Sehwag: ಮೈದಾನದಲ್ಲಷ್ಟೇ ಅಲ್ಲ, ಲೈಫ್‌ನಲ್ಲೂ ಅಪ್ಪನೇ ಹೀರೋ! ಸೆಹ್ವಾಗ್ ಜನ್ಮದಿನಕ್ಕೆ ಮಗನ ಭಾವುಕ ಸಂದೇಶ!

Published : Oct 20, 2026, 12:22 PM IST
Virendra Sehwag

ಸಾರಾಂಶ

ವೀರೇಂದ್ರ ಸೆಹ್ವಾಗ್ ಮತ್ತು ಅವರ ಮಗ ಆರ್ಯವೀರ್ ಅವರ ಜನ್ಮದಿನದಂದು ಹಂಚಿಕೊಂಡ ಭಾವುಕ ಸಂದೇಶಗಳು ವೈರಲ್ ಆಗಿವೆ. ಸೆಹ್ವಾಗ್ ತಮ್ಮ ಮಗನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಆರ್ಯವೀರ್ ತಂದೆಯನ್ನೇ ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಕ್ರಿಕೆಟ್‌ನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಇಂದು ಫೀಯರ್‍‌ಲೆಸ್‌ ಕ್ರಿಕೆಟರ್‍‌, ವಿರೇಂದ್ರ ಸಹ್ವಾಗ್‌ ಅವರ ಬರ್ತಡೇ, ಅಷ್ಟೇ ಅಲ್ಲದೇ ನಿನ್ನೆ ಆರ್ಯವೀರ್‍ ಬರ್ತಡೇ ಈಗ ತಂದೆ-ಮಕ್ಕಳ ಭಾವುಕ ಸಂದೇಶಗಳು ಈಗ ವೈರಲ್‌ ಆಗಿವೆ. ಈ ನಿಟ್ಟಿನಲ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಾತ್ರವಲ್ಲ, ರಿಯಲ್‌ ಲೈಪ್‌ಲ್ಲೂ ಅಪ್ಪನೇ ಎಂಬ ಅವರ ಮಾತು, ಮಗನ ಕುರಿತು ಸೆಹ್ವಾಗ್‌ ಹೇಳಿದ ಕೆಲ ಸಂಗತಿಗಳು ಭಾವನಾತ್ಮಕವಾಗಿ ಅಭಿಮಾನಿಗಳನ್ನು ಕನೆಕ್ಟ್‌ ಆಗುತ್ತಿವೆ. ಅಲ್ಲದೇ ಇವರ ಕುಟುಂಬದ ಕೆಲ ಸಂಗತಿಗಳು ಇಂಟರೆಸ್ಟಿಂಗ್‌ ಆಗಿವೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬೆರಳು ಹಿಡಿದು ನಡೆಸಿದ ಅಪ್ಪ

ಅಕ್ಟೋಬರ್ 19 ರಂದು ಮಗ ಆರ್ಯವೀರ್ ಜನ್ಮದಿನಕ್ಕೆ ಭಾವನಾತ್ಮಕ ಪೋಸ್ಟ್ ಹಾಕಿದ್ದ ವೀರೇಂದ್ರ ಸೆಹ್ವಾಗ್, "ನಿನ್ನೆ ತಾನೇ ನಿನ್ನ ಕೈಹಿಡಿದು ಮುನ್ನಡೆಸಿದ್ದೆ, ಇಂದು ನೀನು ನಿನ್ನ ಕನಸುಗಳ ಬೆನ್ನಟ್ಟಿ ಓಡುತ್ತಿರುವುದನ್ನು ನೋಡಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದರು. ಒಬ್ಬ ತಂದೆಯಾಗಿ ನೀನು ನಿನ್ನದೇ ಆದ ಸ್ವಂತ ಗುರುತನ್ನು ರೂಪಿಸಿಕೊಳ್ಳುತ್ತಿರುವುದಕ್ಕಿಂತ ದೊಡ್ಡ ಸಂತೋಷ ನನಗೆ ಮತ್ತೊಂದಿಲ್ಲ" ಎಂದು ಸೆಹ್ವಾಗ್ ಮಗನಿಗೆ ಲೈಫ್ ಅಡ್ವೈಸ್ ನೀಡಿದ್ದಾರೆ.

ಮಗನಿಂದ ಅಪ್ಪನಿಗೆ ಗೌರವದ ಸಲಾಂ

ಅಪ್ಪನ ಮಾತುಗಳಿಗೆ ಅಷ್ಟೇ ಗೌರವ ಕೊಟ್ಟಿರುವ ಆರ್ಯವೀರ್, ಅಕ್ಟೋಬರ್ 20 ರಂದು ತಂದೆಯ 48ನೇ ಜನ್ಮದಿನದಂದು ಭಾವುಕರಾಗಿ ಶುಭ ಕೋರಿದ್ದಾರೆ. ಕ್ರಿಕೆಟ್‌ನಲ್ಲಿ ತಂದೆಯೇ ತಮಗೆ ಅತಿದೊಡ್ಡ ರೋಲ್ ಮಾಡೆಲ್ ಹಾಗೂ ಸದಾ ಬೆನ್ನೆಲುಬಾಗಿ ನಿಲ್ಲುವ ಶಕ್ತಿ ಎಂಬುದನ್ನು ಮಗನ ನಡೆ ತೋರ್ಪಡಿಸಿದೆ. ಸೆಹ್ವಾಗ್ ಎಂದಿಗೂ ತಮ್ಮ ಮಕ್ಕಳ ಮೇಲೆ ತಂದೆಯ ಸಾಧನೆಯ ಹಣೆಪಟ್ಟಿ ಅಥವಾ ಒತ್ತಡ ಹೇರಿಲ್ಲ. ಆದರೆ ಮಗ ಆರ್ಯವೀರ್ ಅಪ್ಪನ ಆಟದ ವೈಖರಿಯನ್ನು (ಡ್ರೈವ್ಸ್ ಮತ್ತು ಬ್ಯಾಕ್‌ಫುಟ್ ಶಾಟ್ಸ್) ಮೈಗೂಡಿಸಿಕೊಂಡು ಮೈದಾನದಲ್ಲಿ ಅಪ್ಪನಿಗೆ ನಿಜವಾದ ಉಡುಗೊರೆ ನೀಡುತ್ತಿದ್ದಾರೆ.

ರೋಲ್ ಮಾಡೆಲ್ ಮತ್ತು ಮೆಂಟರ್ ಕನೆಕ್ಷನ್

ಆರ್ಯವೀರ್‌ಗೆ ಸೆಹ್ವಾಗ್ ಕೇವಲ ಅಪ್ಪನಲ್ಲ, ಕ್ರಿಕೆಟ್ ಬದುಕಿನ ಮೊದಲ ಗುರು. ತಂದೆ ಯಶಸ್ಸಿನ ನೆರಳಿನಲ್ಲಿ ಕಳೆದುಹೋಗದೆ, ಅವರ ಗರಡಿಯಲ್ಲೇ ಪಳಗುತ್ತಾ ಅಪ್ಪನ ಆಟದ ಶೈಲಿ ಗೌರವದಿಂದ ಅಳವಡಿಸಿಕೊಳ್ಳುತ್ತಿರುವ ವಿಧೇಯ ಮಗನ ಚಿತ್ರಣ ಇಲ್ಲಿದೆ. ಸ್ಟಾರ್ ಮಕ್ಕಳ ಮೇಲಿರುವ ಸಾಮಾನ್ಯ ಒತ್ತಡವನ್ನು ಬದಿಗೊತ್ತಿ, ಮಗನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವ ಸೆಹ್ವಾಗ್ ನಡೆ ಮತ್ತು ಅಪ್ಪನ ನಂಬಿಕೆಯನ್ನು ಉಳಿಸಿಕೊಳ್ಳಲು ಮೈದಾನದಲ್ಲಿ ಕಷ್ಟಪಡುತ್ತಿರುವ ಮಗನ ಈ ಜರ್ನಿ ಇಂದಿನ ಜನರೇಷನ್‌ಗೆ ಒಂದು ಬೆಸ್ಟ್ ಲೈಫ್‌ಸ್ಟೈಲ್ ಉದಾಹರಣೆ.

ಕಾಲದ ಚಕ್ರ ಮತ್ತು ನೆನಪುಗಳ ಮೆರವಣಿಗೆ!

24 ಗಂಟೆಗಳ ಅಂತರದಲ್ಲಿ ಬರುವ ಇವರ ಜನ್ಮದಿನಗಳು ಇಬ್ಬರಲ್ಲೂ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಮಗನ ಬಾಲ್ಯದ ದಿನಗಳಿಂದ ಹಿಡಿದು ಇಂದಿನ ಯುವ ಕ್ರಿಕೆಟರ್ ಆಗುವವರೆಗಿನ ಹಂತ ಹಂತದ ಬೆಳವಣಿಗೆಯನ್ನು ಅಪ್ಪ-ಮಗ ಇಬ್ಬರೂ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನೆನೆದು ಭಾವುಕರಾಗಿದ್ದಾರೆ. ಸೆಹ್ವಾಗ್ ಮೈದಾನದಲ್ಲಿ ಎಷ್ಟೇ ಬಿಂದಾಸ್ ಆಗಿದ್ದರೂ, ಮಗನ ಸಾಧನೆ ಮತ್ತು ಆತನ ಜನ್ಮದಿನದ ವಿಷಯಕ್ಕೆ ಬಂದಾಗ ಅತ್ಯಂತ ಭಾವುಕ ತಂದೆಯಾಗುತ್ತಾರೆ. ಮಗ ಆರ್ಯವೀರ್ ಕೂಡ ಅಪ್ಪನ 48ನೇ ಹುಟ್ಟುಹಬ್ಬಕ್ಕೆ ಅತಿ ಹೆಚ್ಚು ಪದಗಳನ್ನು ಬಳಸದೆ, ಅತ್ಯಂತ ಸರಳ ಹಾಗೂ ಅಷ್ಟೇ ಗೌರವಯುತವಾದ ಶುಭಾಶಯದ ಮೂಲಕ ತನ್ನ ಅಕ್ಕರೆಯನ್ನು ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಾಸವಾಳ ಗಿಡದಲ್ಲಿ ಹೂ ಬಿಡುತ್ತಿಲ್ಲವೇ? ಈ ತರಕಾರಿಯ ಸಿಪ್ಪೆ ಒಣಗಿಸಿ ಪುಡಿ ಮಾಡಿ ಹಾಕಿ
ರೇಷ್ಮೆ ಸೀರೆ ಆಸೆಯಿಂದ ಅಜ್ಜಿಯ ತಿಜೋರಿ ತೆರೆಸಿದ ಮೊಮ್ಮಗಳು; ದೃಶ್ಯ ನೋಡಿ ಕಣ್ಣೀರಿಟ್ಟ ಮಹಿಳೆಯರು