
ಪರಿಸರ ಸ್ನೇಹಿ ಪೇಪರ್ ಬ್ಯಾಗ್ (Paper bag) ಬಳಕೆ ಹೆಚ್ಚಾಗ್ತಿದೆ. ಪ್ಲಾಸ್ಟಿಕ್ (plastic) ಬಳಕೆಯನ್ನು ನಿಲ್ಲಿಸಿ ಕಾಗದ ಬಳಕೆ ಹೆಚ್ಚು ಮಾಡುವ ಉದ್ದೇಶದಿಂದ ಇಂದು ವಿಶ್ವ ಪೇಪರ್ ಬ್ಯಾಗ್ ದಿನ ಆಚರಣೆ ಮಾಡಲಾಗ್ತಿದೆ. ಕಾಗದ ಪರಿಸರ ಸ್ನೇಹಿ. ಬಳಕೆಯ ನಂತ್ರ ಅವುಗಳನ್ನು ಕಸಕ್ಕೆ ಹಾಕಿದ್ರೂ ಅವು ಪರಿಸರಕ್ಕೆ ಹಾನಿ ಮಾಡೋದಿಲ್ಲ.ಹಾಗಾಗಿಯೇ ಈಗ ಕಾಗದದ ಬ್ಯಾಗ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. 1852 ರಲ್ಲಿ, ಫ್ರಾನ್ಸಿಸ್ ವೂಲಿ ಪೇಪರ್ ಬ್ಯಾಗ್ ತಯಾರಿಸುವ ಯಂತ್ರವನ್ನು ಕಂಡುಹಿಡಿದರು. ಇದರ ನಂತ್ರ 1870 ರಲ್ಲಿ, ಮಾರ್ಗರೇಟ್ ಎಲೋಯಿಸ್ ಫ್ಲಾಟ್ ಬಾಟಮ್ ಪೇಪರ್ ಬ್ಯಾಗ್ ವಿನ್ಯಾಸಗೊಳಿಸಿದರು. ಮಾರ್ಗರೇಟ್ ಅನ್ನು ದಿನಸಿ ಚೀಲಗಳ ತಾಯಿ ಎಂದೂ ಕರೆಯುತ್ತಾರೆ. ಪ್ರಸ್ತುತ, ಅನೇಕ ಕಂಪನಿಗಳು ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಪೇಪರ್ ಬ್ಯಾಗ್ ಗಳನ್ನು ಜನರಿಗೆ ನೀಡ್ತಿವೆ. ಬ್ಲಿಂಕಿಟ್, ಜೆಪ್ಟೊ ಸೇರಿದಂತೆ ಅನೇಕ ಇ-ಶಾಪಿಂಗ್ ಕಂಪನಿಗಳು ಕಾಗದದ ಬ್ಯಾಗ್ ಗಳಲ್ಲಿ ವಸ್ತುಗಳನ್ನು ಕಳಿಸ್ತಿವೆ.
ಈಗ ಪ್ರತಿಯೊಬ್ಬರ ಮನೆಯಲ್ಲೂ ಕಾಗದದ ಬ್ಯಾಗ್ ಗಳನ್ನು ನಾವು ಕಾಣ್ಬಹುದು. ನಿಮ್ಮ ಮನೆಯಲ್ಲಿಯೂ ಕಾಗದದ ಬ್ಯಾಗ್ ರಾಶಿ ಬಿದ್ದಿದ್ದರೆ ಅದನ್ನು ಮರುಬಳಕೆ ಮಾಡಿ. ಅದು ಹೇಗೆ ಮಾಡೋದು ಅಂತ ನಾವು ಹೇಳ್ತೇವೆ.
ಪೇಪರ್ ಬ್ಯಾಗ್ಗಳನ್ನು ಮರುಬಳಕೆ ಮಾಡುವುದು ಹೇಗೆ? :
• ಈಗಿನ ದಿನಗಳಲ್ಲಿ ಹೊಸ ಸ್ಟೈಲ್ ನಲ್ಲಿ ಪೇಪರ್ ಬ್ಯಾಗ್ ಲಭ್ಯವಿದೆ. ಅದನ್ನು ನೀವು ಗಿಫ್ಟ್ ಕವರ್ ಆಗಿ ಬಳಕೆ ಮಾಡ್ಬಹುದು.
• ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಪದಾರ್ಥವನ್ನು ಇಡಲು ಈ ಬ್ಯಾಗನ್ನು ನೀವು ಬಳಸಬಹುದು.
• ಮನೆಯಲ್ಲಿರುವ ದೊಡ್ಡ ಪೇಪರ್ ಬ್ಯಾಗ್ ಗಳನ್ನು ಕತ್ತರಿಸಿ, ಅದಕ್ಕೊಂದು ಸುಂದರ ಶೇಪ್ ನೀಡಿ, ಸಣ್ಣ ಪೇಪರ್ ಬ್ಯಾಗ್ ಗಳಾಗಿ ಅದನ್ನು ಬಳಸಬಹುದು.
• ಬೀರು ಅಥವಾ ಡ್ರಾಯರ್ ಕೊಳಕಾಗುತ್ತೆ ಎನ್ನುವ ಕಾರಣಕ್ಕೆ ಅದ್ರ ಮೇಲೆ ಪೇಪರ್ ಇಟ್ಟು ನಂತ್ರ ವಸ್ತು ಅಥವಾ ಬಟ್ಟೆಯನ್ನು ಜನರು ಇಡ್ತಾರೆ. ನೀವು ಪೇಪರ್ ಬದಲು ಪೇಪರ್ ಬ್ಯಾಗ್ ಕತ್ತರಿಸಿ ಅದನ್ನು ಬಳಕೆ ಮಾಡಬಹುದು.
• ನೀವು ಕಸವನ್ನು ಹಾಕುವ ಜಾಗದಲ್ಲಿ ಈ ಪೇಪರ್ ಬ್ಯಾಗ್ ಇಡಿ. ಕಸ ಕೆಳಗೆ ಬಿದ್ದು ನೆಲ ಕೊಳಕಾಗುವುದು ತಪ್ಪುತ್ತದೆ. ನಿಮ್ಮ ಮನೆಯಲ್ಲಿ ಹೆಚ್ಚು ಪೇಪರ್ ಬ್ಯಾಗ್ ಬಿದ್ದಿದ್ದರೆ ಒಣ ಕಸ ಹಾಕಲು ನೀವು ಇದನ್ನು ಬಳಸಬಹುದು.
• ಕಾಂಪೋಸ್ಟ್ಗಾಗಿ ಕಾಗದದ ಚೀಲಗಳನ್ನು ಬಳಸಿ. ನೀವು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸಸ್ಯಗಳಲ್ಲಿ ಹಾಕಬಹುದು.
• ಈ ಪೇಪರ್ ಬ್ಯಾಗನ್ನು ಕವರ್ಗಳಂತೆ ಪುಸ್ತಕಗಳ ಮೇಲೆ ಹಾಕಬಹುದು. ಇದು ನಿಮ್ಮ ನೆಚ್ಚಿನ ಪುಸ್ತಕಗಳ ಕವರ್ಗಳನ್ನು ಹಾಳು ಮಾಡುವುದಿಲ್ಲ.
• ನೀವು ಕ್ರಿಯೇಟಿವ್ ಆಗಿ ಆಲೋಚನೆ ಮಾಡುವವರಾಗಿದ್ದರೆ ಪೇಪರ್ ಬ್ಯಾಗ್ ಗಳನ್ನು ಕಲೆ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸಲು ಬಳಸಬಹುದು.
• ಪೇಪರ್ ಬ್ಯಾಗ್ ಬಳಸಿ ಪೇಪರ್ ಆಭರಣಗಳನ್ನು ತಯಾರಿಸಬಹುದು.
• ಪೇಪರ್ ಬ್ಯಾಗ್ ಫೋಲ್ಡ್ ಮಾಡಿ ಒರಿಗಾಮಿ ಅಥವಾ ಮಕ್ಕಳಿಗಾಗಿ ಆಟಿಕೆಗಳನ್ನು ತಯಾರಿಸಿ.
• ಹಬ್ಬಗಳ ಸಮಯದಲ್ಲಿ ಮನೆಯ ಅಲಂಕಾರಕ್ಕಾಗಿ ಈ ಕಾಗದದ ಚೀಲಗಳಿಂದ ಹೂವುಗಳು ಅಥವಾ ವಿವಿಧ ವಸ್ತುಗಳನ್ನು ತಯಾರಿಸಬಹುದು.
• ಕಚೇರಿಗೆ ಊಟ ತೆಗೆದುಕೊಂಡು ಹೋಗಲು ಈ ಪೇಪರ್ ಬ್ಯಾಗ್ ಬಳಸಬಹುದು. ಅವು ಬಲವಾಗಿರುವ ಕಾರಣ ಸುಲಭವಾಗಿ ಹರಿಯುವುದಿಲ್ಲ.
• ಕಾಗದದ ಬ್ಯಾಗ್ ಕತ್ತರಿಸಿ, ಸರಿಯಾದ ಶೇಪ್ ನೀಡಿ, ಮಕ್ಕಳಿಗೆ ನೀಡಿ. ಇದನ್ನು ಮಕ್ಕಳು ಚಿತ್ರ ಬಿಡಿಸಲು, ಲೆಕ್ಕ ಬಿಡಿಸಲು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.