ಜಗತ್ತಿನ ಮೊಟ್ಟ ಮೊದಲ ಭೂತಳದ ಹೊಟೇಲ್ ಹೇಗಿದೆ ನೋಡಿ!

By Web Desk  |  First Published Nov 19, 2018, 9:23 PM IST

ಹೊಟೇಲ್ ಪ್ರಪಂಚ ಇಂದು ಎಲ್ಲಿಂದ ಎಲ್ಲಿಯವರೆಗೋ ಬೆಳೆದು..ಮೀರಿ ನಿಂತಿದೆ.  ಆಕಾಶಲ್ಲಿ ಹೊಟೇಲ್.. ನೀರೊಳಗೆ ಹೊಟೇಲ್ ಹೀಗೆ ಒಂದೆಲ್ಲಾ ಹತ್ತು ಬಗೆಯ ವಿನ್ಯಾಸಗಳನ್ನು ನೋಡಿದ್ದೇವೆ.. ಆದರೆ ಈ ಅಂಡರ್ ಗ್ರೌಂಡ್ ನಲ್ಲಿರುವ  ಹೊಟೇಲ್ ನೋಡಿದ್ದೀರಾ...


ಚೀನಾದ ಶಾಂಘೈನಲ್ಲಿ ಪ್ರವಾಸಿಗರನ್ನು, ಗ್ರಾಹಕರನ್ನು ಬರಮಾಡಿಕೊಳ್ಳಲು ಈ ಹೊಟೇಲ್ ಸಿದ್ಧವಾಗಿ ನಿಂತಿದೆ. ಹಾಗಾದರೆ ಇದರ ವಿಶೇಷ ಏನು? ಇಲ್ಲಿದೆ ಸಂಪೂರ್ಣ ವಿವರ.. ಇದು ವಿಶ್ವದ ಮೊಟ್ಟ ಮೊದಲ ಭೂತಳದ ರೆಸಾರ್ಟ್. ಭೂತಳದಿಂದ 300 ಡಿ ಕೆಳಗೆ ನಿರ್ಮಾಣವಾಗಿದೆ.

32 ಕಿಮೀ ದೂರ:  ಶಾಂಘೈನಿಂದ 32 ಕಿಮೀ ದೂರದಲ್ಲಿ ಈ ಹೊಟೇಲ್ ನಿರ್ಮಾಣವಾಗಿದೆ. ದೊಡ್ಡ ಅಕ್ವೇರಿಯಂ ಸಹ ಒಳಗೊಂಡಿರುವ ಹೊಟೆಲ್ ನಲ್ಲಿ 18 ಅಂತಸ್ತುಗಳಿವೆ. 

Tap to resize

Latest Videos

ಬೆಂಗಳೂರಿನಲ್ಲಿ ಹೋಗಲೇಬೇಕಾದ ಹೊಟೇಲ್‌ಗಳಿವು..

ದರ ಎಷ್ಟು? ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಎಲ್ಲ ದಿನಗಳ ಎಲ್ಲ ರೂಂ ಗಳು ಈಗಾಗಲೇ ಬುಕ್ ಆಗಿವೆ. ಒಂದು ರೂಂ ಬಾಡಿಗೆ ದರ ದಿನಕ್ಕೆ ಕೇವಲ 39 ಸಾವಿರ ರೂ. ಮಾತ್ರ!

ಹಳೆಯ ಗಣಿ: ಗಣಿಗಾರಿಕೆ ನಡೆದ ದೊಡ್ಡ ಜಾಗದಲ್ಲೇ ಈ ಹೊಟೇಲ್ ನಿರ್ಮಾಣವಾಗಿದೆ.  ಚಿಕ್ಕ ಜಲಪಾತ ಮತ್ತು ಒಂದು ದಿಕ್ಕಿನಲ್ಲಿ ಕಲ್ಲು ಬಂಡೆಗಳನ್ನು ಒಳಗೊಂಡಿರುವುದು ಈ ಹೊಟೆಲ್ ವಿಶೇಷ.

336 ಕೋಣೆಗಳು: ಹೊಟೆಲ್ ನಲ್ಲಿ ಇರುವ 336 ಕೋಣೆಗಳನ್ನು ವೃತ್ತಾಕಾರದಲ್ಲಿ  ಕಟ್ಟಲಾಗಿದೆ. ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶ ಇದೆ. ಹಾಗಾದರೆ ಹೇಗಿದೆ ಹೊಟೆಲ್ ನೀವು ಒಮ್ಮೆ ನೋಡಿಕೊಂಡು ಬನ್ನಿ..


 

click me!