Parenting Tips: ಪ್ರತಿದಿನ ಮಕ್ಕಳಿಗೆ ಒಂದು ಕಥೆ ಹೇಳಿದರೆ ಏನೆಲ್ಲಾ ಬದಲಾವಣೆಯಾಗುತ್ತದೆ? ತಜ್ಞರು ಬಿಚ್ಚಿಟ್ಟ ಅಚ್ಚರಿ ಮಾಹಿತಿ!

Published : Aug 07, 2026, 01:23 PM IST
Parents with children

ಸಾರಾಂಶ

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಮೊಬೈಲ್, ಟಿವಿಯಂತಹ ವಿದ್ಯುನ್ಮಾನ ಮಾಧ್ಯಮಗಳಿಂದ ದೂರ ಇಡುವುದು ಬಹುದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ಪ್ರತಿದಿನ ಮಕ್ಕಳಿಗೆ ಕಥೆ ಹೇಳುವುದರಿಂದ ಹಲವು ಪ್ರಯೋಜನಗಳಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ಎಂದರೇ ಖಂಡಿತ ನೀವು ಈ ಸ್ಟೋರಿ ಓದಲೇಬೇಕು.

ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರು ಪ್ರತಿಕ್ಷಣ ಯೋಚನೆ ಮಾಡುತ್ತಿರುತ್ತಾರೆ. ಆದರೆ ಮಕ್ಕಳ ಜೀವನವನ್ನು ಬದಲಾವಣೆ ಮಾಡುವ ಸಣ್ಣ ಸಣ್ಣ ಅಭ್ಯಾಸಗಳನ್ನು ಈಗಿನ ಪೋಷಕರು ಮರೆತು ಹೋಗುತ್ತಿದ್ದಾರೆ. ತಜ್ಞರ ಅನ್ವಯ, ಪ್ರತಿದಿನ ಒಂದು ಸಣ್ಣ ಕಥೆ ಹೇಳುವ ಮೂಲಕ ನಿಮ್ಮ ಮಕ್ಕಳಲ್ಲಿ ಅದ್ಭುತ ಬದಲಾವಣೆ ಕಾಣಬಹುದಂತೆ.

ಕಥೆಗಳನ್ನು ಹೇಳವುದರಿಂದ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆಗಳು ಕಂಡು ಬರುತ್ತದೆ?

ಇಂದಿನ ಹಲವು ಪೋಷಕರು ಮಕ್ಕಳ ಓದು, ಆಟ ಹಾಗೂ ಶಾಲೆಯ ಪಾಠದ ಬಗ್ಗೆ ಗಮನಹರಿಸುತ್ತಾರೆ. ಆದರೆ ಒಂದು ಸಣ್ಣ ಪ್ರಯತ್ನ ಅಥವಾ ಸಣ್ಣ ಅಭ್ಯಾಸವನನ್ನು ಪೋಷಕರು ಮರೆತು ಹೋಗುತ್ತಿದ್ದಾರೆ. ಅದು ಮಕ್ಕಳಿಗೆ ದಿನ ಒಂದು ಕಥೆ ಹೇಳುವುದು. ಇದು ಕೇವಲ ಮನರಂಜನೆಗಾಗಿ ಮಾತ್ರ ಅಲ್ಲ, ಇದರಿಂದ ಹಲವು ಲಾಭಗಳು ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಕಥೆ ಹೇಳುವುದರಿಂದ ಮಕ್ಕಳ ಮೇಲೆ ಏನೆಲ್ಲಾ ಪ್ರಭಾವ ಆಗುತ್ತೆ ಅಂತ ತಿಳಿದುಕೊಳ್ಳಲು ಈ ವರದಿ ಓದಿ.

ಕಥೆ ಹೇಳುವುದು ಮಕ್ಕಳಲ್ಲಿ ಊಹೆ, ಕಲ್ಪನಾ ಸಾಮರ್ಥ್ಯ ಹಾಗೂ ಗ್ರಹಿಕೆಯನ್ನು ಹೆಚ್ಚು ಮಾಡುತ್ತದೆ. ಕಥೆಯಲ್ಲಿ ಬರುವ ಪಾತ್ರಗಳು, ಕಾಡು, ಬೆಟ್ಟ, ಪ್ರಾಣಿಗಳು, ರಾಜಕರು, ಸಾಮಾನ್ಯ ಜನರನ್ನು ಮಕ್ಕಳು ತಮ್ಮ ಮನಸ್ಸಿನಲ್ಲಿಯೇ ಊಹಿಸಿಕೊಳ್ಳುತ್ತಾರೆ. ಇದು ಅವರ ಸೃಜನಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಚಿತ್ರಕಲೆ, ಹೊಸ ಹೊಸ ಯೋಚನೆ ಮಾಡುವುದು, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗ್ಗೆ ಹೆಚ್ಚು ಕಾರ್ಯಪ್ರವೃತ್ತರಾಗುತ್ತಾರೆ.

ಭಾಷೆಯ ಮೇಲಿನ ಹಿಡಿತ

ಪ್ರತಿದಿನ ಕಥೆ ಕೇಳುವುದರಿಂದ ಮಕ್ಕಳಲ್ಲಿ ಭಾಷೆಯ ಮೇಲಿನ ಹಿಡಿತ ವೇಗವಾಗಿ ಹೆಚ್ಚಾಗುತ್ತದೆ. ಹೊಸ ಹೊಸ ಪದಗಳು, ವಾಕ್ಯಗಳು, ಉಚ್ಚಾರಣೆ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಬೆಳೆಯುತ್ತದೆ. ಇದು ಪುಸ್ತಕ ಓದಬೇಕು ಎಂಬ ಭಾವನೆಯನ್ನು ಮೂಡಿಸುತ್ತದೆ. ಇದರೊಂದಿಗೆ ಶಾಲಾ ಶಿಕ್ಷಣ, ಸಂಭಾಷಣೆ ಕೌಶಲ್ಯಗಳು ಉತ್ತಮವಾಗಲು ನೆರವಾಗುತ್ತದೆ.

ಕಥೆಗಳು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿರಿಯರ ಬಗ್ಗೆ ಗೌರವ, ಜವಾಬ್ದಾರಿ, ಕ್ರಮಶಿಕ್ಷಣ, ನೈತಿಕತೆ, ಸಹಾಯ ಮಾಡುವ ಗುಣ, ಇತರರ ಬಗ್ಗೆ ದಯೆ ಹಾಗೂ ಪ್ರಮಾಣಿಕತೆಗಳನ್ನು ನೇರವಾಗಿ ಹೇಳುವುದಕ್ಕಿಂತ ಕಥೆಗಳ ಮೂಲಕ ಮಕ್ಕಳಿಗೆ ಹೇಳುವುದರಿಂದ ಇವು ಸುಲಭವಾಗಿ ಮಕ್ಕಳಿಗೆ ಆರ್ಥವಾಗುತ್ತದೆ. ಕಥೆಗಳಲ್ಲಿ ಬರುವ ಪಾತ್ರಗಳು, ಅವುಗಳು ಮಾಡುವ ತಪ್ಪುಗಳಿಂದ ಯಾವುದು ತಪ್ಪು-ಸರಿ ಎಂಬ ನಿರ್ಧಾರ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.

ಭಾವನೆ ಆರ್ಥೈಸಿಕೊಳ್ಳುವ ಸಾಮರ್ಥ್ಯ

ಕಥೆಗಳು ಮಕ್ಕಳ ಮನಸ್ಸಿನಲ್ಲಿ ಅಳವಾದ ಭಾವನೆ ಮೂಡಿಸಿ, ಭಾವೋದ್ವೇಗಗಳನ್ನು ಆರ್ಥೈಸಿಕೊಳ್ಳುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆಯುತ್ತದೆ. ಕಥೆಯಲ್ಲಿರುವ ಬರುವ ಪಾತ್ರಗಳು ನೋವುಪಟ್ಟರೆ, ಸಂತೋಷಗೊಂಡರೆ ಅಥವಾ ಭಯಪಟ್ಟರೆ ಮಕ್ಕಳು ಅವುಗಳನ್ನು ಅನುಭವಿಸುತ್ತಾರೆ. ಇದರಿಂದ ಇತರ ಭಾವನೆಗಳನ್ನು ಗೌರವಿಸುವ, ಎದುರಿಗೆ ಇರುವ ಜನರ ಬಗ್ಗೆ ಅಲೋಚನೆ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.

ಪ್ರತಿದಿನ ಕಥೆ ಹೇಳುವುದರಿಂದ ತಂದೆ-ತಾಯಿ ಹಾಗೂ ಮಕ್ಕಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಕಥೆ ಹೇಳುವ ಸಂದರ್ಭದಲ್ಲಿ ಮೊಬೈಲ್, ಟಿವಿಯಂತಹ ಡಿಜಿಟಲ್ ಗ್ಯಾಜೆಟ್ ಗಳನ್ನು ದೂರ ಮಾಡಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಾರೆ. ಈ ಸಮಯ ಮಕ್ಕಳಲ್ಲಿ ಭದ್ರತೆ, ಪ್ರೀತಿ, ಆತ್ಮೀಯತೆಯ ಭಾವನೆಗಳನ್ನು ಮೂಡಿಸುತ್ತದೆ.

ಏಕಾಗ್ರತೆ, ನೆನಪಿನ ಸಾಮರ್ಥ್ಯ ಹೆಚ್ಚಳ!

ಮಕ್ಕಳು ಕಥೆ ಕೇಳುವುದರಿಂದ ಅವರಲ್ಲಿ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ. ಒಂದು ಕಥೆಯನ್ನು ಸಂಪೂರ್ಣವಾಗಿ ಕೇಳಬೇಕು ಎಂದಾಗ ಅವರಲ್ಲಿ ಆಲಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ, ಇದು ಮಕ್ಕಳ ಶಾಲಾ ಕಲಿಕೆಯನ್ನು ಉತ್ತಮಗೊಳಿಸುತ್ತದೆ. ತರಗತಿಯಲ್ಲಿ ಪಾಠ ಕೇಳುವುದು, ಕೇಳಿದನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದನ್ನು ನೆನಪಿನಲ್ಲಿಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಇದು ಅಭ್ಯಾಸವಾದರೆ ಇದು ಅವರ ಶಿಕ್ಷಣಕ್ಕೆ ಬಲವಾಗಿ ಬದಲಾವಣೆಯಾಗುತ್ತದೆ.

ಸ್ಕ್ರೀನ್ ಟೈಮ್ ಕಡಿಮೆ ಮಾಡಲು, ಕಥೆ ಹೇಳುವುದು ಉತ್ತಮ ಕ್ರಮವಾಗಿದೆ. ನಿದ್ದೆಗೆ ಜಾರುವ ಮುನ್ನ ಮೊಬೈಲ್ ಅಥವಾ ಟಿವಿ ನೋಡುವುದರ ಬದಲು ಮಕ್ಕಳು ಕಥೆ ಕೇಳುವುದರಿಂದ ಹೆಚ್ಚು ಪ್ರಶಾಂತವಾಗಿ ನಿದ್ದೆ ಮಾಡುತ್ತಾರೆ. ಕಣ್ಣುಗಳ ಮೇಲಿನ ಒತ್ತಡ ಕಡಿಮೆ ಮಾಡಿ, ಮನಸ್ಸಿಗೆ ರಿಲ್ಯಾಕ್ಸ್ ಆಗುತ್ತದೆ. ಇದರಿಂದ ನಿದ್ದೆಯ ಪ್ರಮಾಣ ಹಾಗೂ ಗಾಡನಿದ್ರೆ ಮಾಡುವ ಅವಕಾಶ ಸಿಗುತ್ತದೆ.

ಆದರೆ ಮಕ್ಕಳಿಗೆ ಕಥೆ ಹೇಳುವ ಮುನ್ನ ಪೋಷಕರು ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ಭಯದ ಮೂಡಿಸುವ, ಹಿಂಸೆಯನ್ನು ಹೊಂದಿರುವ ಕಥೆಗಳ ಬದಲಿಗೆ ಅವರಿಗೆ ಪ್ರೇರಣೆ ನೀಡುವ, ಸಂತಸ ಮೂಡಿಸುವ, ಮಕ್ಕಳು ಕಲಿಯಬೇಕಾದ ನಿತ್ಯದ ಸಂಗತಿಗಳನ್ನು ಕಥೆಗಳ ಮೂಲಕ ಹೇಳಬೇಕು. ಕಥೆ ಹೇಳಿ ಮುಗಿಸಿದ ಬಳಿಕ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೆಲಬೇಕು, ನಿನಗೆ ಏನು ಇಷ್ಟ ಆಯ್ತು? ನೀನು ಅಲ್ಲಿ ಏನು ಮಾಡುತ್ತಿದೆ? ಎಂಬ ಪ್ರಶ್ನೆಗಳು ಕೇಳಿದರೆ ಮಕ್ಕಳ ಅಲೋಚನಾ ಸಾಮರ್ಥ್ಯ ಹೆಚ್ಚಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!
10th ಬೇಸಿಗೆ ರಜಾದಲ್ಲಿ ಸುಮ್ನೆ ಮಜಾ ಮಾಡಲು ಬಂದು ಸೂಪರ್ ಸ್ಟಾರ್ ಆಗಿದ್ದು ಹೇಗೆ ಈ ಸುಂದರಿ!