ಹಾವುಗಳನ್ನು ಕಂಡರೆ ಜೀವಭಯದಿಂದ ಓಡುವವರೇ ಹೆಚ್ಚಾಗಿರುವ ನಡುವೆ, ಇಲ್ಲೊಬ್ಬ ಬಾಲಕಿ ಗೊಂಬೆಗಳಂತೆ ಜೀವಂತ ಹಾವುಗಳನ್ನು ತಬ್ಬಿಕೊಂಡು ಮಲಗಿದ್ದಾಳೆ.
ನಾವು ಮಲಗಿದ್ದಾಗ ಹಾವಿನ ಕನಸು ಬಿದ್ದರೂ ಬೆಚ್ಚಿ ಬಿದ್ದು, ಕಿಟಾರನೇ ಕಿರುಚುತ್ತಾ ಎದ್ದು ಕುಳಿತುಕೊಳ್ಳುತ್ತೇವೆ. ಒಂದು ವೇಳೆ ಹಾವು ನಮ್ಮ ಬಳಿ ಸುಳಿದರೂ ಜೀವ ಬಾಯಿಗೆ ಬಂದಂತಹ ಅನುಭವ ಆಗುತ್ತದೆ. ಆದರೆ, ಇಲ್ಲೊಬ್ಬ ಬಾಲಕಿ ಆ್ಯರಿಯಾನಾ ತನ್ನ ಹಾಸಿಗೆಯ ಮೇಲೆ ಟೆಡ್ಡಿಬೇರ್ ಗೊಂಬೆಯ ರೀತಿ ಜೀವಂತ ಹಾವುಗಳನ್ನು ತಬ್ಬಿಕೊಂಡು ಮಲಗಿದ್ದಾಳೆ.
ಹೌದು, ಆ್ಯರಿಯಾನಾ ಎಂಬ ಈ ಬಾಲಕಿಗೆ ಆಟಕ್ಕೆ ಗೊಂಬೆಗಳು ಹಾಗೂ ಸ್ನೇಹಿತರಿಗಿಂತ ಮುಖ್ಯವಾಗಿ ಹಾವುಗಳನ್ನೇ ತನ್ನ ಗೆಳೆಯರನ್ನಾಗಿ ಮಾಡಿಕೊಂಡಿದ್ದಾಳೆ. ಪ್ರತಿನಿತ್ಯ ಶಾಲೆಗೆ ಹೋಗಿಉ ಬರುವುದನ್ನು ಬಿಟ್ಟರೆ, ಉಳಿದ ಎಲ್ಲ ಸಮಯವನ್ನೂ (ಆಟ, ಊಟ, ಓದು, ನಿದ್ರೆ ಎಲ್ಲವನ್ನೂ ಜೀವಂತ ಹಾಗೂ ದೈತ್ಯ ಹಾವುಗಳೊಂದಿಗೆ ಮಾಡುತ್ತಿದ್ದಾಳೆ. ಈ ಬಗ್ಗೆ ತನ್ನ ಇನ್ಸ್ಟಾಗ್ರಾಂನಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ಶಾಕಿಂಗ್ ಆಗಿ ಕಮೆಂಟ್ ಮಾಡಿದ್ದಾರೆ.
ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಬರೆದ ಹಿಂದೂ ಹುಲಿ: ಕಾನೂನಿನ ಲೋಪದೋಷ ಎತ್ತಿ ತೋರಿಸಿದ ಯತ್ನಾಳ್
ಹಾವು ಎಂದರೆ ಯಾರಿಗೆ ತಾನೇ ಭಯವಿಲ್ಲ? ಹಾವಿನ ನಿಗೂಢತೆ ಮತ್ತು ವಿಷ ಪ್ರವೃತ್ತಿಯಿಂದಾಗಿ ಎಲ್ಲರೂ ದೂರ ಸರಿಯುತ್ತಾರೆ. ಕಾಡು, ನಾಡು ಹಾಗೂ ಎಲ್ಲೆಡೆ ವಾಸಿಸುವ ಸರೀಸೃಪ ಜಾತಿಯ ಹಾವುಗಳನ್ನು ಕೆಲವರು ತಮ್ಮ ಮನೆಗಳಲ್ಲಿಟ್ಟುಕೊಂಡು ಪೋಷಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಬಾಲಕಿಗೆ ಹಾವುಗಳೊಂದಿಗೆ ಇರುವುದೇ ತನ್ನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾಳೆ. ಈಕೆಗೆ, ಹಾವುಗಳೇ ಸ್ನೇಹಿತರು, ಆಟಿಕೆಗಳು, ಬಂಧುಗಳೂ ಬಳಗವೂ ಎಲ್ಲವೂ ಎಂಬಂತೆ ಕಾಣುತ್ತಿದೆ. ಹಾವುಪ್ರಿಯೆ ಆ್ಯರಿಯಾನಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಕೆ ಹಾವುಗಳೊಂದಿಗೆ ಇರುವ ಸಾಕಷ್ಟು ವಿಡಿಯೋಗಳು ಇವೆ. ಅದರಲ್ಲಿ ಹಾವುಗಳೊಂದಿಗೆ ಆರಾಮಾಗಿ ಅಪ್ಪಿಕೊಂಡು ಮಲಗಿರುವ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ
ಅನೇಕರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸುಧಾರಿಸಿಕೊಳ್ಳಲು ಹಲವು ಗಂಟೆಗಳ ಸಮಯ ಬೇಕು. ಆದರೆ ಈ ಬಾಲಕಿ ಮಾತ್ರ ಜೀವಂತ ಹಾವುಗಳೊಂದಿಗೆ ಬದುಕುತ್ತಿದ್ದಾಳೆ. ಕಳೆದ ಒಂದು ವಾರದ ಹಿಂದೆ ಹಂಚಿಕೊಂಡಿರುವ ಬಾಲಕಿ ಆ್ಯರಿಯಾನಾ ಹಾವಿನ ಮೇಲೆ ಮಲಗಿರುವ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾಳೆ. ಈವರೆಗೆ 3 ಮಿಲಿಯನ್ ಜನರು ನೋಡಿದ್ದಾರೆ. ಅದರಲ್ಲಿ 76,720ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಇನ್ನು ಕೆಲವರು ವಿವಿಧ ರೀತಿಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಈ ಬಾಲಕಿಯ ಹೊಸ ರೀತಿಯ ಜೀವನ ಶೈಲಿಯನ್ನು ಒಪ್ಪಿಕೊಳ್ಳಲು ಜಾಸ್ತಿಯೇ ಕಷ್ಟವಾಗುತ್ತಿದೆ. ಈ ವಿಡಿಯೋ ನೋಡಿಯೇ ನಾನು ನಿದ್ರೆಯಲ್ಲಿ ಭಯಬೀಳಬಹುದು ಅಂತೆಲ್ಲಾ ಹೇಳುತ್ತಿದ್ದಾರೆ.