ನೀವು 300 ರೂಪಾಯಿಗೂ ಅಧಿಕ ಕಡಿಮೆ ಬೆಲೆಯ ರೀಚಾರ್ಜ್ ಹುಡುಕುತ್ತಿದ್ದೀರಾ? ಪ್ರಮುಖ ನಾಲ್ಕು ಟೆಲಿಕಾಂಗಳ 249 ರೂ. ರೀಚಾರ್ಜ್‌ನಲ್ಲಿ ಯಾವುದು ಬೆಸ್ಟ್ ಪ್ಲಾನ್ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಎಲ್ಲಾ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ರೀಚಾರ್ಜ್ ಬೆಲೆಗಳನ್ನು ಏರಿಕೆ ಮಾಡಿದ್ದರ ಜೊತೆಗೆ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತದೆ. ಮಧ್ಯಮ ವರ್ಗದ ಬಹುತೇಕರು ತಿಂಗಳ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುತ್ತಿರುತ್ತಾರೆ. 28, 30, 56, 57, 90 ಅಥವಾ 365 ದಿನಗಳ ವ್ಯಾಲಿಡಿಟಿಯ ವಿಶೇಷ ಪ್ಲಾನ್‌ಗಳನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ. ಉಚಿತ ಕಾಲ್ ಜೊತೆಯಲ್ಲಿ ವಿವಿಧ ಆಫರ್‌ಗಳು ನಿಮಗೆ ಲಭ್ಯವಾಗುತ್ತವೆ. ಅಮೆಜಾನ್, ಸೋನಿ ಲಿವ್ ಸೇರಿದಂತೆ ವಿವಿಧ ಒಟಿಟಿಗಳನ್ನು ಉಚಿತವಾಗಿ ಲಾಗಿನ್ ಮಾಡಬಹುದಾಗಿದೆ. ಇಂದು ನಾವು ನಿಮಗೆ 300 ರೂಪಾಯಿಗೆ ದೇಶದ ಟೆಲಿಕಾಂ ಕಂಪನಿಗಳು ಯಾವೆಲ್ಲಾ ಆಫರ್ ನೀಡುತ್ತಿವೆ ಎಂಬುದರ ಮಾಹಿತಿ ನೀಡುತ್ತಿದ್ದೇವೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ನೀಡುವ ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಮಾಹಿತಿ ಇಲ್ಲಿದೆ. ಈ ಪ್ರಮುಖ ನಾಲ್ಕು ಕಂಪನಿಗಳು 249 ರೂಪಾಯಿ ಪ್ಲಾನ್ ಪರಿಚಯಿಸಿವೆ. ಈ ಪ್ಲಾನ್‌ನಲ್ಲಿ ಯಾವೆಲ್ಲಾ ಆಫರ್‌ಗಳಿವೆ ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ರಿಲಯನ್ಸ್ ಜಿಯೋ - Reliance Jio Rs 249 Plan
ರಿಲಯನ್ಸ್ ಜಿಯೋ ನೀಡಿರುವ 249 ರೂಪಾಯಿಯ ರೀಚಾರ್ಜ್ ಪ್ಲಾನ್ 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 100 ಎಸ್‌ಎಂಎಸ್ ಮತ್ತು 1 ಜಿಬಿ ಡೇಟಾ ಸಿಗುತ್ತದ. ಆ ದಿನದ ಡೇಟಾ ಕೊನೆಯಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 64Kbps ಆಗುತ್ತದೆ. ಜಿಯೋ ಟಿವಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ಏರ್‌ಟೈಲ್ - Airtel Rs 249 Plan
249 ರೂಪಾಯಿಯ ಏರ್‌ಟೈಲ್ ರೀಚಾರ್ಜ್ ಪ್ಲಾನ್ 24 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1 ಜಿಬಿ ಡೇಟಾ ಸಿಗಲಿದ್ದು, ಒಟ್ಟು 24 ಜಿಬಿ ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ Wynk Musicನ ಫ್ರೀ ಸಬ್‌ಸ್ಕ್ರಿಪ್ಷನ್ ಗ್ರಾಹಕರಿಗೆ ಸಿಗುತ್ತದೆ.
ವೊಡಾಫೋನ್ ಐಡಿಯಾ - Vi Rs 249 Plan
ವೊಡಾಫೋನ್ ಐಡಿಯಾ ಪರಿಚಯಿಸಿರುವ 249 ರೂಪಾಯಿ ಪ್ಲಾನ್ 24 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ ಒಂದು 1 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಕರೆ ಮಾಡಬಹುದಾಗಿದೆ. ಆ ದಿನ ಡೇಟಾ ಖಾಲಿಯಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 64Kbps ಆಗುತ್ತದೆ.
ಬಿಎಸ್‌ಎನ್‌ಎಲ್ - BSNL Rs 249 Plan
ಇನ್ನು ಬಿಎಸ್‌ಎನ್‌ಎಲ್ 249 ರೂಪಾಯಿಯ ಪ್ಲಾನ್ 45 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಇದರೊಂದಿಗೆ ಪ್ರತಿ ದಿನ 2 ಜಿಬಿ ಡೇಟಾ, 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಆದರೆ ಈ ಆಫರ್ ಎಲ್ಲಾ ಭಾಗದಲ್ಲಿಯೂ ಲಭ್ಯವಿಲ್ಲ. ಕೆಲವು ಸೀಮಿತ ಭಾಗದಲ್ಲಿ ಮಾತ್ರ ಈ ಪ್ಲಾನ್ ಆಕ್ಟಿವ್ ಆಗಿದೆ. ಇತ್ತೀಚೆಗೆ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಸೇವೆಯನ್ನು ನೀಡಲು ಆರಂಭಿಸಿದೆ. ಜಿಯೋ ರಿಚಾರ್ಜ್ ಬೆಲೆ ಏರಿಕೆ ಬೆನ್ನಲ್ಲೇ ಹಲವರು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಆಗುತ್ತಿದ್ದಾರೆ. ಜಿಯೋ, ಏರ್‌ಟೈಲ್, ವೊಡಾಫೋನ್ ಕಂಪನಿಗಳು ತಮ್ಮ ಗ್ರಾಹಕರಿಗೆ 5ಜಿ ಸೇವೆಯನ್ನು ನೀಡುತ್ತಿವೆ.
ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ