುಳ್ಳು ಎಂದು   ನಂಬಿದ ಟೆಕ್ ಲೋಕಕ್ಕೆ ಅದನ್ನು ಸತ್ಯವೆಂದು ಸಾಧಿಸಿ ತೊರಿಸಿದ ವ್ಯಕ್ತಿತ್ವ ಇವರದು. ಅವುಗಳಲ್ಲಿ ಸ್ವಯಂ ಚಳಿತ ಟೆಸ್ಲಾ ಕಾರುಗಳು, ಮಂಗಳದ ವಸಾಹತಿಗೆ ತಯಾರಾದ ಸ್ಪೇಸ್‌ಎಕ್ಸ್    ಫಾಲ್ಕೋನ್ ರಾಕೆಟ್, 800 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಹೈಪೆರ್‌ಲೂಪ್ ಮುಂತಾದ ಅವಿಷ್ಕಾರಗಳು ಮುಖ್ಯವಾದದ್ದು. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್