ನಿವೃತ್ತ ಯೋಧನನ್ನು ಬಲಿ ಪಡೆದ ರಸ್ತೆ ಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ಮುಚ್ಚಿದ ಜೆಡಿಎಸ್ ವಕ್ತಾರ

Published : Nov 19, 2022, 01:37 PM ISTUpdated : Nov 19, 2022, 01:40 PM IST
ನಿವೃತ್ತ ಯೋಧನನ್ನು ಬಲಿ ಪಡೆದ ರಸ್ತೆ ಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ಮುಚ್ಚಿದ ಜೆಡಿಎಸ್ ವಕ್ತಾರ

ಸಾರಾಂಶ

ಮಂಡ್ಯ ನಗರದಲ್ಲಿ ಇತ್ತೀಚೆಗೆ ನಿವೃತ್ತ ಯೋಧ ಕುಮಾರ್ ಎಂಬುವವರು ಕೂಡ ಗುಂಡಿ ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದರು.‌ ದುರ್ಘಟನೆ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಡೆಗೆ ಬೇಸತ್ತ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ಮಂಡ್ಯದ ರಸ್ತೆ ಗುಂಡಿಗಳನ್ನು ಮುಚ್ಚಿಸಿ‌ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ನ.19): ಗುಂಡಿಗೆ ಇರುವ ಊರು ಎಂದು ಕರೆಸಿಕೊಳ್ಳುವ ಮಂಡ್ಯ ಈಗ ರಸ್ತೆ ಬಗುಂಡಿಗಳಿರುವ ಊರು ಎಂದು ಕರೆಸಿಕೊಳ್ಳುತ್ತಿದೆ. ಅಷ್ಟರಮಟ್ಟಿಗೆ ಮಂಡ್ಯ ನಗರದ ತುಂಬಾ ಗುಂಡಿಗಳ ದರ್ಬಾರ್ ಶುರುವಾಗಿದೆ. ಇತ್ತೀಚೆಗೆ ನಿವೃತ್ತ ಯೋಧ ಕುಮಾರ್ ಎಂಬುವವರು ಕೂಡ ಗುಂಡಿ ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದರು.‌ ಆದರೆ ದುರ್ಘಟನೆ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಡೆಗೆ ಬೇಸತ್ತ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ಮಂಡ್ಯದ ರಸ್ತೆ ಗುಂಡಿಗಳನ್ನು ಮುಚ್ಚಿಸಿ‌ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲೆವೂ (Main Roads) ಸಂಪೂರ್ಣ ಗುಂಡಿಮಯವಾಗಿದ್ದು, ಪ್ರತಿನಿತ್ಯ ಹಲವು ಮಂದಿ ವಾಹನ ಸವಾರರು (Vehicle riders) ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ ನಿವೃತ್ತ ಯೋಧ ಕುಮಾರ್ (Kumar) ಎಂಬುವವರು ಕೂಡ ಗುಂಡಿ ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.‌ ಆದರೆ ದುರ್ಘಟನೆ (Tragic) ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ರಸ್ತೆ ದುರಸ್ತಿ ವಿಷಯದಲ್ಲಿ ಜಾಣ ಕುರುಡರಂತೆ (wise blind) ವರ್ತಿಸುತ್ತಾರೆ. ಅಧಿಕಾರಗಳ ನಡೆಗೆ ಬೇಸತ್ತ ಜೆಡಿಎಸ್ (JDS) ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ಮಂಡ್ಯದ ರಸ್ತೆ ಗುಂಡಿಗಳನ್ನು ಮುಚ್ಚಿಸಿ‌ದ್ದಾರೆ. 

ಶತ್ರುವಿನ ಗುಂಡಿಗೆ ಅಲ್ಲ, ರಸ್ತೆ ಗುಂಡಿಗೆ ಬಲಿಯಾದ ಯೋಧ!

ಗುಂಡಿ ಮುಚ್ಚಲು ವೆಟ್‌ಮಿಕ್ಸ್ ಬಳಕೆ: ಯೋಧನ ಸಾವಿನ ಬಳಿಕ ಮತ್ತೆ ಇಂತಹ ಸಾವು ನೋವುಗಳು ಸಂಭವಿಸಬಾರದೆಂದು ರಸ್ತೆ ಗುಂಡಿ (Road pothole) ಮುಚ್ಚುವ ಅಭಿಯಾನ ಆರಂಭಿಸಿರುವ ಮಹಾಲಿಂಗೇಗೌಡ (Mahalingegowda) ಮಂಡ್ಯ ನಗರ ಹಾಗೂ ತಾಲೂಕಿನ ಗುಂಡಿಬಿದ್ದ ರಸ್ತೆಗಳಿಗೆ ಮುಕ್ತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಕೆಲವು ಆಯ್ದ ರಸ್ತೆಗಳಿಗೆ ತೆರಳಿ ಅಲ್ಲಿನ ಗುಂಡಿಗೆ ವೆಟ್ ಮಿಕ್ಸ್ (Wetmix), ಜಲ್ಲಿಕಲ್ಲು ಹಾಕಿ ಜೆಸಿಬಿ, ಟ್ರಾಕ್ಟರ್ ಮೂಲಕ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಕಾರೆಮನೆ ಗೇಟ್ (Karemane Gate), ಕಲ್ಲಹಳ್ಳಿ, ಹೊಸಹಳ್ಳಿ ಸೇರಿ ನಗರದ ವಿವಿಧ ರಸ್ತೆಗಳ ಯಮರೂಪಿ ಗುಂಡಿಗೆ ಮುಕ್ತಿ ನೀಡಿದ್ದಾರೆ. ನಗರದಾದ್ಯಂತ ಇರುವ ಗುಂಡಿಗಳನ್ನು ಮುಚ್ಚಿಸುವ ಮಹಾಲಿಂಗೇಗೌಡರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ. 

Mandya : ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಚರಂಡಿ ನೀರು

ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ: ಇನ್ನು ತಮ್ಮ ಅಭಿಯಾನದ ಬಗ್ಗೆ ಮಾತನಾಡಿರುವ ಮಹಾಲಿಂಗೇಗೌಡ, ಯೋಧನ ಸಾವಿನ ನಂತರವೂ ಸರ್ಕಾರ (Government) ಎಚ್ಚೆತ್ತುಕೊಳ್ಳದೆ ಇರುವುದು ವಿಪರ್ಯಾಸವಾಗಿದೆ. ಮೊದಲು ರಸ್ತೆ ಸರಿಪಡಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಗುಂಡಿ ಬಿದ್ದ ರಸ್ತೆಯಲ್ಲಿ ಯೋಧ ಸಾವನ್ನಪ್ಪಿದ್ದು ಕರುಳು ಹಿಂಡುವಂತಹ ಘಟನೆ. ಇನ್ನುಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಹಾಗಾಗಿ ಸ್ವಂತ ಖರ್ಚಿನಲ್ಲಿ (Own expenses) ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡ್ತಿದ್ದೇನೆ. ಮಂಡ್ಯ ನಗರ ಹಾಗೂ ತಾಲೂಕಿನಾದ್ಯಂತ ಇರುವ ಗುಂಡಿಗಳನ್ನು ಮುಚ್ಚಿಸಲಾಗುವುದು. ಈ ಕೆಲಸಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

PREV
Read more Articles on
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ