
ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನ ಅಪಹರಿಸಲು ಯತ್ನಿಸಿದ ಘಟನೆ ಜಗತ್ತಿನಾದ್ಯಂತ ದೊಡ್ಡ ಸುದ್ದಿ ಆಯಿತು. ಈ ಘಟನೆಯಲ್ಲಿ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯ ಸಾಹಸದಿಂದಾಗಿ ನೂರಾರು ಪ್ರಯಾಣಿಕರು ಜೀವ ಉಳಿಯುವಂತಾಯ್ತು. ಒಮನ್ ಮೂಲದ ಸಹಪೈಲಟ್ ನಿಂದಲೇ ಈ ದಾಳಿ ನಡೆದಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ಎಲ್ಲೆಡೆಯೂ ವಿಮಾನ ಪೈಲಟ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಪೈಲಟ್‌ಗಳ ದಿನಚರಿ, ಊಟ, ವಿಮಾನದ ನಿಯಮಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳು ಚರ್ಚೆಗೊಳ್ಳುತ್ತಿವೆ. ಒಂದೇ ವಿಮಾನದಲ್ಲಿರುವ ಇಬ್ಬರು ಪೈಲಟ್‌ಗಳಿಗೇಕೆ ಒಂದೇ ರೀತಿಯ ಊಟ ನೀಡುವುದಿಲ್ಲ? ನಿಮಗಿದು ಗೊತ್ತೇ? ಏಕೆ ಒಂದೇ ರೀತಿಯ ಊಟ ನೀಡಲಾಗುವುದಿಲ್ಲ ಎಂಬ ಅಚ್ಚರಿಯ ಕಾರಣ ಇಲ್ಲಿದೆ.
ವಿಮಾನದ ಕ್ಯಾಪ್ಟನ್‌ಗಳು ತಮಗೆ ಬೇಕಾದ ಊಟ ಮಾಡುವಂತಿಲ್ಲ. ಕರ್ತವ್ಯದಲ್ಲಿರುವ ಪೈಲಟ್‌ಗಳಿಗೆ ಆಹಾರ ಅವರ ಆದ್ಯತೆ ವಿಚಾರವಲ್ಲ. ಒಂದೇ ಸಮಯದಲ್ಲಿ ಇಬ್ಬರು ಪೈಲಟ್‌ಗಳು ಒಟ್ಟಿಗೆ ಕೂತು ಊಟ ಮಾಡುವುದಿಲ್ಲ. ವಿಮಾನದಲ್ಲಿ ಕ್ಯಾಪ್ಟನ್ ಮತ್ತು ಮೊದಲ ಅಧಿಕಾರಿ ಯಾವಾಗಲೂ ಒಂದೇ ರೀತಿಯ ಊಟವನ್ನು ಮಾಡುವುದಿಲ್ಲ. ಅಂದರೆ ವಿಮಾನದ ಇಬ್ಬರು ಪೈಲಟ್‌ಗಳಿಗೆ ಅನ್ನ-ಬೇಳೆ, ಚಾಪತಿ ಇದೇ ಊಟ ಮತ್ತೊಬ್ಬ ಪೈಲಟ್‌ಗೂ ಅದನ್ನೇ ನೀಡಲಾಗುವುದಿಲ್ಲ. ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಈ ನಿಯಮ ಏಕೆ ಜಾರಿಯಲ್ಲಿದೆ ಎಂಬುದನ್ನ ಇಲ್ಲಿ ತಿಳಿಯೋಣ.
ಒಂದೇ ರೀತಿಯ ಊಟ ಮಾಡುವುದರಿಂದ, ಒಂದು ವೇಳೆ ಆಹಾರ ಕೆಟ್ಟಿದ್ದರೆ ಇಬ್ಬರೂ ಪೈಲಟ್‌ಗಳು ಏಕಕಾಲಕ್ಕೆ ಅಸ್ವಸ್ಥಗೊಳ್ಳಬೇಕಾಗುತ್ತೆ. ಹೀಗಾಗಿ ಈ ಸಮಸ್ಯೆ ಆಗದಂತೆ ಕ್ಯಾಪ್ಟನ್ ಹಾಗೂ ಫಸ್ಟ್ ಆಫೀಸರ್‌ಗೆ ಪ್ರತ್ಯೇಕವಾಗಿ ಬೇರೆ ಬೇರೆ ರೀತಿ ಊಟ ನೀಡಲಾಗುತ್ತೆ. ಇದರಿಂದ ಒಬ್ಬನಿಗೆ ಫುಡ್ ಪಾಯ್ಸನ್ ಆದರೂ ಇನ್ನೊಬ್ಬ ಪೈಲಟ್ ಬೇರೆಯದ ಆಹಾರ ಸೇವಿಸಿರುವುದರಿಂದ ಇಬ್ಬರಿಗೂ ಏಕಕಾಲಕ್ಕೆ ತೊಂದರೆ ಉಂಟಾಗುವುದಿಲ್ಲ. ಇದರಿಂದ ಕಾಕ್ ಪಿಟ್ ನಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಊಟ ಮಾಡಿದ ನಂತರ ಒಬ್ಬ ಪೈಲಟ್ ಅನಾರೋಗ್ಯಕ್ಕೆ ಒಳಗಾದರೆ, ಬೇರೆ ಬೇರೆ ಊಟ ಮಾಡುವುದರಿಂದ ಇಬ್ಬರೂ ವಿಮಾನ ಸಿಬ್ಬಂದಿ ಒಂದೇ ಸಮಯದಲ್ಲಿ ಅಸ್ವಸ್ಥಗೊಳ್ಳುವ ಸಂದರ್ಭ ಬರುವುದಿಲ್ಲ.
ಒಬ್ಬ ಪೈಲಟ್‌ಗೆ ಕೋಳಿ ಮಾಂಸ ಸಿಗಬಹುದು, ಮತ್ತೊಬ್ಬರಿಗೆ ಪಾಸ್ತಾ, ಮೀನು ಅಥವಾ ಸಸ್ಯಾಹಾರಿ ಊಟ ಸಿಗಬಹುದು. ಆಹಾರ ಮೇನು ವಿಮಾನಯಾನ ಸಂಸ್ಥೆಯ ಆಂತರಿಕ ಭದ್ರತಾ ಕಾರ್ಯಗಳನ್ನು ಅವಲಂಬಿಸಿರುತ್ತದೆ. ಒಬ್ಬ ಪೈಲಟ್ ಊಟ ಮಾಡುತ್ತಿದ್ದರೆ, ಇನ್ನೊಬ್ಬರು ವಿಮಾನ ನಿಯಂತ್ರಣ, ಸಂವಹನ ಮತ್ತು ಇತರ ಕಾಕ್‌ಪಿಟ್ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿರುತ್ತಾರೆ.
ಪ್ರತ್ಯೇಕ ಊಟಗಳನ್ನು ನೀಡುವುದು ಸಾಮಾನ್ಯವಾಗಿ ವಿಮಾನಯಾನ ಸುರಕ್ಷತೆಯ ನಿಯಮವಾಗಿದೆ. ಜಾಗತಿಕ ವಾಯುಯಾನ ಅಧಿಕಾರಿಗಳು ವಿಧಿಸುವ ಕಡ್ಡಾಯ ಕಾನೂನು ಅವಶ್ಯಕತೆಯಲ್ಲ. ಈ ಮುನ್ನೆಚ್ಚರಿಕೆಗಳ ಹಿಂದಿನ ಮುಖ್ಯ ಉದ್ದೇಶವೆಂದರೆ ಕನಿಷ್ಠ ಒಬ್ಬ ಪೈಲಟ್ ಯಾವಾಗಲೂ ಸಜ್ಜಾಗಿರಿಸುವುದು, ವಿಮಾನವನ್ನು ಹಾರಿಸಲು ಸಾಧ್ಯವಾಗುವಂತೆ ಮಾಡುವುದು.
ನೆಲದ ಮೇಲೆ ಸಂಚರಿಸುವ ವಾಹನವಾದರೆ ರಸ್ತೆ ಮಧ್ಯೆ ನಿಲ್ಲಿಸಿ ಊಟ ಮಾಡಬಹುದು. ಇದಕ್ಕಾಗಿ ಒಬ್ಬನೇ ಡ್ರೈವರ್ ಸಾಕಾಗುತ್ತೆ. ಎತ್ತರ ಆಗಸದಲ್ಲಿ ಹಾರಾಟ ನಡೆಸುವ ಒಬ್ಬನೇ ಪೈಲಟ್ ಇದ್ದರೆ ಅದೆಷ್ಟು ಅಪಾಯಕಾರಿ ಅಲ್ಲವೇ? ಊಹಿಸಲು ಸಾಧ್ಯವಿಲ್ಲ. ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳಲ್ಲದೆ ಹೆಚ್ಚುವರಿಯಾಗಿ ಸಿಬ್ಬಂದಿ ಇದ್ದರು. ಸ್ಮಿತ್ ಮಚ್ಚರ್ ಮೇಲೆ ಅಟ್ಯಾಕ್ ನಡೆದಾಗ ಪ್ರಯಾಣಿಕರು ದಾಳಿಕೋರನ ಹಿಡಿದು ನೆಲಕ್ಕೆ ಕೆಡವಿದರು. ಈ ವೇಳೆ ತೀವ್ರವಾಗಿ ಕೆಳಕ್ಕೆ ಇಳಿದಿದ್ದ ವಿಮಾನ ಮತ್ತೆ ಮೇಲಕ್ಕೆ ಸರಿಯಾದ ಎತ್ತರಕ್ಕೆ ತಂದಿದ್ದು ವಿಮಾನದಲ್ಲಿದ್ದ ಇನ್ನೊಬ್ಬ ಸಿಬ್ಬಂದಿ. ಒಂದು ವೇಳೆ ಒಬ್ಬರು ಅಥವಾ ಇಬ್ಬರೇ ಪೈಲಟ್ ಇರುತ್ತಿದ್ದರೆ ಏನಾಗುತ್ತಿತ್ತು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.