Book Release ಅಮ್ಮನ ನೆನಪಿನ ಹೂಬತ್ತಿ; ಗೀತಾ ಬಿ ಯು ಅವರ 'ಅಮ್ಮನ ನೆನಪು ಸದಾ'

By Kannadaprabha News  |  First Published Dec 18, 2022, 12:17 PM IST

‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ, ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ’ ಅನ್ನೋದು ಎಂ ಆರ್‌ ಕಮಲ ಬರೆದ ಕವಿತೆಯೊಂದರ ಸಾಲು. ಅಮ್ಮ ಹಚ್ಚಿದ ಬೆಳಕಿನ ಬಗ್ಗೆ ಲೇಖಕಿ ಗೀತಾ ಬಿ ಯು ‘ಅಮ್ಮನ ನೆನಪು’ ಕೃತಿಯಲ್ಲಿ ಬರೆದಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ಈ ಕೃತಿಯ ಆಯ್ದಭಾಗ ಇಲ್ಲಿದೆ.


ಅಮ್ಮನ ನೆನಪಿನ ಹೂಬತ್ತಿ

‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ, ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ’ ಅನ್ನೋದು ಎಂ ಆರ್‌ ಕಮಲ ಬರೆದ ಕವಿತೆಯೊಂದರ ಸಾಲು. ಅಮ್ಮ ಹಚ್ಚಿದ ಬೆಳಕಿನ ಬಗ್ಗೆ ಲೇಖಕಿ ಗೀತಾ ಬಿ ಯು ‘ಅಮ್ಮನ ನೆನಪು’ ಕೃತಿಯಲ್ಲಿ ಬರೆದಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ಈ ಕೃತಿಯ ಆಯ್ದಭಾಗ ಇಲ್ಲಿದೆ.

Latest Videos

undefined

ಮೂರು ವರ್ಷ ಕæಳಗಿನ ಮಾತು. ಅಮ್ಮನಿಗೆ ಹಲ್ಲುನೋವು. ಡೆಂಟಿಸ್ಟ್‌ ಬಳಿ ಹೋಗಿದ್ವಿ. ಎರಡು ಹಲ್ಲುಗಳಿಗೆ ಕ್ಯಾಪ್‌ ಹಾಕಬೇಕು ಅಂದರು ಡಾಕ್ಟರು. ಮೂರು ರೇಂಜಿನದು ಇದೆ ಎಂದರು ಡಾಕ್ಟರು.

ಹನ್ನೆರಡೋ ಹದಿನೈದು ಸಾವಿರದ್ದೋ ಕ್ಯಾಪು. ಬೆಸ್ಟುಚೆನ್ನಾಗಿದೆ, ವರ್ಷಗಟ್ಟಲೆ ಬಾಳಿಕೆ ಬರುತ್ತೆ ಎಂದರು ಅವರು. ಅಮ್ಮ ನಕ್ಕಿದ್ದರು.

‘ನನಗೆ ಎಂಭತ್ತು ವರ್ಷ. ನಾನೇ ಅಷ್ಟುವರ್ಷ ಇರ್ತೀನೋ ಏನೋ. ಹಲ್ಲಿನ ಕ್ಯಾಪಿನ ಬಾಳಿಕೆ ಬಗ್ಗೆ ಏನು ಮಾತು ಆಡೋದು? ಕಮ್ಮಿ ಬೆಲೆಯದು ಹಾಕಿ ಸಾಕು’ ಎಂದು ನಗುತ್ತಲೇ ಹೇಳಿದ್ದರು. ಅದಾದ ಮೇಲೆ ಎರಡು ವರ್ಷ ಇದ್ದರು ಅಮ್ಮ, ಅಷ್ಟೇ.

ಈಗ ಕೊಂಚ ಹಲ್ಲು ನೋಯುತ್ತಿದೆ. ಅಮ್ಮನ ಮಾತು ಕಿವಿಯಲ್ಲಿ ಮೊರೆಯುತ್ತಿದೆ.

S. R. EKKUNDI ಜನ್ಮ ಶತಮಾನೋತ್ಸವ; ಮರೆಯಲಾರದ ಮರೆಯಬಾರದ ಸು ರಂ ಎಕ್ಕುಂಡಿ

*

ಅಣ್ಣ ಅಮ್ಮನ ಮದುವೆಯ ದಿನದ ಫೋಟೋ. (ಬಸ್‌ ಬಳಿ ತೆಗೆಸಿದ್ದಂತೆ) ನಮ್ಮಪ್ಪ ತುಂಬ ಹ್ಯಾಂಡ್‌ಸಮ್‌ ಆಗಿದ್ದರು. ಅಮ್ಮ ತುಂಬಾ ಸಣ್ಣಕ್ಕೆ ಇದ್ದರು. ಅಪ್ಪನಿಗಿಂತ ಬಣ್ಣ ಕಮ್ಮಿ.

ಮದುವೆಗೆ ಬಂದಿದ್ದ ನನ್ನ ಸೋದರತ್ತೆಯ ಅತ್ತೆ, ‘ಹುಡುಗಿ ಸುಮಾರು. ನಮ್ಮ ಉಪೇಂದ್ರನಿಗೆ ಇನ್ನೂ ಚೆಂದದ ಹುಡುಗಿ ಹುಡುಕಬೇಕಿತ್ತು’ ಎಂದಿದ್ದರಂತೆ. ಅದೂ ನಮ್ಮ ಅಮ್ಮನಿಗೆ ಗೊತ್ತಾಗುವ ಹಾಗೆ!

ಹಲವು ವರ್ಷಗಳ ನಂತರ, ‘ಪರ್ವಾಗಿಲ್ಲ ಹುಡುಗಿ. ಅವಳೂ ತಿದ್ದಿಕೊಂಡು ನಿಮ್ಮ ತಾಯಿಯ ಮನೆಯ ಸಂಸಾರ ಹೊರುವುದರಲ್ಲಿ ನಿಮ್ಮ ಅಣ್ಣನಿಗೆ ಸರಿಯಾದ ಜೊತೆಯಾದಳು, ಜಾಣೆ’ ಎಂದಿದ್ದರಂತೆ.

ಅಮ್ಮ, ಬೀಯಿಂಗ್‌ ಅಮ್ಮ, ‘ನೋಡು ಅವರ ಕೈಲೂ ಸೈ ಅನಿಸಿಕೊಂಡೆ’ ಎಂದು ಹೊಗಳಿದ್ದು ಮತ್ತೆ ನೆನಪಿಸಿಕೊಂಡು ಖುಷಿ ಪಡೋರು.

ಸಂತೋಷದ ಹಾಡು 175 ಸಲ ಕೇಳಿದ್ರೆ ದುಃಖ ಹಾಡನ್ನು 800 ಸಲ ಕೇಳುತ್ತಾರೆ; ಅಧ್ಯಯನ ಬಗ್ಗೆ ಕೆಎಸ್‌ ಪವಿತ್ರ ಮಾತು

*

ಎಫ್‌ಬಿ ಆಸ್ಕಿಂಗ್‌ ವಾಟ್ಸ್‌ ಆನ್‌ ಯುವರ್‌ ಮೈಂಡ್‌.. ಐ ಸೇ, ಅಮ್ಮ!

‘ಹತ್ತಿ ತಂದುಕೊಡು ಹೂಬತ್ತಿ ಮಾಡಿಕೊಡ್ತೀನಿ’ ಅನ್ನೋರು.

ಸಂಜೆ ಹೋದಾಗ ಬಿಡಿಸಿಟ್ಟಹತ್ತಿ ತುಂಬಿದ ಬುಟ್ಟಿಅದರೊಳಗೆ ಒಂದು ಕಡೆ ಹೊಸೆದ ಹೂಬತ್ತಿ ಪುಟ್ಟಬಟ್ಟಲಲ್ಲಿ ಹಾಲು ಇಟ್ಟುಕೊಂಡು ಟಿವಿ ನೋಡುತ್ತಾ ಸೋಫಾ ಮೇಲೆ ಕೂರುತ್ತಿದ್ದ ಅಮ್ಮ.

ಅವರು ಹೊಸೆದ ಹೂಬತ್ತಿಗಳು ಅವರ ಮಕ್ಕಳ ಮನೆಗಳಲ್ಲಿ ಅಷ್ಟೇ ಅಲ್ಲ, ಅದೆಷ್ಟೋ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗಿಸಿವೆ.

ಕೇಳಿದವರಿಗೆಲ್ಲ ಹೂಬತ್ತಿ ಕೊಟ್ಟು ಕಳಿಸಿದ್ದಾರೆ, ಅಮ್ಮ.

click me!