ಮನುಷ್ಯನನ್ನು ನಿರಾಳನನ್ನಾಗಿ ಮಾಡುವ ಶಕ್ತಿ ಕಲೆಗಿದೆ. ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯೂ ಕಲೆಗಿದೆ. ಹಾಗಾಗಿ ಕಲೆ ಆನಂದವನ್ನು ಕಂಡುಕೊಳ್ಳುವ ಮಹಾನ್ ಸಾಧನ ಎಂದು ಜ್ಯೋತಿಷಿ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ.
ವರದಿ : ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜು.9): ಮನುಷ್ಯನನ್ನು ನಿರಾಳನನ್ನಾಗಿ ಮಾಡುವ ಶಕ್ತಿ ಕಲೆಗಿದೆ. ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯೂ ಕಲೆಗಿದೆ. ಹಾಗಾಗಿ ಕಲೆ ಆನಂದವನ್ನು ಕಂಡುಕೊಳ್ಳುವ ಮಹಾನ್ ಸಾಧನ ಎಂದು ಜ್ಯೋತಿಷಿ ಶ್ರೀಕಂಠ ಶಾಸ್ತ್ರಿಗಳು ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಚೇತನಾ ನಾಟ್ಯ ನಿಕೇತನದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
undefined
ನಾಟ್ಯಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಮಹತ್ವವಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಇಂದು ಆನಂದವನ್ನು ಬೇರೆ ಬೇರೆ ಕಡೆಗಳಲ್ಲಿ ಹುಡುಕುವ ಪ್ರಯತ್ನ ಆಗುತ್ತಿದೆ. ಆದರೆ ಕಲೆಗೆ ಆನಂದವನ್ನು ಸೃಷ್ಟಿಸುವ ಶಕ್ತಿ ಇದೆ ಎಂದರು.
ಭಾರತದಂತೆ ಚೀನಾದಲ್ಲೂ ಹಳ್ಳಿ ಯುವಕರ ವರಿಸೋ ಹೆಣ್ಣೇ ಸಿಕ್ತಿಲ್ಲ!
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ ಸಂಗೀತ ಮತ್ತು ನಾಟ್ಯ ಕಲೆಯ ಎರಡು ಕಣ್ಣುಗಳಿದ್ದಂತೆ. ಸನಾತನ ಧರ್ಮದಿಂದ ಬಂದಿರುವ ನಾಟ್ಯ ಕಲೆಗೆ ಭರತ ಮುನಿ ಪಾವಿತ್ರ್ಯತೆಯ ಲೇಪನ ಕೊಟ್ಟರು. ಇಂತಹ ಕಲೆಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ ಎಂದರು
ಉಷಾ ದಾತರ್ ಮಾತನಾಡಿ ಚೇತನಾ ಯಾವತ್ತಿಗೂ ಗುರುವನ್ನು ಮರೆತಿಲ್ಲ. ಪ್ರತೀ ಗುರುಪೂರ್ಣಿಮೆ ದಿನ ಮನೆಗೆ ಬಂದು ಆಶೀರ್ವಾದ ಪಡೆದು ಹೋಗ್ತಾರೆ. ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡಿ. ಮನೆಯಲ್ಲಿ ಒಲೆ ಇರಬೇಕು. ಒಂದು ಹಿರಿತಲೆ ಬೇಕು, ಹಾಗೆ ಮನುಷ್ಯನಿಗೊಂದು ಕಲೆ ಇರಬೇಕು ಎಂಬ ಮಾಸ್ತಿಯವರ ಮಾತನ್ನು ಪುನರುಚ್ಚರಿಸಿ ಎಲ್ಲರನ್ನೂ ಮೈಮರೆಸುವ ಶಕ್ತಿ ಕಲೆಗಿದೆ, ಮಕ್ಕಳಿಗೆ ಯಾವುದೇ ಕಲೆಯನ್ನು ಕಲಿಯಲು ಆಸಕ್ತಿ ಇದ್ದರೆ ಕಲಿಸಿ ಎಂದು ಸಲಹೆ ನೀಡಿದರು.
ಈ ಸ್ಮಾರ್ಟ್‌ಫೋನ್ ಶಾಪ್‌ಲ್ಲಿ ಪ್ರತಿಯೊಬ್ಬರಿಗೆ 2 ಕೆಜಿ ಟೊಮೆಟೊ ಫ್ರಿ, ಆದರೆ ಒಂದು ಕಂಡೀಷನ್!
ವಿದೇಶಿಯರು ನಮ್ಮಲ್ಲಿ ಬಂದು ಕಲಿತು ವಿದೇಶದಲ್ಲಿ ಹೋಗಿ ನೃತ್ಯ ಶಾಲೆ ಆರಂಭಿಸಿದ್ದಾರೆ. ಅವರಿಗೆ ನಮ್ಮ ಕಲೆ, ಸಂಗೀತದಲ್ಲಿರುವ ಆರೋಗ್ಯದ ಗುಟ್ಟು ಗೊತ್ತಿದೆ. ನಾವು ವಿದೇಶಿ ಸಂಸ್ಕೃತಿ ಅನುಸರಿಸುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಇನ್ನು ಚೇತನಾ ನಾಟ್ಯಾಲಯ 25 ವರ್ಷ ಪೂರೈಸಿರುವ ಹಿನ್ನಲೆ ಸಂಸ್ಥೆಯಲ್ಲಿ ನೃತ್ಯ ಕಲಿಯುತ್ತಿರುವ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ರಾಜ್ಯದ ವಿವಿಧ ಭಾಗಗಳ ಜನಪದ ನೃತ್ಯ, ಶಾಸ್ತ್ರೀಯ ನೃತ್ಯ ಸೇರಿದಂತೆ ಹಲವು ಪ್ರಯೋಗಗಳನ್ನೊಳಗೊಂಡ ವಿವಿಧ ನೃತ್ಯ ಪ್ರಕಾರಗಳು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ವೇಳೆ ಚೇತನಾ ನಾಟ್ಯಾಲಯದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.