ನಿಂತು ನೀರು ಕುಡಿದ್ರೆ ಏನಾಗುತ್ತೆ? ಇಲ್ಲಿ ಒದ್ಕಳ್ಳಿ...

By Suvarna NewsFirst Published Sep 6, 2019, 3:14 PM IST
Highlights

ಯಾವತ್ತೂ ನಿಂತು ನೀರು ಕುಡೀಬೇಡಿ. ಯಾಕೆ ಎರಡೆರಡು ಸಲ ಓದ್ತಾ ಇದೀರಾ? ನಿಂತ ನೀರಲ್ಲ ಸ್ವಾಮಿ, ನಿಂತು ನೀರು ಕುಡಿಯಬೇಡಿ ಎಂಥಲೇ ಹೇಳಿದ್ದು. ಯಾಕೆ ಅಂತ ತಿಳ್ಕೋಬೇಕಾ?

ನೀರು ಜೀವಕ್ಕೆ ಮೂಲಾಧಾರ. ನಮ್ಮ ದೇಹವು ಸರಿಯಾಗಿ ಕೆಲಸ ಮಾಡಲು ಪ್ರತಿದಿನ ಕನಿಷ್ಠ 8 ಲೋಟ ನೀರಾದರೂ ಕುಡಿಯಲೇಬೇಕು ಎನ್ನುತ್ತದೆ ವೈದ್ಯಲೋಕ. ನೀರು ಕುಡಿಯಲೇಬೇಕು. ಇಲ್ಲದಿದ್ದಲ್ಲಿ ಒಂದಲ್ಲಾ, ಎರಡಲ್ಲಾ... ಹತ್ತು ಹಲವು ಕಾಯಿಲೆಗಳು ಒಕ್ಕರಿಸಿಕೊಳ್ಳುವುದು ಪಕ್ಕಾ. ಆದರೆ ನೀರನ್ನು ಹೇಗೆ ಕುಡಿಯಬೇಕು? 

ಅರೆ, ಹೇಗೆ ಎಂದರೇನರ್ಥ? ನೀರನ್ನು ಎತ್ತಿ ಗಟಗಟನೆ ಕುಡಿದರಾಯ್ತು.. ಅದೆಂಥಾ ಪ್ರಶ್ನೆ ಎನ್ನುತ್ತಿದ್ದೀರಾ? ನಾವು ಕೇಳಿದ್ದು ಹಾಗಲ್ಲ ಸ್ವಾಮಿ, ನಿಂತುಕೊಂಡು ಕುಡೀತೀರಾ, ಕುಳಿತು ಕುಡೀತೀರಾ ಎಂದು. ಹೇಗೆ ಕುಡಿದ್ರೂ ಒಂದೇ ಅಲ್ವಾ ಅಂತ ನೀವು ಕೇಳಬಹುದು. ಆದರೆ, ಖಂಡಿತಾ ಒಂದೇ ಅಲ್ಲ. ನೀರನ್ನು ನಿಂತು ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. 

ನಿಂತು ನೀರು ಕುಡಿಯಬಾರದೇಕೆ ?
ನಮಗೆಲ್ಲರಿಗೂ ಈ ಅಭ್ಯಾಸ ಇದ್ದೇ ಇದೆ. ಮನೆಗೆ ಹೋಗುತ್ತಿದ್ದಂತೆ ಅಡುಗೆಮನೆಯಲ್ಲಿ ನಿಂತು ಸುಯ್ ಎಂದು ನೀರು ಬಗ್ಗಿಸಿಕೊಂಡು ಗಟಗಟನೆ ಇಳಿಸಿ ರೂಂಗೆ ಓಡುವುದು. ನೀರಿನಿಂದ ಏನೂ ಅಪಾಯವಿಲ್ಲದ ಕಾರಣ ಅದನ್ನು ಹೇಗೆ ಸೇವಿಸುತ್ತೀವೆಂಬ ಬಗ್ಗೆ ನಾವಷ್ಟು ಗಮನ ಕೊಡಲು ಹೋಗುವುದಿಲ್ಲ. ಆದರೆ, ನಿಂತು ನೀರು ಕುಡಿಯುವುದರಿಂದ ಸಾಕಷ್ಟು ಪೋಷಕಾಂಶಗಳು ದೇಹಕ್ಕೆ ದೊರೆಯುವುದಿಲ್ಲ. ಜೊತೆಗೆ ಸಂಧಿನೋವಿನಂತ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಯಾವುದನ್ನೆೇ ಆಗಲಿ, ಹೇಗೆ ಸೇವಿಸುತ್ತೀವೆಂಬುದು ಮುಖ್ಯ. ಹಾಗೆಯೇ ನೀರು ಕೂಡಾ. 

ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ, ನಮ್ಮದೇಹವು ಕುಳಿತಾಗ ಹಾಗೂ ವ್ಯಾಯಾಮ ಮಾಡಿದಾಗ ಹೆಚ್ಚಿನ ಲಾಭ ಪಡೆಯುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ತಿನ್ನುವಾಗ, ಕುಡಿಯುವಾಗ ಕುಳಿತುಕೊಳ್ಳಿ ಎಂದು ಹೇಳುವುದು. 

ತಾಮ್ರದ ಬಾಟಲಿ ನೀರು ಕುಡಿದರೆ ಏನಾಗುತ್ತೆ?

ಸರಿಯಾದ ರೀತಿಯಲ್ಲಿ ಸೇವಿಸಿ
ದೇಹದಿಂದ ವಿಷಪದಾರ್ಥಗಳನ್ನು ಹೊರಹಾಕಲು ಹಾಗೂ ಎಲ್ಲ ಪೋಷಕಾಂಶಗಳನ್ನು, ಮಿನರಲ್‌ಗಳನ್ನು ಹೀರಿಕೊಳ್ಳಲು ನೀರು ಬೇಕು. ಇದಕ್ಕಾಗಿ ಇದನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ನಮ್ಮ ದೇಹ ಶೇ.70ರಷ್ಟು ನೀರಿನಿಂದಲೇ ಮಾಡಲ್ಪಟ್ಟಿದ್ದರೂ, ಪ್ರತಿ ದಿನ ಬಹಳಷ್ಟನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಅದನ್ನು ಮತ್ತೆ ತುಂಬಿಕೊಡುವುದು ನಮ್ಮ ಕೆಲಸ. ಆದರೆ, ನಿಂತು ನೀರು ಕುಡಿದಾಗ ಈ ಕೆಲಸ ಸಾಧ್ಯವಾಗುವುದಿಲ್ಲ. 

ಏಕೆ ಗೊತ್ತಾ?
ಸಾವಧಾನ
ನಿಂತು ನೀರು ಕುಡಿದಾಗ ನೀರು ನಮ್ಮ ದೇಹವ್ಯವಸ್ಥೆಯಲ್ಲಿ ಸುಯ್ ಎಂದು ಪಾಸಾಗಿಬಿಡುತ್ತದೆ. ಎಲ್ಲ ಅಂಗಗಳನ್ನೂ ತಲುಪಿ ಮಾಡಬೇಕಾದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆಗ ಹೊರ ಹೋಗಬೇಕಾದ ಕೊಳೆಕಸಗಳೆಲ್ಲ ಕಿಡ್ನಿ ಹಾಗೂ ಬ್ಲ್ಯಾಡರ್ ಮೇಲೆ ನಿಂತುಬಿಡುತ್ತವೆ. ಅಲ್ಲದೆ ನರವ್ಯವಸ್ಥೆಗೆ ಅಪಾಯದ ಸೂಚನೆ ದೊರೆತು ದೇಹವು ಒತ್ತಡ ಹಾಗೂ ಟೆನ್ಷನ್ ಅನುಭವಿಸುತ್ತದೆ. ಇದರಿಂದ ಪೋಷಕಾಂಶಗಳು ಹೋಗಬೇಕಾದಲ್ಲಿ ಹೋಗದೆ ವೇಸ್ಟ್ ಆಗುತ್ತವೆ. ಕೈ ಕಾಲು ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುವುದು ಜಾಸ್ತಿಯಾಗುತ್ತದೆ. ಅಲ್ಲದೆ ಇಂತಹ ಎಷ್ಟೋ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಮಣ್ಣಿನ ಮಡಿಕೆ ನೀರು ದೇಹಕ್ಕೆ ಏಕೆ ಬೇಕು?

ಬಾಯಾರಿಕೆ ಹೋಗಲ್ಲ
ಸಾಮಾನ್ಯವಾಗಿ ನೀರು ಕುಡಿಯುವುದೇ ಬಾಯಾರಿಕೆಯಾದಾಗ. ಆದರೆ, ನಿಂತು ನೀರು ಕುಡಿದಾಗ, ನೀರು ಸುಮ್ಮನೆ ಇಳಿದು ಹೋಗುವುದರಿಂದ, ಅಗತ್ಯವಿರುವ ಪೋಷಕಾಂಶ ಹಾಗೂ ವಿಟಮಿನ್ಸ್ ಲಿವರ್ ಹಾಗೂ ಜೀರ್ಣಾಂಗ ನಾಳಕ್ಕೆ ಹೋಗದಿರುವುದರಿಂದ ಬಾಯಾರಿಕೆ ತಣಿಯುವುದಿಲ್ಲ. ಅಲ್ಲದೆ, ನೀರು ವೇಗವಾಗಿ ಒಳನುಗ್ಗುವುದರಿಂದ ಆಮ್ಲಜನಕ ಮಟ್ಟ ಕೂಡಾ ಸಡನ್ ಆಗಿ ಏರುಪೇರಾಗುತ್ತದೆ. 

ಕುಳಿತು ಕುಡಿಯಿರಿ
ಹಾಗಾಗಿ, ಯಾವಾಗಲೂ ಕುಳಿತುಕೊಂಡೇ ನೀರು ಕುಡಿಯಿರಿ. ಇದರಿಂದ ನ್ಯೂಟ್ರಿಯೆಂಟ್ಸ್‌ಗಳು ನೇರ ಮೆದುಳಿಗೆ ತಲುಪಿ ಅದರ ಕೆಲಸಕ್ಕೆ ವೇಗ ನೀಡುತ್ತದೆ. ಇದು ಜೀರ್ಣಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಗ್ಯಾಸ್ ಕೂಡಾ ಆಗುವುದಿಲ್ಲ. ಟಾಕ್ಸಿನ್ಸ್ ಹೊರಹಾಕುತ್ತದೆ, ಆರೋಗ್ಯವನ್ನು ಹೆಚ್ಚಿಸುತ್ತದೆ. 

click me!