Mandya ನಾರಾಯಣಗೌಡ ಆಪ್ತನಿಗೆ ಮತ್ತೊಮ್ಮೆ ಮೂಡಾ ಅಧ್ಯಕ್ಷ ಪಟ್ಟ

By Suvarna News  |  First Published Apr 20, 2022, 3:43 PM IST
  • ಮಂಡ್ಯ ಹಿಡಿತ ಸಾಧಿಸುವಲ್ಲಿ ನಾರಾಯಣಗೌಡ ಮತ್ತೆ ಯಶಸ್ವಿ.
  • KCN ಆಪ್ತ ಕೆ.ಶ್ರೀನಿವಾಸ್‌ಗೆ ಮತ್ತೊಮ್ಮೆ ಮುಡ ಅಧ್ಯಕ್ಷಗಿರಿ.
  • MLC ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಬದಲಾಗಿದ್ದ ಅಧಿಕಾರ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್,

ಮಂಡ್ಯ (ಏ.20): ಜೆಡಿಎಸ್ (JDS) ಭದ್ರಕೋಟೆ ಮಂಡ್ಯದಲ್ಲಿ (Mandya) ಮೊದಲ ಬಾರಿಗೆ ಕಮಲ ಬಾವುಟ ಹಾರಿಸಿದ್ದು ಕೆಸಿ ನಾರಾಯಣಗೌಡ (kc narayana gowda). ಕೆಆರ್ ಪೇಟೆ (KR Pete) ಉಪ ಚುನಾವಣೆಯಲ್ಲಿ ಭರ್ಜರಿ ದಾಖಲಿಸುವ ಮೂಲಕ ಜಿಲ್ಲೆಯ ಮೊದಲ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. ಬಳಿಕ ಸಚಿವರಾಗಿ ನೇಮಕಗೊಂಡ ನಾರಾಯಣಗೌಡ ಜಿಲ್ಲಾ ಉಸ್ತುವಾರಿ ಹೊಣೆಹೊತ್ತು ಮಂಡ್ಯದಲ್ಲಿ ಬಿಜೆಪಿ (BJP) ಬಲವರ್ಧನೆಗೆ ಮುಂದಾದರು. ಆದ್ರೆ ಕಳೆದ MLC ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಹಿನ್ನೆಲೆ ಮಂಡ್ಯ ಉಸ್ತುವಾರಿ ಕಳೆದುಕೊಂಡ ನಾರಾಯಣಗೌಡರಿಗೆ ಶಿವಮೊಗ್ಗ ಜವಾಬ್ದಾರಿ ನೀಡಲಾಗಿತ್ತು. ಜೊತೆಗೆ ಸಚಿವರ ಆಪ್ತರಿಗೆ ನೀಡಲಾಗಿದ್ದ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಸಿದುಕೊಂಡ ಬಿಜೆಪಿ ಹೈಕಮಾಂಡ್ ನಾರಾಯಣಗೌಡರಿಗೆ ಶಾಕ್ ನೀಡಿತ್ತು.

Tap to resize

Latest Videos

3 ತಿಂಗಳಲ್ಲಿ ಅಧಿಕಾರ ವಾಪಸ್,  ಆಪ್ತನಿಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ: MLC ಚುನಾವಣೆಯಲ್ಲಿ ಕನಿಷ್ಠ 50 ಮತಗಳನ್ನು ಪಡೆಯದ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲುಕಂಡಿದ್ರು, ಸಚಿವರ ತವರು ಕ್ಷೇತ್ರ ಕೆಆರ್ ಪೇಟೆಯಲ್ಲೂ ನಿರೀಕ್ಷಿತ ಮತಗಳು ಬಿಜೆಪಿ ಬಾರದೆ ಇದ್ದುದರಿಂದ ಕಾಂಗ್ರೆಸ್ ಜೊತೆ ನಾರಾಯಣಗೌಡ ಕೈ ಜೋಡಿಸಿದ್ರು ಎಂಬ ಆರೋಪಗಳು ಕೇಳಿಬಂದಿದ್ದವು. ಆರೋಪ ಹಿನ್ನೆಲೆ ಸಚಿವರ ಆಪ್ತರಿಗೆ ನೀಡಲಾಗಿದ್ದ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಸಿದುಕೊಂಡಿದ್ದ ಬಿಜೆಪಿ ಹೈಕಮಾಂಡ್ ನಾರಾಯಣಗೌಡರನ್ನ ಶಿವಮೊಗ್ಗ ಉಸ್ತುವಾರಿಯನ್ನಾಗಿ ನೇಮಿಸಿತ್ತು. ಆದ್ರೆ ಕೇವಲ 3 ತಿಂಗಳಲ್ಲಿ ಆಪ್ತರಿಗೆ ಮತ್ತೊಮ್ಮೆ ಅಧಿಕಾರ ಕೊಡಿಸುವಲ್ಲಿ KCN ಯಶಸ್ವಿಯಾಗಿದ್ದಾರೆ. ಮಂಡ್ಯ ಮೂಡಾ ಅಧ್ಯಕ್ಷಸ್ಥಾನದಿಂದ ಕೆಳಗಿಳಿದಿದ್ದ ಸಚಿವರ ಆಪ್ತ ಕೆ.ಶ್ರೀನಿವಾಸ್ ಮತ್ತೊಮ್ಮೆ ಮುಡ (Mandya Urban Development Authority ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಪ್ರಕರಣ, ಶ್ರಿರಾಮ ಸೇನಾ ಕಾರ್ಯಕರ್ತರಿಂದ ಪ್ರತಿ ದೂರು

ಆಪ್ತನಿಗೆ ಅಧಿಕಾರ ಕೊಡಿಸಿ ಸ್ವ-ಪಕ್ಷೀಯ ವಿರೋಧಿಗಳಿಗೆ ನಾರಾಯಣಗೌಡ ಟಾಂಗ್: ಸ್ಥಳೀಯ ಕೆಲ ಬಿಜೆಪಿ ನಾಯಕರು ಮಂಡ್ಯ MLC ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ಸಚಿವ ನಾರಾಯಣಗೌಡರ ಮೇಲೆ ಹೊರಿಸಿದ್ದರು. ಸೋಲಿಗೆ ಶಿಕ್ಷೆ ಎಂಬ ಹೈ ಕಮಾಂಡ್ ಕೂಡ ಸಚಿವರ ಆಪ್ತರಿಗೆ ನೀಡಲಾಗಿದ್ದ ಅಧಿಕಾರ ಕಸಿದುಕೊಂಡಿತ್ತು‌. ಆದರೆ ನಾರಾಯಣಗೌಡ ಕೇವಲ ಮೂರು ತಿಂಗಳಲ್ಲಿ ತನ್ನ ಆಪ್ತನಿಗೆ ಮಂಡ್ಯ ಮೂಡಾ ಅಧ್ಯಕ್ಷಗಿರಿ ವಾಪಾಸ್ ಕೊಡಿಸುವ ಮೂಲಕ ಸ್ವ-ಪಕ್ಷೀಯ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಪೋರ್ನ್ ವೆಬ್‌ಸೈಟ್‌‌ಗಳಲ್ಲಿ Satish Jarkiholi ಹೆಸರಲ್ಲಿ ವಿಡಿಯೋ ಅಪ್‌ಲೋಡ್!

ಮತ್ತೊಮ್ಮೆ ಮೂಡಾ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಶ್ರೀನಿವಾಸ್ ಅಭಿನಂದಿಸಿದ ಬಳಿಕ ಮಾತನಾಡಿದ ಸಚಿವ ನಾರಾಯಣಗೌಡ, ಕಾರಣಾಂತರದಿಂದ ಶ್ರೀನಿವಾಸ್ ಗೆ ಮುಡಾ ಅಧ್ಯಕ್ಷಗಿರಿ ಕೈತಪ್ಪಿತ್ತು. ಯಾರೋ ಕಿಡಿಗೇಡಿಗಳು ಮಾಡಿದ ಕೆಲಸದಿಂದ ಹಾಗೇ ಆಗಿತ್ತು. ಅದು ನನಗು ಗೊತ್ತಿರಲಿಲ್ಲ, ಶ್ರೀನಿವಾಸ್ ಹಾಗೂ ಸಿಎಂರಿಗು ಗೊತ್ತಿರಲಿಲ್ಲ. ಅದರ ಚರ್ಚೆ ಈಗ ಬೇಡ, ಈಗಾಗಲೇ ಹೈಕಮಾಂಡ್ ನಲ್ಲಿ ಚರ್ಚೆಯಾಗಿದೆ. ಇದೀಗ ಮತ್ತೆ ಪಕ್ಷಕ್ಕೆ ಶಕ್ತಿ ತುಂಬಲು ಶ್ರೀನಿವಾಸ್ ಗೆ ಜವಬ್ದಾರಿ ಕೊಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

click me!