ಡಿಸೈನ್ ಡಿಸೈನ್ ಮೊಬೈಲ್ ಕವರ್ ಮಾರುಕಟ್ಟೆಯಲ್ಲಿದೆ. ಜನರು ತಮಗಿಷ್ಟದ ಕವರ್ ಖರೀದಿ ಮಾಡಿದ್ರೂ ಕವರ್ ಹಿಂದೆ ನಮಗೆ ನೋಟು ಕಾಣಿಸುತ್ತೆ. ಈ ನೋಟು ನಮಗೆ ಅಗತ್ಯವಿರಬಹುದು ಆದ್ರೆ ಇದೇ ನಮ್ಮ ಸಾವಿಗೂ ಕಾರಣವಾಗ್ಬಹುದು.
ನೀರಿಲ್ಲದೆ ಅರ್ಧ ಗಂಟೆಯಾದ್ರೂ ಇರ್ಬಹುದು. ಆದ್ರೆ ಮೊಬೈಲ್ ಇಲ್ಲದೆ ಒಂದು ನಿಮಿಷ ಇರೋದು ಕಷ್ಟ ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. ಮನೆಯಲ್ಲಿರಲಿ ಇಲ್ಲ ಮನೆಯಿಂದ ಹೊರಗೆ ಹೋಗುವ ಸಮಯವಿರಲಿ ಮೊಬೈಲ್ ಕೈನಲ್ಲಿ ಇರಲೇಬೇಕು. ಇಡೀ ದಿನ ಮೊಬೈಲ್ ಕೈನಲ್ಲಿ ಹಿಡಿದು ಕುಳಿತಿರುವ ಜನರನ್ನು ನೀವು ನೋಡ್ಬಹುದು. ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಮೊಬೈಲ್ (Mobile) ನಲ್ಲಿಯೇ ಈಗ ಪ್ರಪಂಚವಿದೆ. ಮನೆಯಿಂದ ಹೊರಗೆ ಹೋಗುವ ವೇಳೆ ನಿಮ್ಮ ಕೈನಲ್ಲಿ ಮೊಬೈಲ್ ಇದ್ರೆ ಸಾಕು. ಪರ್ಸ್ (Purse) ಅಗತ್ಯವಿರೋದಿಲ್ಲ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಂತಾ ಎಲ್ಲ ವ್ಯವಹಾರ ಮೊಬೈಲ್ ನಲ್ಲೇ ಆಗುತ್ತದೆ. ಕೆಲವು ಬಾರಿ ನಾವು ಮೊಬೈಲ್ ನಲ್ಲಿ ಆನ್ಲೈನ್ (Online) ಪೇಮೆಂಟ್ ಸಾಧ್ಯವಾಗದೆ ಹೋದಾಗ ತುರ್ತು ಪರಿಸ್ಥಿತಿಯಲ್ಲಿ ಹಣ ಬೇಕಾಗುತ್ತೆ ಎನ್ನುವ ಕಾರಣಕ್ಕೆ ಜನರು ಮೊಬೈಲ್ ಹಿಂಭಾಗದಲ್ಲಿ ನೋಟುಗಳನ್ನು ಇಟ್ಟುಕೊಂಡು ಹೋಗ್ತಾರೆ. ಇನ್ನು ಕೆಲವರು, ಅಂಗಡಿಯಿಂದ ಅಥವಾ ಬೇರೆ ಯಾರಿಂದಲೋ ಪಡೆದ ಹಣವನ್ನು ಬ್ಯಾಗ್ ಗೆ ಹಾಕುವ ಬದಲು ಮೊಬೈಲ್ ಹಿಂದೆ, ಕವರ್ ಒಳಗೆ ಹಾಕಿಕೊಳ್ತಾರೆ.
undefined
ಬಾಯ್ ಫ್ರೆಂಡ್‌ಗೊಂದು ದಿನ, ಇಂದು ಅವರ ಮುಂದೆ ನಿಮ್ಮ ಮನಸ್ಸು ಬಿಚ್ಚಿಡಿ
ಬೇಕಾದ್ರೆ ನೀವೇ ನೋಡಿ, ನಿಮ್ಮ ಮೊಬೈಲ್ ಹಿಂದೆಯೂ ಹತ್ತು, 20, 100, 500ರಲ್ಲಿ ಒಂದಾದ್ರೂ ನೋಟ್ ಇದ್ದೇ ಇರುತ್ತೆ. ತುರ್ತು ಪರಿಸ್ಥಿತಿಯಲ್ಲಿ ಇದು ಬೇಕು ಎನ್ನುವ ಕಾರಣಕ್ಕೇ ಹಣವನ್ನು ಫೋನ್ ಕವರ್ ಒಳಗೆ ಇಟ್ಟಿರ್ತೇವೆ. ನೀವೂ ಮೊಬೈಲ್ ಕವರ್ ನಲ್ಲಿ ಹಣವಿಟ್ಟು ಓಡಾಡುವವರಾಗಿದ್ದರೆ ಇಂದೇ ನೋಟ್ ತೆಗೆದುಬಿಡಿ. ಇದು ತುಂಬಾ ಅಪಾಯಕಾರಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಮೊಬೈಲ್ ಕವರ್ ನಲ್ಲಿರುವ ನೋಟು, ಮೊಬೈಲ್ ಬ್ಲಾಸ್ಟ್ ಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ನೋಟು ಇಟ್ಟುಕೊಳ್ಳುವುದು ಹೇಗೆ ಸ್ಫೋಟಕ್ಕೆ ಕಾರಣವಾಗಬಹುದು ಎಂದು ನಿಮಗೆ ಅಚ್ಚರಿಯಾಗಬಹುದು. ನೋಟಿನಲ್ಲಿ ವಿದ್ಯುತ್ ಪ್ರವಾಹ ಆಗೋದಿಲ್ಲ ಎಂದು ನೀವು ಅಂದುಕೊಂಡಿರಬಹುದು. ಆದ್ರೆ ಕವರ್ ಒಳಗೆ ನೋಟು ಇಡೋದು ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಮೇಡ್ ಇನ್ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!
ಮೊಬೈಲ್ ಸ್ಫೋಟಕ್ಕೆ ನೋಟು ಹೇಗೆ ಕಾರಣವಾಗುತ್ತೆ? : ವಾಸ್ತವವಾಗಿ ನೀವು ಫೋನ್ ಅನ್ನು ದೀರ್ಘಕಾಲದವರೆಗೆ ಬಳಸಿದಾಗ ಅಥವಾ ಕರೆಗಳನ್ನು ಮಾಡುವಾಗ ಅಥವಾ ವೀಡಿಯೊಗಳನ್ನು ವೀಕ್ಷಿಸಿದಾಗ, ಫೋನ್ ಪ್ರೊಸೆಸರ್ ಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಮಯದಲ್ಲಿ ಪ್ರೊಸೆಸರ್ ಶಾಖವನ್ನು ಉತ್ಪಾದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಫೋನ್ ತುಂಬಾ ಬಿಸಿಯಾಗುತ್ತದೆ. ಆದ್ದರಿಂದ ಫೋನ್ ಕವರ್‌ನಲ್ಲಿ ನೋಟುಗಳನ್ನಿಟ್ಟರೆ ಅದು ಬಿಸಿಯಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಫೋನ್ ತಯಾರಿಸುವ ವೇಳೆ ಹಾಗೂ ನೋಟ್ ತಯಾರಿಸುವ ವೇಳೆ ಕೆಲ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದರಿಂದ ಫೋನಿನಲ್ಲಿ ಶಾಖ ಉತ್ಪತ್ತಿಯಾದಾಗ ರಾಸಾಯನಿಕ ಕ್ರಿಯೆ ನಡೆದು ಪೇಪರ್ ನೋಟು ಸುಟ್ಟುಹೋಗುತ್ತದೆ.
anamikaversatile ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಈ ವಿಡಿಯೋಕ್ಕೆ ಸಿಕ್ಕಿದೆ.
ಟೈಟ್ ಕವರ್ ಬಳಕೆ ಮಾಡ್ಬೇಡಿ : ಫೋನ್ ಗೆ ಕವರ್ ಹಾಕೋದು ಬಹಳ ಮುಖ್ಯ. ಫೋನ್ ಸ್ಕ್ರೀನ್ ಹಾಗೂ ಕ್ಯಾಮರಾ ಹಾಳಾಗುವ ಸಾಧ್ಯತೆ ಇರುವ ಕಾರಣ ನೀವು ಕವರ್ ಹಾಕ್ಬೇಕು. ಆದ್ರೆ ಟೈಟ್ ಕವರ್ ಹಾಕ್ಬೇಡಿ. ನೀವು ಟೈಟ್ ಕವರ್ ಹಾಕಿದಾಗ ಫೋನ್ ನಿಂದ ಶಾಖ ಹೊರಗೆ ಬರೋದಿಲ್ಲ. ಈ ಸಮಯದಲ್ಲಿ ನಿಮ್ಮ ಫೋನ್ ಕವರ್ ಒಳಗೆ ನೋಟ್ ಇಟ್ಟರೆ ನೋಟ್ ಬೇಗ ಬಿಸಿಯಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.