ಏರ್‌ಟೆಲ್‍‌ನಿಂದ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್; 3 ನಿಮಿಷದಲ್ಲಿ 4GB ಸಿನಿಮಾ ಡೌನ್ಲೋಡ್!

By Suvarna NewsFirst Published Feb 10, 2021, 7:17 PM IST
Highlights

ಕೊರೋನಾ ವೈರಸ್ ಬಳಿಕ ಪ್ರತಿ ಮನೆಗೂ ಇಂಟರ್ನೆಟ್ ಸೇವೆ ಅಗತ್ಯವಿದೆ. ಇಷ್ಟೇ ಅಲ್ಲ ಅತೀ ವೇಗದ ಇಂಟರ್ನೆಟ್ ಸೇವೆ ಬೇಕೆ ಬೇಕು. ಇದೀಗ ಏರ್‌ಟೆಲ್ ಹೊಸ ಪ್ಲಾನ್ ಹಾಗೂ ರೂಟರ್ ಲಾಂಚ್ ಮಾಡಿದೆ.  ನಿಮಿಷಗಳಲ್ಲಿ 90 ಜಿಪಿ ಗೇಮಿಂಗ್ ಫೈಲ್,  4GB 4Kಸಿನಿಮಾ ಡೌನ್ಲೋಡ್ ಮಾಡಬಹುದು. ನೂತನ ಪ್ಲಾನ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಹುತೇಕ ಎಲ್ಲಾ ಕ್ಷೇತ್ರಗಳು ಡಿಜಿಟಲೀಕರಣವಾಗಿದೆ. ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದೆ. 2020ರ ವರ್ಷ ಇದೇ ಇಂಟರ್ನೆಟ್, ಡೇಟಾವನ್ನು ನಾವೆಷ್ಟು ಅವಲಂಬಿಸಿದ್ದೇವೆ ಅನ್ನೋದನ್ನು ಮನವರಿಕೆ ಮಾಡಿಕೊಟ್ಟಿತ್ತು. ಕೊರೋನಾ ವಕ್ಕರಿಸಿದ ಬಳಿಕ ವರ್ಕ್ ಫ್ರಮ್ ಹೋಮ್, ಮನೆಯಿಂದಲೇ ವಸ್ತುಗಳ ಆರ್ಡರ್, ಆನ್‌ಲೈನ್ ಶಾಂಪಿಂಗ್, ಮನರಂಡನೆ ಸೇರಿದಂತೆ ಎಲ್ಲವೂ ಕೂಡ ನೆಟ್ ಮೂಲಕವೇ ಆಗತೊಡಗಿತು. ಅಲ್ಲೀವರೆಗೆ ಕಚೇರಿಯಲ್ಲಿ, ಮೊಬೈಲ್‌ನಲ್ಲಿ ಡೇಟಾ ಇದ್ದರೆ ಸಾಕಿತ್ತು. ಆದರೆ ಕೊರೋನಾ ಬಳಿಕ ಮನೆಗೆ ವೈ-ಫೈ ಅಗತ್ಯತೆ ಹೆಚ್ಚಾಯಿತು. ಕಳೆದ ವರ್ಷ ಬಹುತೇಕರು ಹೈ ಸ್ಪೀಡ್, ಯಾವುದೇ ಅಡೆ ತಡೆ ಇಲ್ಲದ ವೈ ಫೈ ಸಂಪರ್ಕಕ್ಕೆ ಹಾತೊರೆದರು. ಇದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಏರ್‌ಟೆಲ್ ಗ್ರಾಹಕರ ಬೇಡಿಕೆಗೆ ತಕ್ಕಂತೆ ನೆಟ್ ಸೇವೆ ನೀಡಿತು. ಇದೀಗ ಮತ್ತಷ್ಟು ವೇಗದ ಹೊಚ್ಚ ಹೊಸ ಪ್ಲಾನ್ ಪರಿಚಯಿಸುತ್ತಿದೆ.

ಹೊಸ ಬಗೆಯ ಇಂಟರ್ನೆಟ್:
ಜನರು ಯಾವುದೇ ಅಡೆ ತಡೆ ಇಲ್ಲದ, ಅತೀ ವೇಗವಾಗಿ ಇಂಟರ್ನೆಟ್ ಬಯಸುತ್ತಿರುವ ಈ ಕಾಲದಲ್ಲಿ ಏರ್‌ಟೆಲ್ ಗ್ರಾಹಕರ ಬೇಡಿಕೆ ತಕ್ಕಂತೆ  ಅತ್ಯುತ್ತಮ ಇಂಟರ್ನೆಟ್ ಸೇವೆ ಒದಿಗಸವು ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಸಫಲವಾಗಿದೆ. ಕೊರೋನಾ ಬಳಿಕ ಜನರು ವರ್ಕ್ ಫ್ರಮ್ ಹೋಮ್ ಅವಕಾಶ ಪಡೆದುಕೊಂಡರು. ಮನೆಯಿಂದ ಕೆಲಸ ಮಾಡುವುದೇ ಉತ್ತಮ ಆಯ್ಕೆಯಾಗಿ ಪರಿಣಮಿಸಿತು. ಇಷ್ಟೇ ಅಲ್ಲ ಮನೆಯಲ್ಲಿ ಅತೀ ವೇಗದ ಇಂಟರ್ನೆಟ್ ಕನೆಕ್ಷನ್ ಬೇಡಿಕೆಯೂ ಹೆಚ್ಚಾಯಿತು. 

ಏರ್‌ಟೆಲ್ ಗ್ರಾಹಕರು ವೀಡಿಯೊ ಕಾನ್ಫರೆನ್ಸಿಂಗ್, ಲೈವ್ ಸ್ಟ್ರೀಮ್, ಡೇಟಾ ಟ್ರಾನ್ಸ್‌ಫರ್,  ವರ್ಚುವಲ್ ಪಾರ್ಟಿಗಳನ್ನು ಯಾವುದೇ ಅಡಚಣೆ ಇಲ್ಲದೆ ಅನುಭವಿಸಿದ್ದಾರೆ.   ಕಳೆದ ವರ್ಷ ಏರ್‌ಟೆಲ್ 1GBPS ಇಂಟರ್ನೆಟ್ ವೇಗವನ್ನು ನೀಡಿದೆ.  ಭಾರತದಲ್ಲಿ ಗಿಗಾ ಸ್ಪೀಡ್ ನೀಡಿದ ಹೆಗ್ಗಳಿಕೆಗೆ ಏರ್‌ಟೆಲ್‌ಗಿದೆ.  ಇದೀಗ ಏರ್‌ಟೆಲ್ ದೇಶದ ಮೊದಲ ಗಿಗಾ ಸ್ಪೀಡ್ ವೇಗದ ಇಂಟರ್ನೆಟ್ ಸೇವೆ ನೀಡುತ್ತಿದೆ.   ಇದರ ವೇಗಎಷ್ಟೆಂದರೆ ಕೇವಲ 3 ನಿಮಿಷಗಳಲ್ಲಿ 4 GB 4K ವೀಡಿಯೊ ಡೌನ್‌ಲೋಡ್ ಅಥವಾ 95GB ಗೇಮ್ ಫೈಲನ್ನು ಕೇವಲ 20 ನಿಮಿಷದಲ್ಲೇ ಡೌನ್ಲೋಡ್ ಮಾಡಲು ಸಾಧ್ಯವಿದೆ.

ಈ ಹೊಸ ಪ್ಲಾನ್ ಹಾಗೂ ಸೇವೆಯ ಮತ್ತೊಂದು ವಿಶೇಷ ಎಂದರೆ, ಹಿಂದಿನಂತೆ LAN ಕೇಬಲ್‌ಗಳಿಗೆ ಸೀಮಿತವಾಗಿಲ್ಲ. ಸದ್ಯ ಲಭ್ಯವಿರುವ ಇತರ ರೂಟರ್ಸ್‌ನಿಂದ 1GBPS ವೇಗ ನೀಡಲು ಸಾಧ್ಯವಿಲ್ಲ. ಇಷ್ಟೇ ಏರ್‌ಟೆಲ್ ನೀಡವು ವೇಗದ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ಜನರು ಅತೀ ವೇಗದ ಇಂಟರ್ನೆಟ್ ಸೇವೆಗೆ LAN ಕೇಬಲ್‌ ಬಳಕೆ ಮಾಡುತ್ತಿದ್ದರು. ಇದೀಗ ಏರ್‌ಟೆಲ್ ಹೊಸ ರೂಟರ್ ಬಿಡುಗಡೆ ಮಾಡಿದೆ. ಇದು ಅತ್ಯುತ್ತಮ ಸ್ಪೀಡ್ ಮಾತ್ರವಲ್ಲ ಇದು ವೈ-ಫೈ ಮೂಲಕ ನೀಡಲಿದೆ.  ಇದು ಟ್ರೈ ಬ್ರಾಂಡ್ ಮತ್ತು MU MIMO ತಂತ್ರಜ್ಞಾನದ ಮೂಲಕ ಸ್ಪೀಡ್ ಇಂಟರ್ನೆಟ್ ಸೇವೆ ನೀಡಲಿದೆ. ಇನ್ನು ರೂಟರ್ ಮೂಲಕ ವೈ-ಫೈನಲ್ಲಿರುವಂತೆ ಹಲವು ಕನೆಕ್ಷನ್ ಪಡೆಯಬಹುದು.  ಇದರ ಪ್ರಮುಖ ಉಪಯೋಗವೆಂದರೆ ಕುಟುಂಬದಲ್ಲಿ ಯಾರಾದರೂ ನೆಟ್‌ಫ್ಲಿಕ್ ವೀಕ್ಷಣೆ ಮಾಡುತ್ತಿದ್ದರೆ, ದಿಢೀರ್ ಕರೆ ಬಂದಾಗ ನೆಟ್‌ಫ್ಲಿಕ್ಸ್ ನಿಲ್ಲಿಸುವಂತೆ, ಅಥವಾ ವೀಕ್ಷಕರಿಗೆ ಅಡ್ಡಿಯಾಗುವಂತೆ ಯಾವುದೇ ಪ್ರಮೇಯ ಬರುವುದಿಲ್ಲ. ಪ್ರತಿಯೊಬ್ಬರು ಇಂಟರ್ನೆಟ್ ಮೂಲಕ ತಮ್ಮ ತಮ್ಮ ಕಾರ್ಯವನ್ನು ಏಕಕಾಗಲದಲ್ಲೇ ಮಾಡಬಹುದು.

ರೂಟರ್ ಪಡೆಯುವುದು ಹೇಗೆ?
ಈ ಮಾಹಿತಿ ನಿಮ್ಮನ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ. ಏರ್‌ಟೆಲ್ ರೂಟರ್‌ನ್ನು 1GBPS ಪ್ಲಾನ್‌ನೊಂದಿಗೆ ಉಚಿತವಾಗಿ ನೀಡುತ್ತಿದೆ . ಇದು ಕೇವಲ ಹೊಸ ಚಂದಾದಾರರಿಗೆ ಮಾತ್ರವಲ್ಲ, ಈಗಾಗಲೇ ಏರ್‌ಟೆಲ್ ಕನೆಕ್ಷನ್ ಹೊಂದಿದವರಿಗೂ ಉಚಿತವಾಗಿದೆ.  ಈಗಾಗಲೇ ಚಂದಾದಾರರಾಗಿರುವ ಗ್ರಾಹಕರು ಹಾಗೂ ಹಳೆ ಪ್ಲಾನ್ ಸಬ್ಸ್‌ಸ್ಕ್ರೈಬರ್ ಆಗಿದ್ದರೆ, ಅತೀ ವೇಗದ ಇಂಟರ್ನೆಟ್ ಹಾಗೂ ರೂಟರ್ ಪಡೆಯಲು ನೀವು ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಬೇಕು. ಇದನ್ನು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ನಿಮಿಷಗಳಲ್ಲಿ ಮಾಡಬಹುದು. ಹೀಗಾಗಿ ಇನ್ನು ಕಾಯಬೇಕಾದ ಅಗತ್ಯವಿಲ್ಲ.

click me!