ಶಓಮಿ 15 ಸೀರೀಸ್ ಬಿಡುಗಡೆಯಾಗಿದೆ. ಸುಧಾರಿತ ಕ್ಯಾಮರಾ ಸ್ಮಾರ್ಟ್ ಫೋನ್ ಪ್ರೀ ಬುಕ್ ಮಾಡಿದರೆ, ಉಚಿತ ಲೆಜೆಂಡ್ ಎಡಿಷನ್ ಫೋಟೋಗ್ರಫಿ ಕಿಟ್ ಸೇರಿದಂತೆ ₹21,999 ಮೌಲ್ಯದ ಪ್ರಯೋಜನ, 10,999 ಮೌಲ್ಯದ ಆಫರ್ ಸೇರಿದಂತೆ ಹಲವು ಪ್ರಯೋಜನ ನಿಮ್ಮದಾಗಲಿದೆ.
ಬೆಂಗಳೂರು(ಮಾ.17) ಶಓಮಿ ಇಂಡಿಯಾ ಇದೀಗ ಶಓಮಿ 15 ಬಿಡುಗಡೆ ಮಾಡುತ್ತಿದೆ. ಸದ್ಯ ಶಓಮಿ ಅಧಿಕೃತವಾಗಿ ಬೆಲೆ ಘೋಷಿಸಿದೆ. ಲೀಕಾ ಸಮ್ಮಿಲಕ್ಸ್ ಆಪ್ಟಿಕಲ್ ಲೆನ್ಸ್ ಗಳು ಮತ್ತು ಶಕ್ತಿಯುತ ಸ್ನಾಪ್ ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್ ಫಾರಂ ಶಓಮಿ ಹೈಪರ್ ಒಎಸ್ 2ನಿಂದ ಕೂಡಿದೆ. ಶಓಮಿ 15 ಸೀರೀಸ್ ಮುಂದಿನ ತಲೆಮಾರಿನ ಎಐ ಸಾಮರ್ಥ್ಯಗಳು, ಉನ್ನತೀಕರಿಸಿದ ಸಿಸ್ಟಂ ಆಪ್ಟಿಮೈಸೇಷನ್ ಮತ್ತು ಉನ್ನತ ಕನೆಕ್ಟಿವಿಟಿ ನೀಡುತ್ತದೆ. ವಿಶೇಷ ಅಂದರೆ ಶಓಮಿ 15 ಸೀರೀಸ್ ಫೋನ್‌ನ್ನು ಮಾರ್ಚ್ 19 ರಂದು ಪ್ರೀ ಬುಕ್ ಮಾಡಿದರೆ ಭರ್ಜರಿ ಆಫರ್ ಪಡೆಯುತ್ತೀರಿ.
ಬೆಲೆ ಮತ್ತು ಲಭ್ಯತೆ
ಶಓಮಿ 15, ₹64,999*ರಿಂದ ಆರಂಭಗೊಳ್ಳುತ್ತಿದೆ. ಶಓಮಿ 15 ಅಲ್ಟ್ರಾ ₹1,09,999*ರಿಂದ ಆರಂಭಗೊಳ್ಳುತ್ತಿದೆ.
ಶಓಮಿ 15 ಸೀರೀಸ್ ಏಪ್ರಿಲ್ 3, 2025ರಿಂದ ಎಂಐ.ಕಾಂ, ಅಮೆಜಾನ್.ಇನ್ ಮತ್ತು ಅಧಿಕೃತ ರೀಟೇಲ್ ಮಳಿಗೆಗಳಲ್ಲಿ ಲಭ್ಯ.
ಅತ್ಯಾಕರ್ಷಕ 4 ಬಣ್ಣಗಳಲ್ಲಿ 50MP+20MP ಕ್ಯಾಮೆರಾ, 5110 mAh ಬ್ಯಾಟರಿಯ ಸ್ಮಾರ್ಟ್‌ಫೋನ್
ಪ್ರಿ-ಬುಕಿಂಗ್ ಮಾರ್ಚ್ 19, 2025ರಂದು ಪ್ರಾರಂಭ. ಶಓಮಿ 15 ಅಲ್ಟ್ರಾ ಪ್ರಿ-ಬುಕ್ ಮಾಡಿದವರು ಫೋಟೋಗ್ರಫಿ ಕಿಟ್-ಎಜೆಂಡ್ ಎಡಿಷನ್(₹11,999 ಮೌಲ್ಯ) ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯುತ್ತಾರೆ. ಶಓಮಿ 15 ಪ್ರಿ-ಬುಕ್ ಮಾಡಿದವರು ಶಓ ಮಿ ಕೇರ್ ಪ್ಲಾನ್ (₹5,999 ಮೌಲ್ಯ) ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯುತ್ತಾರೆ.
ಶಓಮಿ 15: ಪರಿಪೂರ್ಣ ರೀತಿಯಲ್ಲಿ ಸಮಗ್ರವಾದ ಶ್ರೇಷ್ಠತೆ
ಪರಿಷ್ಕೃತ, ದಕ್ಷತಾಶಾಸ್ತ್ರೀಯ ವಿನ್ಯಾಸದಲ್ಲಿ ಮುಂಚೂಣಿಯ ಅನುಭವ ನಿರೀಕ್ಷಿಸುವ ಬಳಕೆದಾರರಿಗೆ ವಿನ್ಯಾಸಗೊಳಿಸಲಾದ ಶಓಮಿ 15, 6.36-ಇಂಚು ಕ್ರಿಸ್ಟಲ್ ರೆಸ್ ಡೈನಮಿಕ್ 1-120 ಹರ್ಟ್ಸ್ ಅಮೋಲ್ಡ್ ಡಿಸ್ಪ್ಲೇಯನ್ಉ 94% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ. ಇದರ ವೈವಿಧ್ಯಮಯ ಟ್ರಿಪಲ್-ಕ್ಯಾಮರಾ ಸಿಸ್ಟಂ 14ಎಂಎಂನಿಂದ 120ಎಂಎಂ ಫೋಕಲ್ ಲೆಂಥ್ ಹೊಂದಿದ್ದು ಇದರೊಂದಿಗೆ ಲೀಕಾ ಸಮ್ಮಿಲಕ್ಸ್ ಮೈನ್ ಕ್ಯಾಮರಾ ಎಫ್/1.62 ಅಪರ್ಚರ್ ಮತ್ತು ಲೈಟ್ ಹಂಟರ್ ಫ್ಯೂಷನ್ 900 ಸೆನ್ಸರ್ ಅನ್ನು ಅಸಾಧಾರಣ ಛಾಯಾಗ್ರಹಣಕ್ಕೆ ಹೊಂದಿದೆ. 60ಎಂಎಂ ಲೀಕಾ ಫ್ಲೋಟಿಂಗ್ ಟೆಲಿಫೋಟೋ ಕ್ಯಾಮರಾ ಕ್ಲೋಸ್-ಅಪ್ ಛಾಯಾಗ್ರಹಣದಲ್ಲಿ ಉತ್ತಮವಾಗಿದ್ದು ಫಾಸ್ಟ್ ಶಾಟ್ ಮೋಡ್ ಬಳಕೆದಾರರಿಗೆ ಕೇವಲ 0.6 ಸೆಕೆಂಡುಗಳ ಕ್ಷಣಗಳನ್ನೂ ಸೆರೆ ಹಿಡಿಯುತ್ತದೆ. 30ಎಫ್.ಪಿ.ಎಸ್.ನಲ್ಲಿ 8ಕೆ ವಿಡಿಯೋ ರೆಕಾರ್ಟಿಂಗ್ ಮತ್ತು ಡಾಲ್ಬಿ ವಿಷನ್ 5ಕೆ 60ಎಫ್.ಪಿ.ಎಸ್. ಹೊಂದಿರುವ ಶಓಮಿ 15 ಪ್ರತಿ ಫ್ರೇಮ್ ಕೂಡಾ ಸಿನಿಮೀಯವಾಗಿರುವಂತೆ ಮಾಡುತ್ತದೆ.
ಶಓಮಿ 15 ಅಲ್ಟ್ರಾ: ಸ್ಮಾರ್ಟ್ ಫೋನ್ ಛಾಯಾಗ್ರಹಣ ಮತ್ತು ಆವಿಷ್ಕಾರದಲ್ಲಿ ಶ್ರೇಷ್ಠತೆ
ಲೀಕಾದ ಮುಂಚೂಣಿಯ ಕ್ಲಾಸಿಕ್ ಕ್ಯಾಮರಾ ಕರಕುಶಲತೆಯಿಂದ ಸ್ಫೂರ್ತಿ ಪಡೆದ ಶಓಮಿ 15 ಅಲ್ಟ್ರಾ ಸ್ಮಾರ್ಟ್ ಫೋನ್ ಇಮೇಜಿಂಗ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೃತ್ತಿಪರ ಮಟ್ಟದ ಸಾಮರ್ಥ್ಯಗಳೊಂದಿಗೆ ಮರು ವ್ಯಾಖ್ಯಾನಿಸುತ್ತದೆ. ಇದರ 1-ಇಂಚು 50ಎಂಪಿ ಲೀಕಾ ಸಮ್ಮಿಲಕ್ಸ್ ಮೈನ್ ಕ್ಯಾಮರಾ ಸೋನಿ ಎಲ್.ವೈ.ಟಿ.-900 ಸೆನ್ಸರ್ ಮತ್ತು 14ಇವಿ ಹೈ ಡೈನಮಿಕ್ರೇಂಜ್ ಹೊಂದಿದ್ದು 14ಎಂಎಂನಿಂದ 200 ಎಂಎಂ ಆಪ್ಟಿಕಲ್ ಗುಣಮಟ್ಟದ ಝೂಮ್ ಶ್ರೇಣಿಯಲ್ಲಿ ಅತ್ಯಾಕರ್ಷಕ ಛಾಯಾಚಿತ್ರದ ಗುಣಮಟ್ಟ ನೀಡುತ್ತದೆ. ಆಕರ್ಷಕ ಭೂ ಪ್ರದೇಶಗಳು, ವಿವರವಾದ ಪೋರ್ಟ್ರೈಟ್ ಅಥವಾ ಚಲನಶೀಲ ರಸ್ತೆಯ ಛಾಯಾಗ್ರಹಣವಿರಲಿ ಬಳಕೆದಾರರು ವೃತ್ತಿಪರ ಮಟ್ಟದ ಫಲಿತಾಂಶಗಳನ್ನು ಪಡೆಯಬಹುದು. ಶಓಮಿ 15 ಅಲ್ಟ್ರಾ ಮೊಬೈಲ್ ವಿಡಿಯೋಗ್ರಫಿಯ ಗಡಿಗಳನ್ನು 4ಕೆ 120 ಎಫ್.ಇ.ಎಸ್ ಸ್ಲೋ-ಮೋಷನ್ ರೆಕಾರ್ಡಿಂಗ್ ಮೂಲಕ ವಿಸ್ತರಿಸಿದೆ.
ಶಓಮಿ 15 ಅಲ್ಟ್ರಾ ಫೋಟೋಗ್ರಫಿ ಕಿಟ್- ಲೆಜೆಂಡ್ ಎಡಿಷನ್
ಛಾಯಾಗ್ರಹಣದ ಉತ್ಸಾಹಿಗಳಿಗೆ ಶಓಮಿ 15 ಅಲ್ಟ್ರಾ ಫೋಟೋಗ್ರಫಿ ಕಿಟ್ ಭಾರತಕ್ಕೆ ಪ್ರವೇಶಿಸಿದ್ದು ಇದು ಕಿರಿದಾದ ಮಾದರಿಯಲ್ಲಿ ವೃತ್ತಿಪರ ಗುಣಮಟ್ಟದ ನಿಯಂತ್ರಣ ನೀಡುತ್ತದೆ. ಶಟರ್ ಬಟನ್ ಮತ್ತು ಹಿಡಿತವು ಡಿ.ಎಸ್.ಎಲ್.ಆರ್. ರೀತಿಯ ಅನುಭವ ನೀಡುತ್ತದೆ. ಬಿಲ್ಟ್-ಇನ್ 2000ಎಂಎಎಚ್ ಬ್ಯಾಟರಿ ಶೂಟಿಂಗ್ ಸೆಷನ್ ಗಳನ್ನು ವಿಸ್ತರಿಸುತ್ತದೆ, ಕಸ್ಟಮೈಸ್ ಮಾಡಬಲ್ಲ ಮತ್ತು ಝೂಮ್ ಲಿವರ್ ಅಂತರ್ಬೋಧೆಯ ಎಕ್ಸ್ಪೋಷರ್ ಮತ್ತು ಝೂಮ್ ಹೊಂದಾಣಿಕೆಗಳನ್ನು ನೀಡುತ್ತದೆ.
ಆರ್ಡರ್ ಮಾಡಿದ 10ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಸ್ಮಾರ್ಟ್ ಟಿವಿ, ಹೇಗೆ ಸಾಧ್ಯ ಅಂತೀರಾ ಇಲ್ಲಿ ನೋಡಿ!