ಐಫೋನ್ ಸ್ಕ್ರೀನ್ ಬರ್ನ್ ಸಮಸ್ಯೆ ಬಗೆಹರಿಸಿದ ಆ್ಯಪಲ್, iOS 17.1 ರಿಲೀಸ್!

Published : Oct 19, 2023, 12:41 PM IST
ಐಫೋನ್ ಸ್ಕ್ರೀನ್ ಬರ್ನ್ ಸಮಸ್ಯೆ ಬಗೆಹರಿಸಿದ ಆ್ಯಪಲ್,  iOS 17.1 ರಿಲೀಸ್!

ಸಾರಾಂಶ

ಆ್ಯಪಲ್ ಐಫೋನ್‌ಗಳಲ್ಲಿ iOS 17 ವರ್ಶನ್‌ನಿಂದ ಸ್ಕ್ರೀನ್ ಬರ್ನ್ ಸೇರಿದಂತೆ ಕೆಲ ಸಮಸ್ಯೆಗಳು ಫೋನ್‌ನಲ್ಲಿ ಕಾಣಿಸಿಕೊಂಡಿತ್ತು. ಐಪೋನ 15, ಐಫೋನ್ 14, ಐಫೋನ್ 13 ಹಾಗೂ ಕೆಲ ಐಫೋನ್ 12 ಫೋನ್‌ಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಆ್ಯಪಲ್ ಈ ಸಮಸ್ಯೆ ಬಗೆಹರಿಸಿದೆ.  ಸಮಸ್ಯೆ ಬಗೆಹರಿಸಲು iOS 17.1 ರಿಲೀಸ್ ಮಾಡಲಾಗಿದೆ.  

ನವದೆಹಲಿ(ಅ.19) ಐಫೋನ್ 15 ಸೀರಿಸ್ ಭಾರಿ ಬೇಡಿಕೆ ಪಡೆದುಕೊಂಡಿದೆ. ಆನ್‌ಲೈನ್ ಮೂಲಕ ಅತೀ ಹೆಚ್ಚು ಮಾರಾಟಗೊಳ್ಳುತ್ತಿರುವ ಫೋನ್‌ಗಳ ಪೈಕಿ ಐಫೋನ್ 15 ಮುಂಚೂಣಿಯಲ್ಲಿದೆ. ಆದರೆ ಐಫೋನ್ 15 ಬಳಕೆದಾರರು ಹೆಚ್ಚಾಗಿ ಫೋನ್ ಬಿಸಿಯಾಗುತ್ತಿರುವ ಸಮಸ್ಯೆ ಎದುರಿಸಿದರೆ, ಐಫೋನ್ 14, 13 ಹಾಗೂ ಕೆಲ 12 ಗ್ರಾಹಕರು ಸ್ಕ್ರೀನ್ ಬರ್ನ್ ಸಮಸ್ಯೆ ಸೇರಿದಂತೆ ಕೆಲ ಕಿರಿಕಿರಿ ಅನುಭವಿಸುತ್ತಿದ್ದಾರೆ. ಐಫೋನ್‌ನ iOS 17 ವರ್ಶನ್‌ ಈ ಸಮಸ್ಯೆಗಳಿವೆ. ಹೀಗಾಗಿ ಆ್ಯಪಲ್ ಹಾರ್ಡ್‌ವೇರ್ ಅಪ್‌ಡೇಟ್ ಮಾಡಿದೆ. ಇದೀಗ iOS 17.1 ವರ್ಶನ್ ರಿಲೀಸ್ ಮಾಡಿದೆ. 

 ಗ್ರಾಹಕರ ಸಮಸ್ಯೆಗೆ ಸ್ಪಂದಿಸಿದ ಆ್ಯಪಲ್ ಇದೀಗ ಐಫೋನ್ ಆಪರಿಟಿಂಗ್ ಸಿಸ್ಟಮ್ 17.1 ಮೂಲಕ ಸಮಸ್ಯೆಗೆ ಮುಕ್ತಿ ಹಾಡಿದೆ. ಇದೀಗ ಆ್ಯಪಲ್ 17.1 ವರ್ಶನ್  iOSರಿಲೀಸ್ ಮಾಡಿದೆ. iOS 17.1 RC ಅಪ್‌ಡೇಟ್ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಡೆವಲಪ್ಪರ್ಸ್ ಹಾಗೂ ಬೀಟಾ ಟೆಸ್ಟರ್ಸ್ ಇಬ್ಬರಿಗೂ iOS 17.1 RC ಅಪ್‌ಡೇಟ್ ಬಿಡುಗಡೆ ಮಾಡಲಾಗಿದೆ.

 

24 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗುತ್ತೆ ಆ್ಯಪಲ್ ಐಫೋನ್‌ 14 ಪ್ಲಸ್‌: ಇಲ್ಲಿದೆ ವಿವರ..

ಇತ್ತೀಚೆಗೆ ಐಫೋನ್ 15 ಭಾರತದಲ್ಲಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆಗೊಂಡಿರುವ ಐಫೋನ್ 15 ಹೊಸ ದಾಖಲೆ ಬರೆದಿದೆ. 

ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಬರ್ನ್, ಕಲೆಗಳಿಂದ iOS 17 ವರ್ಶನ್ ಆಪೇರಿಟಿಂಗ್ ಸಿಸ್ಟಮ್ ಗಂಭೀರ ಸಮಸ್ಯೆಗಳ ಸೂಚನೆ ನೀಡಿತ್ತು. ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿರುವ ಐಫೋನ್ ಇದೀಗ 15 ಸೀರಿಸ್ ತಲೆನೋವು ಬಗೆಹರಿದಿದೆ.  

26,399 ರೂ. ಗೆ ಐಫೋನ್‌ 13 ಖರೀದಿಸ್ಬೇಕಾ? ಇಲ್ಲಿದೆ ಸೂಪರ್‌ ಆಫರ್‌..!

ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ 7 ಶತಕೋಟಿ ಡಾಲರ್‌ (57500 ಕೋಟಿ ರು.) ಮೌಲ್ಯದ ಐಪೋನ್‌ಗಳನ್ನು ಉತ್ಪಾದಿಸಲಾಗಿತ್ತು. ಇದು ಐಫೋನ್‌ನ ಜಾಗತಿಕ ಉತ್ಪಾದನೆಯಲ್ಲಿ ಕೇವಲ ಶೇ.7ರಷ್ಟುಪಾಲಾಗಿತ್ತು. ಆದರೆ ಕೆಲ ತಿಂಗಳಿನಿಂದ ಫಾಕ್ಸ್‌ಕಾನ್‌ ಕಂಪನಿ ಭಾರತದಲ್ಲೂ ಐಫೋನ್‌ನ ಉತ್ಪಾದನೆ ಹೆಚ್ಚಿಸಿದೆ. ಇದರ ಜೊತೆಗೆ ಐಫೋನ್‌ ಉತ್ಪಾದಿಸುವ ಪೆಗಾಟ್ರಾನ್‌ ಮತ್ತು ವಿಸ್ಟ್ರಾನ್‌ ಕಂಪನಿಗಳನ್ನು ಇತ್ತೀಚೆಗೆ ಟಾಟಾ ಸಮೂಹ ಖರೀದಿ ಮಾಡಿದ್ದು, ಅವು ಕೂಡಾ ಶೀಘ್ರ ಐಫೋನ್‌ನ ಹೊಸ ಮಾದರಿಗಳನ್ನು ಉತ್ಪಾದಿಸಲಿವೆ ಎನ್ನಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌