ಒಬ್ಬರ ರೀಚಾರ್ಜ್‌ನಿಂದ ಮನೆಯ ನಾಲ್ಕು ಜನರಿಗೆ ಲಾಭ... ದಿನವಿಡೀ ಮಾತಿನ ಜೊತೆ ಸೂಪರ್‌ಫಾಸ್ಟ್ ಇಂಟರ್‌ನೆಟ್ ಲಭ್ಯ !

By Mahmad Rafik  |  First Published Aug 18, 2024, 12:03 PM IST

ಮೊಬೈಲ್‌ಗೆ ರೀಚಾರ್ಜ್ ಮಾಡಬೇಕಾದ್ರೆ  ನೂರು ಬಾರಿ ಯೋಚನೆ ಮಾಡುವ ಸನ್ನಿವೇಶ ಉಂಟಾಗಿದೆ. ಈ ಆಫರ್‌ನಲ್ಲಿ ಒಬ್ಬರು ರೀಚಾರ್ಜ್  ಮಾಡಿಕೊಂಡರೆ ಹೆಚ್ಚುವರಿಯಾಗಿ  ಮೂವರು ಈ  ಯೋಜನೆಯ ಲಾಭ ಪಡೆಯಬಹುದು.


ಬೆಂಗಳೂರು: ಜುಲೈ ಆರಂಭದಿಂದಲೇ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿ ಆದೇಶಿಸಿವೆ. ಹಾಗಾಗಿ ಬಳಕೆದಾರರು ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆಫರ್ ನೀಡುವ ಪ್ಲಾನ್ ಹುಡುಕಾಡುತ್ತಿದ್ದಾರೆ. ಮತ್ತೊಂದೆಡೆ ಬಳಕೆದಾರರು ನೆಟ್‌ವರ್ಕ ಬದಲಾವಣೆಗೆ ಮುಂದಾಗಿದ್ದಾರೆ. ನೀವು ಸಹ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಹುಡುಕು ತ್ತಿದ್ದೀರಾ? ಇಂದು ನಾವು ನಿಮಗಾಗಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಮಾಹಿತಿ ನೀಡುತ್ತಿದ್ದಾರೆ. ಒಬ್ಬರು ರೀಚಾರ್ಜ್ ಮಾಡಿಕೊಂಡ್ರೆ ಮನೆಯ ನಾಲ್ವರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಟೆಲಿಕಾಂ ಕಂಪನಿಗಳು ನೀಡುವ ಆಫರ್‌ಗಳಲ್ಲಿ ಫ್ಯಾಮಿಲಿ ರೀಚಾರ್ಜ್ ಬಗ್ಗೆ ಹೇಳುತ್ತಿದ್ದೇವೆ. ಆ ರೀಚಾರ್ಜ್ ಪ್ಲಾನ್ ಬೆಲೆ ಏನು ಮತ್ತು ನೀಡುವ ಅವಕಾಶಗಳು ಏನು ಎಂಬುದರ ಮಾಹಿತಿ ಇಲ್ಲಿದೆ. 

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್‌ಟೈಲ್ ಎರಡನೇ ಸ್ಥಾನದಲ್ಲಿವೆ. ಏರ್‌ಟೈಲ್ ತನ್ನ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ ಏರ್‌ಟೈಲ್ ಭಿನ್ನವಾದ ಆಫರ್‌ಗಳನ್ನು ನೀಡುತ್ತಿದೆ. ಈ ವಿಶೇಷ ಆಫರ್‌ಗಳಲ್ಲಿ ಒಂದು ಫ್ಯಾಮಿಲಿ ರೀಚಾರ್ಜ್ ಪ್ಯಾಕ್. ಈ ಪ್ಲಾನ್‌ನಡಿ ಬಳಕೆದಾರರು ನಾಲ್ಕು ಜನರ ಫೋನ್‌ಗಳನ್ನು ಏಕಕಾಲದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

Tap to resize

Latest Videos

undefined

Airtel Family Recharge Plans

ಏರ್‌ಟೈಲ್ ಪೋಸ್ಟ್‌ಪೇಡ್ ಫ್ಯಾಮಿಲಿ ರೀಚಾರ್ಜ್ ಬೆಲೆ 1,199 ರೂಪಾಯಿ  ಆಗಿದೆ. ಮತ್ತೊಂದು 1,399 ರೂ. ಪ್ಲಾನ್ ಏರ್‌ಟೈಲ್ ನೀಡುತ್ತಿದೆ. ಈ ಎರಡೂ ಪ್ಲಾನ್‌ನಲ್ಲಿ ಮೂರು ಮೊಬೈಲ್ ನಂಬರ್ ಲಂಕ್ ಮಾಡಬಹುದಾಗಿದೆ. ಒಂದು ರೀಚಾರ್ಜ್‌ನಿಂದ ನಾಲ್ಕು ಜನರಿಗೆ ಯೋಜನೆಯ ಲಾಭ ಸಿಗಲಿದೆ. 

Airtel Rs 1199 Plan Details

ಇದು ಮೂರು ಜನರಿಗೆ ಲಿಂಕ್ ಮಾಡುವ ಕೆನಕ್ಷನ್  ಆಗಿದೆ. ಏರ್‌ಟೈಲ್ ಸಂಖ್ಯೆಗೆ 1,199 ರೂಪಾಯಿ ರೀಚಾರ್ಜ್ ಮಾಡಿದ್ರೆ ಅನಿಯಮಿತ ಕರೆಗಳ ಲಾಭ ಸಿಗಲಿದೆ. ಪ್ರತಿದಿನ 100 ಎಸ್‌ಎಂಎಸ್, 30 ಜಿಬಿ ಡೇಟಾ ಸಿಗಲಿದೆ. ಇದರಲ್ಲಿ  100 ಜಿಬಿ ಡೇಟಾ ಪ್ರೈಮರಿ ಕನೆಕ್ಷನ್  ಮತ್ತು ಇನ್ನುಳಿದ ಮೂರು ಕನೆಕ್ಷನ್‌ಗೆ  30 ಜಿಬಿ ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಏರ್‌ಟೈಲ್ ಎಕ್ಸ್‌ಟ್ರೀಮ್, ಪ್ಲೇ ವಿಂಕ್ ಪ್ರೀಮಿಯಂ, ಆರು ತಿಂಗಳ ಅವಧಿಗೆ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯ ಉಚಿತ ಸಬ್‌ಸ್ಕ್ರಿಪ್ಷನ್ ಸಿಗಲಿದೆ.

Airtel Rs 1399 Plan Details

1,399 ರೂಪಾಯಿಯ ಪೋಸ್ಟ್ ಪೇಯ್ಡ್ ರೀಚಾರ್ಜ್ ಪ್ಲಾನ್‌ನಲ್ಲಿಯೂ ಮೂವರ ಜೊತೆ ಆಫರ್‌ಗಳನ್ನು  ಶೇರ್ ಮಾಡಿಕೊಳ್ಳಬಹುದಾಗಿದೆ. ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 150 ಎಸ್‌ಎಂಎಸ್, 30 ಜಿಬಿಯ ಡೇಟಾ ಸಿಗಲಿದೆ. ಏರ್‌ಟೈಲ್ ಎಕ್ಸ್‌ಟ್ರೀಮ್, ಪ್ಲೇ ವಿಂಕ್ ಪ್ರೀಮಿಯಂ, ಆರು ತಿಂಗಳ ಅವಧಿಗೆ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತು ಬೇಸಿಕ್ ನೆಟ್‌ಫ್ಲಿಕ್ಸ್ ( Amazon Prime Video, Disney Plus Hotstar, Netflix) ಆಫರ್ ನೀಡಲಾಗುತ್ತದೆ. 

click me!